ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಾವು ಓದಿದ್ದ ಶಾಲೆ ಕೊಠಡಿಗಳಿಗೆ ಮತ್ತೊಮ್ಮೆ ಭೇಟಿ ನೀಡಿ ತಾವು ಕುಳಿತಿದ್ದ ಬೆಂಚುಗಳ ಮೇಲೆ ಕುಳಿತು ಗುರುವಂದನೆಗಾಗಿ ಆಹ್ವಾನಿಸಿದ್ದ ಗುರುಗಳೊಂದಿಗೆ ಚರ್ಚೆ ಮಾಡಿದರು. ಜೀವನ ಕಟ್ಟಿಕೊಂಡ ಬಗೆಯನ್ನು ಗುರುಗಳಿಗೆ ಮನವರಿಕೆ ಮಾಡಿಕೊಟ್ಟರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡಾ ತಮ್ಮ ಗುರುಗಳನ್ನು ಕಂಡು ಭಾವುಕರಾಗಿದ್ದರು.
ಶಾಲೆ ಅಂದಿನ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಷ್ಯ ಯಾವ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಿದ್ದಾನೆ ಎಂದು ನೋಡುವುದಿಲ್ಲ. ಆಕಸ್ಮಾತ್ ಶಿಷ್ಯ ಶ್ರೀಮಂತನಾದರೆ ಖಂಡಿತಾ ಸಂತೋಷ ಪಡುತ್ತಾನೆ. ಆದರೆ ಸಮಾಜದಲ್ಲಿ ನನ್ನ ವಿದ್ಯಾರ್ಥಿ ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಾನೆ ಎಂದರು.ಒಳ್ಳೆಯ ವಿದ್ಯಾವಂತನಾಗಿದ್ದಾನೆ ಎಂದರೆ ಅತಿಹೆಚ್ಚು ಸಂತೋಷಪಡುತ್ತಾನೆ. ನಾನು ಸೇವೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ ಸಮೂಹವು 16 ವರ್ಷಗಳ ನಂತರವೂ ನೆನೆಸಿಕೊಂಡು ನಮ್ಮನ್ನು ಆಹ್ವಾನಿಸಿರುವುದು ಬಹಳ ಸಂತಸ ತಂದಿದೆ. ನನ್ನ ಜೊತೆಯಲ್ಲಿ ಕೆಲಸವನ್ನು ಮಾಡಿದ್ದ ನನ್ನ ಶಿಕ್ಷಕ ಸಮೂಹವನ್ನು ಕರೆತಂದು ಸೇರಿಸಿದ್ದಾರೆ. ನಾನು ಖಂಡಿತಾ ಅಭಾರಿಯಾಗಿದ್ದೇನೆ ಎಂದರು.