ನಾಪೋಕ್ಲು : ಧಾರವಾಡ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ 14 ಮತ್ತು 15 ರಂದು ಧಾರವಾಡದ ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 45ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2026 ರಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯಿಂದ ಒಟ್ಟು 24 ಕ್ರೀಡಾಪಟುಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ 17 ಮಂದಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ವಿಜೇತರು: ಹೊಸೋಕ್ಲು ಚಿನ್ನಪ್ಪ 1500ಮೀ 5000ಮೀ ಮತ್ತು 10.000ಮೀ ಓಟದಲ್ಲಿ ಚಿನ್ನದ ಪದಕ, ಬಲ್ಯಮೀದೆರಿರ ಪ್ರಕಾಶ್ 5 ಕಿ ಮೀ ನಡಿಗೆಯಲ್ಲಿ ಚಿನ್ನದ ಪದಕ, ನಂದಿನೇರವಂಡ ಟಿಪ್ಪು ಬಿದ್ದಪ್ಪ 800ಮೀ 1500ಮೀ ಮತ್ತು 5000ಮೀ ಓಟದಲ್ಲಿ ಬೆಳ್ಳಿ ಪದಕ , ಪಟ್ರಪಂಡ ಚಂಗಪ್ಪ 400ಮೀ ಹಡಲ್ಸ್ನಲ್ಲಿ ಚಿನ್ನ 400ಮೀ ಓಟ ಮತ್ತು 100 ಮೀ ಹಡಲ್ಸ್ ನಲ್ಲಿ ಬೆಳ್ಳಿ ಪದಕ, ಟಿ ಹೆಚ್ ಗಣೇಶ್ ತೊರೆನೂರು 1500 ಮೀ 5.000ಮೀ ಮತ್ತು 10.000ಮೀ ಓಟದಲ್ಲಿ ಚಿನ್ನದ ಪದಕ, ಸೂದನ ಡಾಲಿ 800ಮೀ 1.500ಮೀ ಮತ್ತು 5.000ಮೀ ಓಟದಲ್ಲಿ ಬೆಳ್ಳಿ ಪದಕ, ಮೂಡೇರ ಪೊನ್ನಪ್ಪ ಶಾಟ್ ಪುಟ್ ನಲ್ಲಿ ಚಿನ್ನದ ಪದಕ ಹ್ಯಾಮರ್ ಥ್ರೋ ನಲ್ಲಿ ಬೆಳ್ಳಿ ಪದಕ, ಕ್ಯಾಚಮಾಡ ವಿಶು ತಮ್ಮಯ್ಯ 1.500ಮೀ ಚಿನ್ನ ಉದ್ದ ಜಿಗಿತದಲ್ಲಿ ಕಂಚಿನ ಪದಕ, ಅಮೆ ಚಂದ್ರಪ್ರ 100ಮೀಮ ಮತ್ತು 400ಮೀ ಓಟದಲ್ಲಿ ಬೆಳ್ಳಿ ಪದಕ, ಅಮೆ ಜನಾರ್ದನ 800ಮೀ ಓಟದಲ್ಲಿ ಚಿನ್ನದ ಪದಕ, ಸಂತೋಷ್ ಬಿ ಆರ್ 10.000ಮೀ ಓಟದಲ್ಲಿ ಬೆಳ್ಳಿ ಪದಕ, ಕಾವೇರಿ ಮನೆ ಭರತ್ 100ಮೀ ಓಟದಲ್ಲಿ ಬೆಳ್ಳಿ ಪದಕ, ಕಟ್ಟೆಮನೆ ಹನಿ ಸೋಮಯ್ಯ 400ಮೀ ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಮಹಿಳೆಯರ ವಿಭಾಗ: ಮುಲ್ಲೇರ ಪೊನ್ನಮ್ಮಪೂವಣ್ಣ ಶಾಟ್ ಪುಟ್ ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಚೇಮಿರ ಸೀತಮ್ಮ ಶಾಟ್ ಪುಟ್ ಡಿಸ್ಕಸ್ ಥ್ರೋ ಮತ್ತು ಹ್ಯಾಮರ್ ಥ್ರೋ ನಲ್ಲಿ ಚಿನ್ನದ ಪದಕ, ಅರಮಾಣಮಾಡ ಮಮತಾ ಮನು ಜಾಕ್ವೆಲಿನ್ ಥ್ರೋ ನಲ್ಲಿ ಚಿನ್ನ ಶಾಟ್ ಪುಟ್ ಹ್ಯಾಮರ್ ಥ್ರೋ ನಲ್ಲಿ ಬೆಳ್ಳಿ ಪದಕ, ಪ್ರಮೀಳಾ ಶೆಟ್ಟಿ 200ಮೀ ಓಟ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ, ಮುರೇರ ಶಾಂತಿ ಜಾವೆಲಿನ್ ಥ್ರೋ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈ ಮೇಲಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿದ್ದಾರೆ. 2027ರ ಜನವರಿ ತಿಂಗಳಿನಲ್ಲಿ ಲಕ್ನೋ ದಲ್ಲಿ ನಡೆಯಲಿದೆ.