ಫೋಟೋ- 16ಎಂವೈಎಸ್ 5ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನ ಮುಂಭಾಗದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವತಿಯಿಂದ ಸದಸ್ಯತ್ವ ಅಭಿಯಾನದ ಪ್ರಚಾರ ವಾಹನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಸೋಮವಾರ ಚಾಲನೆ ನೀಡಿದರು.----ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನ ಮುಂಭಾಗದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವತಿಯಿಂದ ಸದಸ್ಯತ್ವ ಅಭಿಯಾನದ ಪ್ರಚಾರ ವಾಹನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಸೋಮವಾರ ಚಾಲನೆ ನೀಡಿದರು.ನಂತರ ಟಿ.ಎಸ್. ಶ್ರೀವತ್ಸ ಮಾತನಾಡಿ, ಬಿಜೆಪಿ ದೇಶದ ಉದ್ದಗಲಕ್ಕೂ ತನ್ನ ಪ್ರಾತಿನಿಧ್ಯವನ್ನು ಹೊಂದಿದೆ. ಸದಸ್ಯತ್ವ ಅಭಿಯಾನವನ್ನು ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷ ಬಿಜೆಪಿ. 18 ರಿಂದ 24 ವರ್ಷದ ಯುವಕ, ಯುವತಿಯರು ಬಿಜೆಪಿ ಸೇರಲು ಹುಮ್ಮಸ್ಸಿನಿಂದ ಇದ್ದಾರೆ. ಇಂತಹ ಯುವ ಪೀಳಿಗೆಯ ಆಸಕ್ತರನ್ನು ಪಕ್ಷದ ಸದಸ್ಯರನ್ನಾಗಿ ಭರ ಮಾಡಿಕೊಳ್ಳುವತ್ತ ನಾವೆಲ್ಲಾ ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.ವಿದ್ಯಾರ್ಥಿ ಸಮುದಾಯ, ಯುವ ಪೀಳಿಗೆ ಮಾತ್ರವಲ್ಲದೇ ಸಮಾಜದ ಎಲ್ಲಾ ಸಮುದಾಯ, ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯರನ್ನಾಗಿಸುವ ಮೂಲಕ ಈ ಅಭಿಯಾನ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗುವಂತೆ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.ಇಂದಿನಿಂದ 1 ತಿಂಗಳು ಕ್ಷೇತ್ರಾದ್ಯಂತ ಎಲ್ಲಾ ಕಾಲೇಜುಗಳು, ಸರ್ಕಲ್ ಗಳು ಪ್ರಮುಖ ಜನಸಂದಣಿ ಪ್ರದೇಶಗಳಿಗೆ ಪ್ರಚಾರವಾಹನ ಸಂಚರಿಸಲಿದೆ ಎಂದರು.ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್. ರಘು, ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮುಖಂಡರಾದ ಮೈ.ವಿ. ರವಿಶಂಕರ್, ಕೆ.ಎಂ. ನಿಶಾಂತ್, ಜಯರಾಂ, ಜಯಶಂಕರ್, ಗಿರಿದರ್, ಸೋಮಸುಂದರ್, ಬಿ.ಎಂ. ರಘು, ಕೇಬಲ್ ಮಹೇಶ್, ಜೋಗಿ ಮಂಜು, ವಿಶ್ವೇಶ್ವರಯ್ಯ, ರಾಕೇಶ್ ಗೌಡ, ಬಿ.ವಿ. ಮಂಜುನಾಥ್, ಸರ್ವಮಂಗಳ, ಹರೀಶ್, ನವೀನ್, ನಂದೀಶ್, ಸೌಮ್ಯ ಉಮೇಶ್, ರಮೇಶ್, ಅಕ್ಷಯ್, ಮಧುಗೌಡ, ಹರ್ಷ, ಪ್ರತೀಕ್, ಚರಣ್, ವರುಣ್, ಶಿವಪ್ರೇರಣ್, ಶ್ರೀಕಂಠ, ರಮೇಶ್, ಶಿವಪ್ರಕಾಶ್ ಮೊದಲಾದವರು ಇದ್ದರು.