ಜ್ಯೋತಿ ಅರ್ಬನ್‌ ಸೊಸಾಯಿಟಿ 7ನೇ ಶಾಖೆಗೆ ಚಾಲನೆ

KannadaprabhaNewsNetwork |  
Published : Jun 05, 2025, 01:49 AM IST
ಸಾವಳಗಿ: | Kannada Prabha

ಸಾರಾಂಶ

ಜ್ಯೋತಿ ಅರ್ಬನ್‌ ಕೋ-ಆಪ್ ಕ್ರೇಡಿಟ್ ಸೊಸಾಯಿಟಿ ಪ್ರಧಾನ ಕಚೇರಿ ಮೂಡಲಗಿಯ 7ನೇ ಶಾಖೆಗೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾವಳಗಿ

ಈ ದಿನಮಾನಗಳಲ್ಲಿ ಸಹಕಾರ ಸಂಘಗಳು ಸಮಾಜಕ್ಕೆ ಕೊಡಮಾಡುತ್ತಿರುವ ಕೊಡುಗೆ ಅಗಾಧವಾದದ್ದು. ಅಂತಹ ಸೊಸಾಯಿಟಿಗಳಲ್ಲಿ ಜ್ಯೋತಿ ಅರ್ಬನ್‌ ಸೊಸಾಯಿಟಿಯು ಬಹಳಷ್ಟು ಸಾಧನೆ ಮಾಡಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಜ್ಯೋತಿ ಅರ್ಬನ್‌ ಕೋ-ಆಪ್ ಕ್ರೇಡಿಟ್ ಸೊಸಾಯಿಟಿ ಪ್ರಧಾನ ಕಚೇರಿ ಮೂಡಲಗಿಯ 7ನೇ ಶಾಖೆಗೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಅವರು ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಜನರ ಏಳ್ಗೆಗೆ ಎರವಾಗಲು ಮೂಡಲಗಿಯಿಂದ ಸಾವಳಗಿಯವರೆಗೆ 7 ಶಾಖೆಯನ್ನು ವಿಸ್ತರಿಸುತ್ತಾ ಬಂದಿದೆ. ಬಹಳ ವಿಶ್ವಾಸದಿಂದ ಜನರು ಹಣವನ್ನು ಇರಿಸುತ್ತಾರೆ. ಅದಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಸಹಕಾರ ಸಂಘಗಳ ಕಾರ್ಯವಾಗಬೇಕು. ಎಲ್ಲಾ ಆಯಾಮಗಳಲ್ಲಿ ಜನರಿಗೆ ನೆರವಾಗಬೇಕೆಂದರು.

ಇದೇ ಸಂದರ್ಭದಲ್ಲಿ ನಿರ್ದೇಶಕರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ಬೆಂಗಳೂರು ಮುಖ್ಯ ಅತಿಥಿಗಳಾಗಿ ಡಾ.ಸಂಜಯ ಹೊಸಮಠ ಮಾತನಾಡಿ, ಸೊಸಾಯಿಟಿಗಳು ಶಾಖೆಗಳನ್ನು ಪ್ರಾರಂಭಿಸಿದರೆ ಸಾಲದು ಸಮಾಜ ಸೇವೆಯಲ್ಲಿ ತೊಡಗಬೇಕು. ಆ ಕಾರ್ಯದಲ್ಲಿ ಜ್ಯೋತಿ ಸೊಸಾಯಿಟಿಯು ಮುಂದಿದೆ. ಉತ್ತಮ ಸಲಹಾ ಸಮಿತಿ ಹೊಂದಿರುವ ಸಾವಳಗಿ ಶಾಖೆಯು ಜನರ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ರೀತಿಯಲ್ಲಿ ವ್ಯವಹರಿಸುವ ಮೂಲಕ ಯಶಸ್ಸಿ ಹೊಂದಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಜಮಖಂಡಿ ನಗರಸಭೆ ಅಧ್ಯಕ್ಷ ಪರಮಾನಂದ ಗೌರೊಜಿ, ಸುಭಾಸ ಬೆಳಕೂಡ, ಬಾಪುಗೌಡ ಬುಲಗೌಡ, ಬಸಪ್ಪ ಬ್ಯಾಡಗಿ, ಸುರೇಶ ಮಾಳಿ, ಪ್ರಕಾಶ ರಡರಟ್ಟಿ, ಈಶ್ವರಗೌಡ ಪಾಟೀಲ, ಬಸುಗೌಡ ಹೊನವಾಡ, ಸಂಗಪ್ಪ ಕೋಲಕಾರ ಸೇರಿದಂತೆ ಅನೇಕರು ಇದ್ದರು. ನಮ್ಮ ಸೊಸಾಯಿಟಿಯು ಆರ್ಥಿಕವಾಗಿ ತೊಂದರೆಗಿಡಾದವರಿಗೆ ಸಹಾಯ ಮಾಡಲು ಸ್ಥಾಪನೆಗೊಂಡಿದೆ. 20 ವರ್ಷಗಳ ಕಾಲ ಶ್ರಮಿಸುತ್ತಾ ಬಂದಿದೆ. ಹಾಗಾಗಿಯೇ ಇನ್ನೂಳಿದ ಸೊಸಾಯಿಟಿಗಳಿಗೆ ಮಾದರಿಯಾಗಿ ಬೆಳೆಯುತ್ತಿದೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ ಬಡ ಮಕ್ಕಳಿಗೆ ಪ್ರೋತ್ಸಹಾ ಧನವನ್ನು ಕೊಡಲಾಗುತ್ತದೆ.ಮಲ್ಲಪ್ಪ ಮದಗುಣಕಿ, ಮೂಡಲಗಿ ಶಾಖೆಯ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ