ನಾಯಕ ಸಮುದಾಯ ಸಂಘಟಿತರಾಗುವಂತೆ ಕೆ.ಎನ್‌. ರಾಜಣ್ಣ ಕರೆ

KannadaprabhaNewsNetwork |  
Published : Sep 28, 2025, 02:00 AM IST
ಪೊಟೋ 27ಪಿವಿಡಿ1 27ಪಿವಿಡಿ2ಪಾವಗಡ,ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಬಿ.ಶ್ರೀ ರಾಮುಲು,ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ಯಾವುದೇ ಸಮುದಾಯ ಪ್ರಗತಿ ಕಾಣಬೇಕಾದರೆ ಶಿಕ್ಷಣ ಮುಖ್ಯ. ಎಲ್ಲ ಹಿಂದುಳಿದ ಸಮುದಾಯಗಳು ಪ್ರಗತಿದತ್ತ ಸಾಗಬೇಕು.

ಕನ್ನಡಪ್ರಭ ವಾರ್ತೆ ಪಾವಗಡ

ವಾಲ್ಮೀಕಿ ನಾಯಕ ಸಮಯದಾಯದ ವತಿಯಿಂದ ಶನಿವಾರ ತಾಲೂಕಿನ ವೈ.ಎನ್. ಹೊಸಕೋಟೆ ಪಟ್ಟಣದಲ್ಲಿ ನಡೆದ ಶ್ರೀ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ ಸ್ಥಳೀಯ ಶಾಸಕರು, ತುಮುಲ್ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವರಾದ ವೆಂಕಟರಮಣಪ್ಪ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭಾಗವಹಿಸಿ, ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಗೊಳಿಸಿದರು.ಇದೇ ವೇಳೆ ಸಮಾಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್.ರಾಜಣ್ಣ, ಯಾವುದೇ ಸಮುದಾಯ ಪ್ರಗತಿ ಕಾಣಬೇಕಾದರೆ ಶಿಕ್ಷಣ ಮುಖ್ಯ. ಎಲ್ಲ ಹಿಂದುಳಿದ ಸಮುದಾಯಗಳು ಪ್ರಗತಿದತ್ತ ಸಾಗಬೇಕು. ಸಾಮಾಜಿಕ,ಅರ್ಥಿಕ ಹಾಗೂ ರಾಜಕೀಯ ಪ್ರಗತಿ ಕಾಣುವ ಮೂಲಕ ನಾಯಕ ಸಮುದಾಯ ಸಂಘಟಿತರಾಗಿ ಅಭಿವೃದ್ಧಿ ಹೊಂದುವತ್ತ ಶ್ರಮಿಸಬೇಕೆಂದರು.ಶೋಷಿತ ಸಮುದಾಯಗಳು ಪ್ರಗತಿಯ ಹೆಜ್ಜೆಯತ್ತ ಸಾಗಿ ರಾಜ್ಯ ದೇಶದ ಅಭಿವೃದ್ಧಿಗೆ ಒತ್ತು ನೀಡುವಂತೆ ಕರೆ ನೀಡಿದ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಕುರಿತು ವಿವರಿಸಿದರು.ಮಾಜಿ ಸಚಿವ ಬಿ.ಶ್ರೀ ರಾಮುಲು ಮಾತನಾಡಿ, ವಿದ್ಯಾವಂತರಾಗಬೇಕು.ಸಂಘಟಿತರಾಗಿ ಸಾಮಾಜಿಕ, ಅರ್ಥಿಕ ಪ್ರಗತಿ ಕಾಣುವಂತೆ ನಾಯಕ ಸಮುದಾಯಕ್ಕೆ ಕರೆ ನೀಡಿದರು.ಶಾಸಕ ಎಚ್.ವಿ.ವೆಂಕಟೇಶ್ ಮಾಜಿ ಸಚಿವ ವೆಂಕಟರಮಣಪ್ಪ ನಾಯಕ ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಇತರೆ ಸಹಕಾರದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.ಮಾಜಿ ಸಂಸದ ವಿ.ಎಸ್.ಉಗ್ರಪ್ಪ,ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ಇದೇ ವೇಳೆ ನಿಡಗಲ್ಲು ವಾಲ್ಮೀಕಿ ಪೀಠದ ಸಂಜಯ್ ಕುಮಾರ ಸ್ವಾಮೀಜಿ, ರಾಜ ಜಯಚಂದ್ರ ನಾಯಕ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ತಲಾರಿ ಜಗನ್ನಾಥ್, ಸೀನಪ್ಪ, ಗ್ಯಾಸ್ ಕೃಷ್ಣಪ್ಪ, ಶಂಷುದ್ದೀನ್, ಪಿ.ಎಚ್. ರಾಜೇಶ್, ಬತ್ತಿನೇನಿ ನಾಗೇಂದ್ರ ರಾವ್, ತೆಂಗಿನಕಾಯಿ ರವಿ, ಸುಮನ್ ಸೇರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಪೊಟೋ 27ಪಿವಿಡಿ1

27ಪಿವಿಡಿ2ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ