ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೈತ್ರಿ ಅಭ್ಯರ್ಥಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಬಿ.ತರಗತಿಯಿಂದ ಪಿ.ಕೆ.ಕಾವ್ಯ, ಚಂದ್ರನಾಯಕ್, ವೈ.ಕೆ.ದ್ಯಾವಯ್ಯ, ಬಸವ ಚಾರಿ, ಎಂ.ಎಸ್.ಶಶಿಕಲಾ, ಸಿ.ಡಿ.ಸಂತೋಷ್ ಹಾಗೂ ಎಸ್.ಡಿ.ಹೊನ್ನೇಗೌಡ ಕಣದಲ್ಲಿದ್ದಾರೆ ಎಂದರು.
ಸಹಕಾರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಗಳಾಗಿ ಎ.ತರಗತಿಯಿಂದ ಸಿ.ಎ.ಕೆರೆ ಹೋಬಳಿಯಿಂದ ದೇವೇಗೌಡ, ಮಹೇಂದ್ರ, ಕಸಬಾ ಹೋಬಳಿಯಿಂದ ದೇವರಾಜು, ಕೊಪ್ಪ ಹೋಬಳಿಯಿಂದ ದಯಾನಂದ ಸ್ಪರ್ಧಿಸಿದ್ದಾರೆ ಎಂದರು.ತಾಲೂಕು ಸೊಸೈಟಿ ಎಲ್ಲಾ ಷೇರುದಾರ ಸದಸ್ಯರು ರೈತ ರ ಪರವಾದ ಸಂಘದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ರೈತ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ .ಸಿ.ತಮ್ಮಣ್ಣ ಹಾಗೂ ಎಸ್.ಪಿ.ಸ್ವಾಮಿ ಮನವಿ ಮಾಡಿದರು.
ಪಾಂಡವಪುರ:ಸಹಕಾರಿ ಬಂಧುಗಳು ಹಾಗೂ ಸಂಘದ ಷೇರುದಾರ ಸದಸ್ಯರು ಹೊಸ ಷೇರುದಾರರನ್ನು ನೋಂದಾಯಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ಭಾರತೀಯ ಜೀವವಿಮೆ ನಿಗಮದ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಹೇಳಿದರು.
ಸಭೆಯಲ್ಲಿ ವಿವಿಧ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮಹಾಸಭೆಯಲ್ಲಿ ಪಾಂಡವಪುರ ಎಲ್ಐಸಿ ಕಚೇರಿ ಶಾಖಾಧಿಕಾರಿ ವಿ.ಸೋಮೇಶ್, ಸಹಕಾರ ಇಲಾಖೆ ಸಹಕಾರ ಅಭಿವೃದ್ಧಿ ಅಧಿಕಾರಿ ಆನಂದನಾಯಕ್, ಶ್ರೀರಂಗಪಟ್ಟಣ ಎಲ್‌ಐಸಿ ನಿವೃತ್ತ ನೌಕರ ವಾಸುದೇವ, ಸಂಘದ ಉಪಾಧ್ಯಕ್ಷ ಚಂದ್ರೇಗೌಡ, ನಿರ್ದೇಶಕರಾದ ಟಿ.ಆರ್.ಸುನಿಲ್ ಕುಮಾರ್, ಕೆ.ಲಕ್ಷ್ಮೇಗೌಡ, ಎಸ್.ಸಿ.ಮಧು ಕುಮಾರಿ, ಭಾರತಿ, ಬಿ.ಸಿ.ಚಲುವರಾಜು, ಸಿ.ಬೆಟ್ಟೇಗೌಡ, ಬಿ.ಡಿ.ಚಂದ್ರಶೇಖರ್, ಎಲ್.ಕೆ. ಚಿಕ್ಕಹನುಮಂತೇಗೌಡ, ಜಿ.ಎಂ.ಕೃಷ್ಣೇಗೌಡ, ಎಂ.ಚಿಕ್ಕಣ್ಣ, ಕಾರ್ಯದರ್ಶಿ ಪಿ.ಸಿ.ರಾಧ ಸೇರಿದಂತೆ ಇತರರು ಇದ್ದರು.ಡೇರಿ ಅಭಿವೃದ್ಧಿಗಾಗಿ ನಂದಿನಿ ಉತ್ಪನ್ನಗಳನ್ನು ಬಳಸಿ: ಡಾ.ಸದಾಶಿವ
ಸಮೀಪದ ಹುಲ್ಲೇಗಾಲ ಗ್ರಾಮದ ಡೇರಿ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘಕ್ಕೆ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಹಕರಿಸಬೇಕು ಎಂದರು.ವಿಶೇಷ ಅಧಿಕಾರಿ ಎಂ.ಸಿ.ರಶ್ಮಿ ಸಂಘದ ವಾರ್ಷಿಕ ವರದಿ ಸಭೆಗೆ ತಿಳಿಸಿ 11,15,173 ರು. ನಿವ್ವಳ ಲಾಭ ಬಂದಿದೆ. ಎಲ್ಲರೂ ಗುಣಮಟ್ಟದ ಹಾಲು ಹಾಕಿ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಎಂದರು.