ಕೆ.ಸಿ.ವ್ಯಾಲಿ, ಎಚ್.ಎನ್. ವ್ಯಾಲಿ ನೀರು ಕೃಷಿಗೆ ಮಾತ್ರ: ಡಾ.ಎಂ.ಸಿ. ಸುಧಾಕರ್

KannadaprabhaNewsNetwork |  
Published : Mar 01, 2026, 01:30 AM IST
ನ್ಯೂಸ್  | Kannada Prabha

ಸಾರಾಂಶ

ಅಂತರ್ಜಲದ 1800 ಅಡಿಗಳಿಂದ 200 ಅಡಿಗಳವರೆಗೂ ಕುಸಿದಿದ್ದು ಇದನ್ನು ಸುಧಾರಿಸುವ ದೃಷ್ಟಿಯಿಂದ ಸರ್ಕಾರ ಹೆಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆಯೆಂದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕೆ.ಸಿ.ವ್ಯಾಲಿ, ಎಚ್.ಎನ್. ವ್ಯಾಲಿ ನೀರು ಎರಡು ಹಂತದಲ್ಲಿ ಶುದ್ಧಿಕರಿಸಲಾಗುತ್ತಿದ್ದು, ಈ ಮೂಲಕ ಕೇವಲ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದಾಗಿ ಮಾತ್ರ ಹರಿಸಲಾಗುತ್ತಿದ್ದು, ಕುಡಿಯಲು ಯೋಗ್ಯವಾಗಬೇಕಾದರೆ 3 ಹಂತಗಳಲ್ಲಿ ಶುದ್ಧೀಕರಣ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ನಗರ ಭಾಗದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟ್ರಾಕ್ ಕಾಮಗಾರಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಈಗಾಗಲೇ ನಿರ್ಮಾಣಗೊಂಡಿರುವ ಕೊಠಡಿಗಳಿಗೆ ಹಾಗೂ ಮತ್ತೊಂದೆಡೆ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಆಗಬೇಕಾಗಿರುವ ಪ್ರಗತಿಗಳ ಬಗ್ಗೆ ಮಾಹಿತಿಯನ್ನು ಅವರು ಪರಿಶೀಲಿಸಿದರು.

ಕೆ.ಸಿ.ವ್ಯಾಲಿ, ಚ್.ಎನ್. ವ್ಯಾಲಿ ನೀರು ಅಂತರ್ಜಲಕ್ಕೆ:

ಬಯಲು ಪ್ರದೇಶದ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲದ 1800 ಅಡಿಗಳಿಂದ 200 ಅಡಿಗಳವರೆಗೂ ಕುಸಿದಿದ್ದು ಇದನ್ನು ಸುಧಾರಿಸುವ ದೃಷ್ಟಿಯಿಂದ ಸರ್ಕಾರ ಹೆಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆಯೆಂದರು. ಇದರಿಂದ ನೀರು ಹಿಂಗುವುದರ ಮೂಲಕ ಹಲವು ಪದರಗಳ ಮೂಲಕ ಸ್ವಲ್ಪ ಮಟ್ಟಿಗಾದರೂ ಸುಧಾರಣೆಯಾಗಿ ಕೊಳವೆಬಾವಿಗಳ ಪುನಶ್ಚೇತನಗೊಳ್ಳುತ್ತದೆ ಹಾಗೂ ರೈತರಿಗೆ ಹಾಗೂ ಹೈನುಗಾರಿಕೆ ಮಾಡುವವರಿಗೆ ಅನುಕೂಲವಾಗುತ್ತದೆಂಬ ದೃಷ್ಟಿಯಿಂದ ಹರಿಸಲಾಗುತ್ತಿದೆಯೆಂದರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಕನಿಷ್ಠ ನೀರು ಬಂದರೂ ಕೆರೆಗಳಲ್ಲಿ ನೀರು ನಿಲ್ಲುವಂತಾಗಿ ಅಂತರ್ಜಲದ ಪ್ರಮಾಣ ಹೆಚ್ಚಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶದಿಂದ ಈ ಕೆಲಸವನ್ನು ಕೈಗೊಳ್ಳಲಾಗಿದೆ. ಭೂಮಿಯ ಪದರಗಳಲ್ಲಿ ಆ ನೀರು ಹಿಂಗುವುದರಿಣದ ಮತ್ತಷ್ಟು ಶುದ್ಧವಾಗುತ್ತದೆ. ಬೇರೆ ಬೇರೆ ಕಡೆ ಹೋಗುತ್ತದೆ, ಯಾವ ಯಾವ ಭಾಗಗಳಲ್ಲಿ ಎಚ್.ಎನ್. ಹಾಗೂ ಕೆ.ಸಿ.ವ್ಯಾಲಿ ನೀರು ಬಂದಿದೆ, ಅಲ್ಲಿನ ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತಿದೆ ಎಂದರು.

ಕೆ.ಸಿ.ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರಿನಲ್ಲಿ ಯೋಗ್ಯವಲ್ಲವೆಂದು ಹೇಳಿರುವುದು ಸರಿಯಲ್ಲ. ಇದನ್ನು ನಿರಂತರವಾಗಿ ಭಾರತೀಯ ವಿಜ್ಞಾನ ಸಂಸ್ಥೆ ಪರಿಶೀಲನೆ ಮಾಡಿ ವರದಿಯನ್ನು ಕೊಡುತ್ತದೆ. ನಗರದ ಕೆಲವು ಕಡೆ ಇರುವ ಕೆರೆಗಳಲ್ಲಿ ಸಮೀಪ ಎಚ್.ಎನ್. ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ನೀರಿಗೆ ಒಳಚರಂಡಿ ನೀರು ಸೇರ್ಪಡೆಗೊಳ್ಳುತ್ತಿದ್ದು, ಇಂತಹ ನೀರನ್ನು ಪರೀಕ್ಷಿಸಿದಲ್ಲಿ ಅದು ಅಸುರಕ್ಷಿತವೆಂದು ಕಂಡು ಬರುತ್ತದೆ. ಈಗಾಗಲೇ ಹಲವು ಕೆರೆಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು ಇದರ ಮುಖ್ಯ ಉದ್ದೇಶ ಅಲ್ಲಿ ನಗರಗಳಿಂದ ಬರುವ ತ್ಯಾಜ್ಯ ನೀರು ಅದರಲ್ಲಿ ಬೆರೆತ್ತಿರುವುದರಿಂದ ಅಲ್ಲಿ ಬೇರೆ ರೀತಿ ಪರಿಸ್ಥಿತಿ ಇದೆ ಎಂದು ವಿವರಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೆರೆಗೆ ಎಚ್.ಎನ್. ವ್ಯಾಲಿ ನೀರು ಹರಿಯುತ್ತದೆ. ಆದರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಒಳಚರಂಡಿಯ ತ್ಯಾಜ್ಯ ನೀರು ಸೇರ್ಪಡೆಗೊಳ್ಳುವುದರಿಂದ ನೀರು ಅಲ್ಲಿ ಕಲುಷಿತಗೊಂಡಿರಬಹುದು. ಅಲ್ಲಿಂದ ಹರಿಯುವ ತ್ಯಾಜ್ಯ ಮಿಶ್ರಣ ನೀರು ಗೋಪಾಲ ಕೃಷ್ಣ ಕೆರೆಗೆ ಬರುತ್ತಿದೆ, ಆದರಿಂದ ಅಲ್ಲಿ ಬೇರೆ ರೀತಿಯಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅದನ್ನು ತಡೆಗಟ್ಟಲು ಈಗಾಗಲೇ ಎಲ್ಲಾ ರೀತಿಯ ಪ್ರಯತ್ನಗಳು ಮಾಡಲಾಗಿದೆ ಎಂದರು. ಚಿತ್ರಶೀರ್ಷಿಕೆ ೧: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್ ಸಿಂಥೆಟಿಕ್ ಟ್ರಾಕ್ ಕಾಮಗಾರಿ ವೀಕ್ಷಣೆ.

ಚಿತ್ರಶೀರ್ಷಿಕೆ ೨: ಸರ್ಕಾರಿ ಪಾಲಿಟೆಕ್ನಿಕ್ ಭೇಟಿ ಶೌಚಾಲಯದ ಸ್ವಚ್ಛತೆ ಹೇಗಿರಬೇಕೆಂದು ಪ್ರಾಂಶುಪಾಲರಿಗೆ ಖುದ್ದು ತೋರಿಸಿಕೊಟ್ಟ ಡಾ.ಎಂ.ಸಿ.ಸುಧಾಕರ್

ಚಿತ್ರಶೀರ್ಷಿಕೆ 3: ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಕಾಮಗಾರಿಗೆ ಪಾಲಿಟೆಕ್ನಿಕ್ ಸಿಬ್ಬಂದಿಯೊಂದಿಗೆ ವೀಕ್ಷಣೆ ಮಾಡಿದ ಡಾ.ಎಂ.ಸಿ.ಸುಧಾಕರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ: ಮಾದಿಗ ಸಮಾಜದಿಂದ ದಿಢೀರ್ ರಸ್ತೆ ತಡೆ
ಬಿಜೆಪಿಗೆ ಬಿಎಸ್‍ವೈ ಕೊಡುಗೆ ಅಪಾರ: ಮಾಜಿ ಶಾಸಕ ಎಂ.ವಿ.ನಾಗರಾಜು