ಆರ್ಥಿಕ ವ್ಯವಸ್ಥೆಯ ಪೂರಕ ಬಜೆಟ್

KannadaprabhaNewsNetwork |  
Published : Jul 24, 2024, 12:23 AM IST
48 | Kannada Prabha

ಸಾರಾಂಶ

ಈ ಬಾರಿ ಎಂಎಸ್ಎಂಇಗೆ ಪ್ರಧಾನ್ಯತೆ ನೀಡಿರುವುದು ಗಮನಾರ್ಹ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಬಜೆಟ್ ಆರ್ಥಿಕ ವ್ಯವಸ್ಥೆಗೆ ಪೂರಕ. ಈ ಬಾರಿಯ ಬಜೆಟ್ ದೇಶದ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ತಿಳಿಸಿದ್ದಾರೆ.

ಈ ಬಾರಿ ಎಂಎಸ್ಎಂಇಗೆ ಪ್ರಧಾನ್ಯತೆ ನೀಡಿರುವುದು ಗಮನಾರ್ಹ. ಮುದ್ರಾ ಲೋನ್ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಿರುವುದು, ಕೈಗಾರಿಕಾ ಉತ್ಪನ್ನಗಳ ಖರೀದಿಗೆ ಸಾಲ ಸೌಲಭ್ಯ, ಸಿದ್ಧಿ ಬ್ಯಾಂಕ್ ಗಳ ಹೆಚ್ಚಳ ಹಾಗೂ ಬಡ್ಡಿರಹಿತ ಸಾಲ ಸೌಕರ್ಯ ಗಳಿಕೆ ಒತ್ತು ನೀಡಿರುವುದು ಮತ್ತು 12 ಕೈಗಾರಿಕಾ ಪಾರ್ಕ್ ಸ್ಥಾಪನೆ ಹಾಗೂ ಕೈಗಾರಿಕಾ ತರಬೇತಿಗಳ ಕೇಂದ್ರಗಳ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ.

ಬೆಂಗಳೂರು- ಹೈದ್ರಾಬಾದ್ ಕೈಗಾರಿಕಾ ಕಾರಿಡಾರ್ ಕೂಡ ಸ್ವಾಗತಾರ್ಹ. ಉದ್ಯೋಗಾವಾಕಾಶ ಹಾಗೂ ಕೌಶಾಲ್ಯಾಭಿವೃದ್ಧಿಗೆ ಒತ್ತು ನೀಡಿರುವುದು, ಯುವಕರಿಗೆ ಕೌಶಲ್ಯ ತರಬೇತಿ ಹಾಗೂ ಸಾಲ ಸೌಲಭ್ಯ, ಅಂತಾರಾಷ್ಟ್ರೀಯ ಕೌಶಲ್ಯ ಕೇಂದ್ರಗಳನ್ನು ಸ್ಥಾಪನೆ, ಯುವಕರಿಗೆ ಕಲಿಕಾ ವೇತನ ನೀಡುವುದು ಕೂಡ ಸ್ವಾಗತಾರ್ಹ. ಮಹಿಳೆಯರಿಗೆ ವಿಶೇಷ ಯೋಜನೆಗಳು, ವಿದ್ಯಾರ್ಥಿ ಗಳಿಕೆ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ಇ-ವೋಚರ್ ಶೇ.3 ಬಡ್ಡಿ ದರ ಇವೆಲ್ಲವೂ ದೇಶದ ಏಳಿಗೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.

ಪಿಎಂ ಸೌರಶಕ್ತಿ ಯೋಜನೆ, ಸೂರ್ಯಘರ್ ಅಡಿಯಲ್ಲಿ ಉಚಿತ ವಿದ್ಯುತ್ ಯೋಜನೆ, ಜಿಎಸ್ ಟಿ ಇಳಿಕೆ, ಕ್ಯಾನ್ಸರ್ ಮದ್ದು ಅಗ್ಗವಾಗಿರುವುದು, ತೆರಿಗೆ ಪದ್ಧತಿ ಸರಳೀಕರಣ ಇವೆಲ್ಲವೂ ಮದ್ಯಮ ವರ್ಗದವರನ್ನು ಗುರಿಯಿಟ್ಟು ಮಾಡಿರುವ ಯೋಜನೆಗಳಾಗಿದ್ದು, ಸ್ವಾಗತಾರ್ಹ. ಹೂಡಿಕೆದಾರರಿಗೆ ಹೆಚ್ಚು ಅವಕಾಶ, ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ಇವು ಕೂಡ ದೇಶದ ಬೆಳವಣಿಗೆಗೆ ಪೂರಕ ಹಾಗೂ ಸ್ವಾಗತಾರ್ಹ.

ಆದಾಯ ತೆರಿಗೆಯ ಹೊಸ ದರದಿಂದ ತೆರಿಗೆದಾರರಿಗೆ ಸುಮಾರು ವಾರ್ಷಿಕ 17500 ರೂ. ಉಳಿತಾಯವಾಗಲಿದೆ. ಒಟ್ಟಾರೆ ಇದೊಂದು ಪ್ರಗತಿಪರ, ಕೈಗಾರಿಕೆ ಹಾಗೂ ವ್ಯಾಪಾರಸ್ತರಿಗೆ ಬೆಂಬಲಿಸಿರುವುದು ಹಾಗೂ ಯವಕರಿಗೆ ಹೆಚ್ಚು ಪ್ರಾಶಸ್ತ್ರ ನೀಡಿರುವ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ