‘ಎ ಶ್ರೇಣಿ’ಗೆ ಸೇರಿದ ಕೆ.ಆರ್.ಪೇಟೆ ಟಿಎಪಿಸಿಎಂಎಸ್‌: ಮಲ್ಲೇನಹಳ್ಳಿ ಮೋಹನ್

KannadaprabhaNewsNetwork |  
Published : Sep 25, 2026, 01:45 AM IST
24ಕೆಎಂಎನ್ ಡಿ14 | Kannada Prabha

ಸಾರಾಂಶ

ಟಿಎಪಿಸಿಎಂಎಸ್‌ ಬ್ಯಾಂಕಿಂಗ್ ಶಾಖೆ, ಗೊಬ್ಬರ, ಪೆಟ್ರೋಲ್ ಬಂಕ್, ಜವಳಿ ಶಾಖೆ ಸೇರಿದಂತೆ ಹತ್ತು ಹಲವು ರೈತ ಉಪಯೋಗಿ ವ್ಯಾಪಾರ ಶಾಖೆಗಳಿವೆ. ಖಾಸಗಿಯವರೊಂದಿಗೆ ವ್ಯಾಪಾರದ ಪೈಪೋಟಿ ನೀಡಲು ಸದಸ್ಯರು ಸಂಘದ ವ್ಯಾಪಾರ ಶಾಖೆಗಳಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರೆ ವಹಿವಾಟು ಹೆಚ್ಚಿ ಸಂಘಕ್ಕೆ ಉಪಯೋಗವಾಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 40,370562 ರು. ನಿವ್ವಳ ಲಾಭಗಳಿಸಿದೆ. ಈ ಸಾಧನೆ ಮೂಲಕ ರಾಜ್ಯದ ‘ಎ ಶ್ರೇಣಿ’ ಸಹಕಾರ ಸಂಘಗಳ ಸಾಲಿಗೆ ಸೇರಿದೆ ಎಂದು ಸಂಘದ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ನ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ ಬ್ಯಾಂಕಿಂಗ್ ಶಾಖೆ, ಗೊಬ್ಬರ, ಪೆಟ್ರೋಲ್ ಬಂಕ್, ಜವಳಿ ಶಾಖೆ ಸೇರಿದಂತೆ ಹತ್ತು ಹಲವು ರೈತ ಉಪಯೋಗಿ ವ್ಯಾಪಾರ ಶಾಖೆಗಳಿವೆ. ಖಾಸಗಿಯವರೊಂದಿಗೆ ವ್ಯಾಪಾರದ ಪೈಪೋಟಿ ನೀಡಲು ಸದಸ್ಯರು ಸಂಘದ ವ್ಯಾಪಾರ ಶಾಖೆಗಳಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರೆ ವಹಿವಾಟು ಹೆಚ್ಚಿ ಸಂಘಕ್ಕೆ ಉಪಯೋಗವಾಗಲಿದೆ ಎಂದರು.

ಬ್ಯಾಂಕ್ ಶಾಖೆಯಲ್ಲಿನಿಶ್ಚಿತ ಠೇವಣಿಯಿಡಿ. ಪಟ್ಟಣಕ್ಕೆ ಬಂದಾಗ ಸಂಘದ ಬಂಕ್ ನಲ್ಲಿಯೇ ಪೆಟ್ರೋಲ್ ಹಾಕಿಸಿ. ಸಂಘದಲ್ಲಿ ಸದಸ್ಯರು ವ್ಯವಹರಿಸಿದರೆ ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯ. ಜೊತೆಗೆ ರೈತರಿಗೆ ಅವಶ್ಯಕವಾಗಿ ಬೇಕಾದ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಸ್ಪರ್ದಾತ್ಮಕ ಬೆಲೆಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ನಮ್ಮ ಸಂಸ್ಥೆ ‘ಎ ಶ್ರೇಣಿ’ ಸಂಘಗಳ ಸಾಲಿಗೆ ಸೇರಿದ್ದರೂ ಕಾಯಂ ಕಾರ್ಯದರ್ಶಿ ಇಲ್ಲ. ಈಗಿರುವ ಪ್ರಭಾರ ಕಾರ್ಯದರ್ಶಿಗೆ ಬಡ್ತಿ ನೀಡಿ ಅಥವಾ ಬೇರೆ ಯಾರನ್ನಾದರೂ ಕಾಯಂ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಬೇಕು. ಸಂಘದ ವ್ಯವಹಾರದಲ್ಲಿ ಲೋಪವಾದರೆ ನಾವು ಯಾರನ್ನು ಪ್ರಶ್ನಿಸಬೇಕೆಂದು ಕೆಲ ಸದಸ್ಯರು ಸಭೆಯಲ್ಲಿ ಪ್ರಶ್ನೆ ಮಾಡಿದರು.

ಸಂಘಕ್ಕೆ 40 ಲಕ್ಷ ರು.ಗಳ ಅಭಿವೃದ್ಧಿ ಸಹಾಯಧನ ಕೊಡಿಸಿರುವ ರಾಜ್ಯ ಸಹಕಾರ ಮಂಡಳಿ ಸದಸ್ಯ ಎಸ್.ಎಲ್.ಮೋಹನ್ ಅವರನ್ನು ಅಭಿನಂದಿಸಬೇಕು. ತಾಲೂಕು ವ್ಯಾಪ್ತಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳ ಜೊತೆಗೆ ತಾಲೂಕಿನ ಹೊರಗಿನ ಶಾಲೆಯಲ್ಲಿ ಕಲಿಯುತ್ತಿರುವ ಸದಸ್ಯರ ಮಕ್ಕಳಿಗೂ ವಿಸ್ತರಿಸಿ ಆಗ್ರಹಿಸಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಲತಾಮಣಿ, ನಿದೇರ್ಶಕರಾದ ಟಿ.ಬಲದೇವ್, ಬಿ.ಎಂ.ಕಿರಣ್, ಎಂ.ಪಿ.ಲೋಕೇಶ್, ಎಚ್.ಟಿ.ಲೋಕೇಶ್, ವೈ.ಎಂ.ವಿಜಯಕುಮಾರ್, ಕೆ.ಬಿ.ನಾಗೇಶ್, ಎಸ್.ಎಲ್.ಮೋಹನ್, ಕೆ.ಬಿ.ಮಧು, ಎಂ.ಡಿ.ಜ್ಯೋತಿ, ಎನ್.ಕೆ.ದಿಲೀಪ್‌ಕುಮಾರ್, ಟಿ.ಎಸ್.ಮಂಜುನಾಥ್, ತಮ್ಮಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್ ಇದ್ದರು. ಕಾರ್ಯದರ್ಶಿ ಎಸ್.ಬೋರೇಗೌಡ ವರದಿ ಮಂಡಿಸಿದರು. ಸದಸ್ಯರು, ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಚಲುವಯ್ಯ, ಚೌಡೇನಹಳ್ಳಿ ರಾಮಕೃಷ್ಣೇಗೌಡ, ಕೊರಟೀಕೆರೆ ದಿನೇಶ್, ಡಿ.ಎಸ್.ನಾಗೇಂದ್ರ, ಸುಬ್ಬೇಗೌಡ, ಬಸವರಾಜಪ್ಪ, ಬಸ್ತಿ ರಂಗಪ್ಪ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿ ಸಂಘದ ಅಭಿವೃದ್ದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೋರ್‌ವೆಲ್ ಕೊರೆಯಲು ವೈಜ್ಞಾನಿಕ ಯೋಜನೆ ಅಗತ್ಯ: ಸಿಇಒ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಅಣಕು ಶವಯಾತ್ರೆ