ಕದಂಬ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಕೆ.ಬಸವರಾಜೇಗೌಡ ಪದಗ್ರಹಣ

KannadaprabhaNewsNetwork |  
Published : Jul 19, 2026, 02:45 AM IST
18ಕೆಎಂಎನ್ ಡಿ14 | Kannada Prabha

ಸಾರಾಂಶ

ಯನ್ಸ್ ಸಂಸ್ಥೆ ವಿಶೇಷವಾಗಿ ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ದಯವಿಟ್ಟು ಕೊಂಡು ಕೆಲಸ ಮಾಡುತ್ತಿದೆ. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಕದಂಬ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಕೆ.ಬಸವರಾಜೇಗೌಡ ಪದಗ್ರಹಣ ಮಾಡಿದರು.

ಪಟ್ಟಣದ ಮದ್ದೂರು ಬಳಗದಲ್ಲಿ ನಡೆದ ಸಮಾರಂಭದಲ್ಲಿ 2026, 27ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕೆ.ಬಸವರಾಜೇಗೌಡ, ಉಪಾಧ್ಯಕ್ಷರಾಗಿ ಎಂ.ಕೆ.ಶ್ರೀನಿವಾಸ, ಶಿವಲಿಂಗೇಗೌಡ, ಕಾರ್ಯದರ್ಶಿಯಾಗಿ ಎಸ್.ಬಿ.ನಾಗರಾಜು, ಖಜಾಂಚಿಯಾಗಿ ಟಿ.ಎನ್.ಶಿವಲಿಂಗೇಗೌಡ, ನಿರ್ದೇಶಕರಾಗಿ ಶಿವಕುಮಾರ, ಸಿ.ಕೆ. ರಾಮಕೃಷ್ಣ, ಬಿ.ಲಿಂಗರಾಜು, ದೊರೆಸ್ವಾಮಿ, ಮೂಗಣ್ಣ, ಆತ್ಮಾನಂದ ಆಯ್ಕೆಯಾದರು.

ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮಲ್ಟಿಪಲ್ ಜಿಲ್ಲಾ ರಾಜ್ಯಪಾಲ ಎಸ್.ಸುಬ್ರಹ್ಮಣ್ಯ ಹಾಗೂ ಟಿ.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು. ಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಸಲಹೆಗಾರ ಕೆ.ದೇವೇಗೌಡ, ಲಯನ್ಸ್ ಸಂಸ್ಥೆ ಸದಸ್ಯರು ಅಧಿಕಾರ ಇದ್ದರೂ ಅಥವಾ ಇಲ್ಲದಿದ್ದರೂ ಸಮಾಜ ಸೇವೆಯನ್ನು ಧೇಯವಾಗಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಲಯನ್ಸ್ ಸಂಸ್ಥೆ ವಿಶೇಷವಾಗಿ ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ದಯವಿಟ್ಟು ಕೊಂಡು ಕೆಲಸ ಮಾಡುತ್ತಿದೆ. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಎಂ.ಎಸ್. ರಘು ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸೇವಾ ಚಟುವಟಿಕೆ ಅಂಗವಾಗಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ಸದಸ್ಯರ ಮಕ್ಕಳಾದ ಡಿ.ಪಿ.ಬೃಂದಾ, ಟಿ.ಎಸ್.ಮಾನ್ವಿ, ಬಿಲ್ವಾ ಕೃಷ್ಣ, ಎಂ.ಎಸ್.ಮೌಲ್ಯ, ಎಂ.ಎಸ್.ಸಂಜನಾ ಹಾಗೂ ಎನ್ ಪ್ರಜ್ವಲ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್, ಲಯನ್ ಸದಸ್ಯರಾದ ಕೆ.ಎಸ್.ಸುನಿಲ್ ಕುಮಾರ್, ವಿ.ಹರ್ಷ, ಕೆಂಗಲ್ ಗೌಡ, ನಾಗೇಶ್, ಡಿ.ಕೆ.ಪ್ರಭಾಕರ್, ಡಿ.ಟಿ.ಸುರೇಶ್ ಮತ್ತಿತರರು ಭಾಗವಹಿಸಿದ್ದರು.ಶ್ರುತಿ, ಚಂದ್ರಮ್ಮ ಅವರಿಗೆ ಅಭಿನಂದನೆ

ಮಳವಳ್ಳಿ: ತಾಲೂಕಿನ ಕಲ್ಕುಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟೇಗೌಡನಹುಂಡಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್)ಯಲ್ಲಿ ಶೇ.100ರಷ್ಟು ಪೂರ್ಣಗೊಳಿಸಿದ ಶಿಕ್ಷಕಿ ಶ್ರುತಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಅವರನ್ನು ಅಭಿನಂದಿಸಲಾಯಿತು. ಚುನಾವಣಾಧಿಕಾತಿ ಪ್ರತೀಕ್, ತಹಸೀಲ್ದಾರ್ ಎಸ್.ವಿ.ಲೋಕೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ, ಕಂದಾಯ ನಿರೀಕ್ಷಕ ನಿಂಗಸ್ವಾಮಿ, ಮೇಲ್ವಿಚಾರಕಿಯರಾದ ಶೈಲಜಾ ಹಾಗೂ ಸಿದ್ದರಾಜಮ್ಮ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಂಬಾಡಿ ಹಿನ್ನೀರಿನಲ್ಲಿ ಅನುಮತಿ ಇಲ್ಲದೆ ಮಣ್ಣು ಪರೀಕ್ಷೆ: ಪ್ರಕರಣ ದಾಖಲಿಸಲು ಒತ್ತಾಯ
ಕೆರೆಕಟ್ಟೆಗಳು ನಮ್ಮ ರೈತರ ಜೀವನಾಡಿಯಾಗಿವೆ: ಶಾಸಕ ಎಚ್.ಟಿ.ಮಂಜು