೪೫ ಶಿಕ್ಷಕರಿಗೆ ಕ.ಸಾ.ಪ. ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ

KannadaprabhaNewsNetwork |  
Published : Nov 20, 2026, 02:30 AM IST
ಚಿತ್ರ :  18ಎಂಡಿಕೆ3 : ಕಸಾಪ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೪೫ ಶಿಕ್ಷಕರಿಗೆ ಕನ್ನಡ ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ-೨೦೨೬ ಪ್ರದಾನ ಕಾರ್ಯಕ್ರಮವನ್ನು ೨೦ರಂದು ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ತಿಳಿಸಿದರು.

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೪೫ ಶಿಕ್ಷಕರಿಗೆ ಕನ್ನಡ ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ-೨೦೨೬ ಪ್ರದಾನ ಕಾರ್ಯಕ್ರಮವನ್ನು ೨೦ರಂದು ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ತಿಳಿಸಿದರು.ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಾಲೆಗಳ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುವುದು. ಅಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪಿ.ಕೇಶವ ಕಾಮತ್ ವಹಿಸಲಿದ್ದು, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಗುರುತ್ವದ ಹಿರಿಮೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಯೋಗೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಗಣಪತಿ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ಚೇತನ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಕುಮಾರ್, ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ ಅವರು ಸೇರಿದಂತೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದರು.ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು ಆಯ್ಕೆ ಮಾಡಿದ ಸುಮಾರು ೪೫ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಕೊನೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಹಿರಿಯ ಪ್ರಾಥಮಿಕ ವಿಭಾಗದ ಪುರಸ್ಕೃತರು: ವಿರಾಜಪೇಟೆ ತಾಲೂಕು: ವಸಂತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೋಮರ. ವಿರಾಜಪೇಟೆ ತಾಲ್ಲೂಕು. ಅಂತೋಣಿ ರಾಜೇಂದ್ರ ಪ್ರಸಾದ್, ಸಂತ ಅನ್ನಮ್ಮ ಪ್ರಾಥಮಿಕ ಶಾಲೆ. ವಿರಾಜಪೇಟೆ. ರೋಜಿ ವಿನ್ನಿ ಡೇಸ, ಸಂತ ಅನ್ನಮ ಪ್ರಾಥಮಿಕ ಶಾಲೆ, ವಿರಾಜಪೇಟೆ. ಶಕುಂತಲಾ, ಸರ್ಕಾರಿ ಪ್ರಾಥಮಿಕ ಶಾಲೆ. ಕುಟ್ಟ, ಪೊನ್ನಂಪೇಟೆ ತಾಲೂಕು, ಸುಮಾ ಚಿತ್ರ ಬಾನು, ಕೂರ್ಗ್ ವ್ಯಾಲಿ ಸ್ಕೂಲ್, ವಿರಾಜಪೇಟೆ, ತಂಗಮ್ಮ ಪಿ.ಡಿ, ಮುಖ್ಯ ಶಿಕ್ಷಕರು, ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ, ಕೈಕೇರಿ.

ಮಡಿಕೇರಿ ತಾಲೂಕು ಹಿರಿಯ ಪ್ರಾಥಮಿಕ ಶಾಲೆ, ಚಂದ್ರು ಎಸ್ ಜೆ, ಸರ್ಕಾರಿ ಪ್ರಾಥಮಿಕ ಶಾಲೆ, ಬೆಟ್ಟತ್ತೂರು, ಮಡಿಕೇರಿ ತಾಲೂಕು. ಸಿಸ್ಟರ್ ಮೇರಿ ಸಿಸಿಲ್ಲಾ, ಸಂತ ಮೈಕಲರ ಹಿರಿಯ ಪ್ರಾಥಮಿಕ ಶಾಲೆ, ಮಡಿಕೇರಿ. ಜಾನ್ಸಿ. ಟಿ ಕ್ರೆಸಾ, ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ, ಮಡಿಕೇರಿ. ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಹಿರಿಯ ಪ್ರಾಥಮಿಕ ಶಾಲೆ, ಮುಜಾಮಿಲ್ ಅಕ್ತರ್, ಸ.ಹಿ.ಪ್ರಾ.ಶಾಲೆ (ಉರ್ದು), ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು ಪ್ರಿಯಾ ಬಿ.ವಿ. ಮುಖ್ಯೋಪಾಧ್ಯಾಯರು, ಎಸ್.ಜೆ.ಎಂ ಆಂಗ್ಲ ಮಾಧ್ಯಮ ಪ್ರಾ ಶಾಲೆ, ಮಾದಾಪುರ. ಸೋಮವಾರಪೇಟೆ ತಾಲೂಕು ರಾಣಿ ಎಸ್, ಓ.ಎಲ್.ವಿ ಸ್ಕೂಲ್, ಸೋಮವಾರಪೇಟೆ ತಾಲೂಕು ಬಿ.ವಿ. ರಾಣಿ, ಸ.ಕಿ.ಪ್ರಾ.ಶಾಲೆ, ಮಣಜೂರು, ರೀಟಾ ಪಿ.ಜೆ, ಜ್ಞಾನಭಾರತಿ ಅನುದಾನಿತ ಶಾಲೆ, ಕುಶಾಲನಗರ ರೇಖಾ. ಸಿ, ಕನ್ನಡ ಶಿಕ್ಷಕರು, ಅಂಜೆಲಾ ವಿದ್ಯಾನಿಕೇತನ ಅನುದಾನರಹಿತ ಶಾಲೆ ಕೂಡಿಗೆ ವಿರಾಜಪೇಟೆ ತಾಲೂಕು ಪ್ರೌಢಶಾಲೆ: ಚೊಕೀರ ಅನಿತಾ, ಸರ್ಕಾರಿ ಪ್ರೌಢಶಾಲೆ, ಬಿಳುಗುಂದ. ವಿರಾಜಪೇಟೆ ತಾಲೂಕು.ಲೊಕೇಶ್ ಎಚ್ ಡಿ, ಮುಖ್ಯ ಶಿಕ್ಷಕರು, ದೇವಣಗೇರಿ ಪ್ರೌಢಶಾಲೆ, ದೇವಣಗೇರಿ, ವಿರಾಜಪೇಟೆ ತಾಲೂಕು, ಮುತ್ತಣ್ಣ ಎಂ.ಯು, ಲಯನ್ಸ್ ಪ್ರೌಢಶಾಲೆ, ಕಳತ್ತ್ಮಾಡು, ಅಮ್ಮತ್ತಿ, ರೇವತಿ ಸರ್ಕಾರಿ ಪ್ರೌಢಶಾಲೆ ಗೋಣಿಕೊಪ್ಪಲು ಅಯ್ಯಪ್ಪ ಪಿ.ಅರ್, ಕರ್ನಾಟಕ ಪಬ್ಲಿಕ್ ಶಾಲೆ, ಪೊನ್ನಂಪೇಟೆ ಪಡಿಞರಂಡ ಪ್ರಭು ಕುಮಾರ್, ವಿಜಯ ಲಕ್ಷ್ಮಿ ಪ್ರೌಢಶಾಲೆ, ಬಾಳೆಲೆ, ಪೊನ್ನಂಪೇಟೆ ತಾಲೂಕು. ಸಂಗನ ಗೌಡ ಪಾಟೀಲ್, ಕೂರ್ಗ್ ಪಬ್ಲಿಕ್ ಶಾಲೆ, ಗೋಣಿಕೊಪ್ಪಲು, ಪೊನ್ನಂಪೇಟೆ ತಾಲೂಕು ಮಡಿಕೇರಿ ತಾಲೂಕು ಪ್ರೌಢಶಾಲೆ: ಭಾರತಿ, ಸರಕಾರಿ ಪ್ರೌಢಶಾಲೆ, ಕಡಗದಾಳು. ಮಡಿಕೇರಿ ತಾಲೂಕು. ಪರಮೆಶ್ ಎಸ್.ಪಿ, ಅನುದಾನಿತ ಪ್ರೌಢಶಾಲೆ, ಚೇರಂಬಾಣೆ. ಮಡಿಕೇರಿ ತಾಲೂಕು ಕೇಟೋಳಿರ ರತ್ನ ಚರ್ಮಣ, ಅಂಕುರ್ ಪಬ್ಲಿಕ್ ಸ್ಕೂಲ್, ನಾಪೋಕ್ಲು ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಪ್ರೌಢಶಾಲೆ ತೇಜಾಕ್ಷಿ. ಎ. ಬಿ. ಸರ್ಕಾರಿ ಪ್ರೌಢಶಾಲೆ, ನೇರುಗಳಲೆ, ಸಂದೇಶ್ ಕೆ ಎಸ್, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ, ಶನಿವಾರಸಂತೆ. ಕಾಂಚನ ಕೆ.ಎಸ್, ಮಸಗೋಡು ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆ ಮಸಗೋಡು, ಸೋಮವಾರಪೇಟೆ ತಾಲೂಕು ಲತಾ ಎಸ್ ಪಿ.ಅಂಜೆಲಾ ವಿದ್ಯಾನಿಕೇತನ ಕೂಡಿಗೆ, ಶೇಖರ್ ಹೆಚ್.ಆರ್, ಕೆ.ಪಿ.ಎಸ್,ಶಾಲೆ, ಶಿರಂಗಾಲ. ಪುಷ್ಪಾ. ಎನ್. ಸದ್ಗರು ಅಪ್ಪಯ್ಯಸ್ವಾಮಿ ಪ್ರೌಢಶಾಲೆ.ಕೂಡಿಗೆ, ವಿರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ಪದವಿ ಪೂರ್ವ ಕಾಲೇಜು ಶೈನ ಕೆ.ಕೆ, ಪ್ರಭಾರ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾಲಿಬೆಟ್ಟ ರೆ.ಫಾ. ಮದಲೈ ಮುತ್ತು, ಪ್ರಾಂಶುಪಾಲರು, ಸಂತ ಅನ್ನಮ್ಮ ಪ.ಪೂ ಕಾಲೇಜು, ವಿರಾಜಪೇಟೆ. .ಕೆ. ಪದ್ಮ, ಪ್ರಾಂಶುಪಾಲರು, ಕಾವೇರಿ ಪ.ಪೂ ಕಾಲೇಜು, ವಿರಾಜಪೇಟೆ. ಲೋಕೇಶ್. ಪಿ.ಎ. ಸರ್ಕಾರಿ ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆ ಕೆ.ಸಿ.ಚಂದ್ರಶೇಖರ್, ಉಪನ್ಯಾಸಕರು, ಶ್ರೀಮಂಗಲ ಪದವಿ ಪೂರ್ವ ಕಾಲೇಜು, ಶ್ರೀಮಂಗಲ ಎಸ್ ರಘುನಾಥ್ , ವಿದ್ಯಾನಿಕೇತಕ ಪ.ಪೂ ಕಾಲೇಜು, ಗೋಣಿಕೊಪ್ಪಲು. ಮಡಿಕೇರಿ ತಾಲೂಕು ಪದವಿ ಪೂರ್ವ ಕಾಲೇಜು ಮುಕ್ತಕೇಶಿ ಪಿ.ಆರ್. ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಡಿಕೇರಿ. ವಾಣಿ ಎನ್. ಎಸ್, ಪ್ರಾಂಶುಪಾಲರು, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜು, ಮದೆನಾಡು. ಸಂಧ್ಯಾ, ವಾಣಿಜ್ಯಶಾಸ್ತ್ರ ಉಪನ್ಯಾಸಕರು, ಸಂತ ಜೋಸೆಫ್ ಪದವಿ ಪೂರ್ವ ಕಾಲೇಜು ಮಡಿಕೇರಿ ಸೋಮವಾರಪೇಟೆ ತಾಲೂಕು ಪದವಿ ಪೂರ್ವ ಕಾಲೇಜು ಚಂದ್ರಶೇಖರ ಕೆ.ಎಂ, ಸರ್ಕಾರಿ ಪದವಿ ಪೂರ್ವ ಕಾಲೇಜು ಆಲೂರು ಸಿದ್ದಾಪುರ, ಸೋಮವಾರಪೇಟೆ ತಾಲೂಕು ಸೋಮಶೇಖರಪ್ಪ, ಪ್ರಾಂಶುಪಾಲರು ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ. ಸರ್ಪರಾಜ್ ಅಹಮ್ಮದ್ , ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜು ಶನಿವಾರಸಂತೆ ರವೀಶ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡಿಗೆ, ಕುಶಾಲನಗರ ತಾ. ವಿಜಯಕುಮಾರ್, ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಹೆಬ್ಬಾಲೆ, ಕುಶಾಲನಗರ ತಾಲೂಕು ಮಂಜುನಾಥ ಸಿ, ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಅವರನ್ನು ಸನ್ಮಾನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರ್ಯದರ್ಶಿ ಲಕ್ಸು ಸೋಮಣ್ಣ, ನಿದೇರ್ಶಕರಾದ ಪ್ರೇಮ್‌ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ವಿಟಿಯುನಲ್ಲಿ ಕನ್ನಡ ಹಬ್ಬ -26 ಸಂಭ್ರಮ
ಗೃಹಲಕ್ಷ್ಮಿ ಹಣದಾಸೆಗೆ ಅಜ್ಜಿ ಕೊಂದ ಮೊಮ್ಮಗ