ಅಹಿಂದ ವರ್ಗಗಳ ಸ್ಥಾನ ತುಂಬುವ ಕೆ.ಎನ್.ರಾಜಣ್ಣ

KannadaprabhaNewsNetwork |  
Published : May 09, 2025, 12:36 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ದೇವರಾಜ ಅರಸು, ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಹಿಂದ ವರ್ಗಗಳ ನಾಯಕರ ಸ್ಥಾನ ತುಂಬಿರುವ ಕೆ.ಎನ್.ರಾಜಣ್ಣ 75ನೇ ಹುಟ್ಟು ಹಬ್ಬ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ, ಅಹಿಂದ ಮತ್ತು ಶೋಷಿತ ಸಮುದಾಯಗಳ ಪಾಲಿಗೆ ಸ್ವಾಭಿಮಾನದ ಹಬ್ಬವಾಗಿದ್ದು, ಎಲ್ಲಾ ಶೋಷಿತ ಸಮುದಾಯಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಡ್ಯಾಗೇರಹಳ್ಳಿ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುದೇವರಾಜ ಅರಸು, ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಹಿಂದ ವರ್ಗಗಳ ನಾಯಕರ ಸ್ಥಾನ ತುಂಬಿರುವ ಕೆ.ಎನ್.ರಾಜಣ್ಣ 75ನೇ ಹುಟ್ಟು ಹಬ್ಬ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ, ಅಹಿಂದ ಮತ್ತು ಶೋಷಿತ ಸಮುದಾಯಗಳ ಪಾಲಿಗೆ ಸ್ವಾಭಿಮಾನದ ಹಬ್ಬವಾಗಿದ್ದು, ಎಲ್ಲಾ ಶೋಷಿತ ಸಮುದಾಯಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಡ್ಯಾಗೇರಹಳ್ಳಿ ಕರೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ತಮ್ಮ ೫೦ ವರ್ಷಗಳ ರಾಜಕೀಯ ಜೀವನದಲ್ಲಿ ತಬ್ಬಲಿ ಸಮುದಾಯಗಳ ನೋವು, ನಲಿವುಗಳಲ್ಲಿ ಭಾಗಿಯಾಗಿದ್ದಾರೆ. ಧ್ವನಿಯಿಲ್ಲದ ಸಮುದಾಯಗಳ ದ್ವನಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಅಹಿಂದ ವರ್ಗಗಳು ಬಯಸುತ್ತೇವೆ. ರಾಜಕಾರಣದ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅಹಿಂದ ವರ್ಗ ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ ಎಂದರು.ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ ಮಾತನಾಡಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ವ್ಯಕ್ತಿಯಲ್ಲ. ಅವರು ಅಹಿಂದ ವರ್ಗದ ಶಕ್ತಿ. ನೊಂದವರ, ಅಳುವವರ ಕಣ್ಣೀರು ಒರೆಸಿ, ಬಿದ್ದವರನ್ನು ಮೇಲೆತ್ತುವ ಕೆಲಸವನ್ನು ಅವರ ರಾಜಕೀಯ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ.ಮುಖಂಡ ವೀರಣ್ಣ ಸಿದ್ದಾಪುರ ಮಾತನಾಡಿ, ಕೆ.ಎನ್.ರಾಜಣ್ಣ ಜಾತ್ಯಾತೀತ, ಪಕ್ಷಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸಮಾಜದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಹೊಂದಿರುವ ಸಮುದಾಯಗಳಿಗೆ ಅಪೇಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಿ, ಅವರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಹಾಗಾಗಿ ಎಲ್ಲಾ ಶೋಷಿತ ಸಮುದಾಯಗಳು ತಮ್ಮ ಮನೆಯ ಹಬ್ಬದಂತೆ ಈ ಕಾರ್ಯಕ್ರಮವನ್ನು ಸಂಭ್ರಮಿಸಬೇಕು ಎಂದರು.ಕುಳುವ ಮಹಾಸಭಾದ ಲೋಕೇಶಸ್ವಾಮಿ, ದರೈಸ್ತ್ರಿ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷ ಎ.ರಾಮಚಂದ್ರಪ್ಪ ಮಾತನಾಡಿದರು. ವಾಲ್ಮೀಕಿ ಸಮಾಜದ ಕುಪ್ಪೂರು ಶ್ರೀಧರ್, ಪುಟ್ಟಣ್ಣ ಯಾದವ್,ಜಾತ್ಯಾತೀತ ಯುವ ವೇದಿಕೆ ಕಾರ್ಯಾಧ್ಯಕ್ಷ ಮುರುಳಿ ಕುಂದೂರು ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಜಾತ್ಯಾತೀತ ಯುವ ವೇದಿಕೆಯ ಕಾರ್ಯದರ್ಶಿ ಕೆಸ್ತೂರು ಮೂರ್ತಿ, ಮನುಚಕ್ರವರ್ತಿ, ಡಾ.ಹೆಚ್.ಪಿ.ಗುಂಡಣ್ಣ, ಶಿವಕುಮಾರ್, ಡಾ.ಲಕ್ಷ್ಮಿರಂಗಯ್ಯ, ಸಂಜು.ಬಿ, ರಾಜು, ಕಾರ್ತಿಕ್ ನಾಯಕ್, ರಮೇಶ್ ಯರೇಕಟ್ಟೆ, ಮಂಜುನಾಥ್ ವಡ್ಡೆ, ಮೋಹನಕುಮಾರ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ