ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ವಿದ್ಯಾರ್ಥಿಗಳ ಕ್ಲಬ್ ನ.21ರಂದು ಜ್ಞಾನ ಸಂಗಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ-26 ಅನ್ನು ಆಯೋಜಿಸಿದೆ.
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ವಿದ್ಯಾರ್ಥಿಗಳ ಕ್ಲಬ್ ನ.21ರಂದು ಜ್ಞಾನ ಸಂಗಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ-26 ಅನ್ನು ಆಯೋಜಿಸಿದೆ.
ರಾಜ್ಯೋತ್ಸವದ ಪ್ರಯುಕ್ತ ಬೆಳಗಾವಿ ಮೂಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೂರು ಸಾಧಕರನ್ನು ಅಭಿನಂದಿಸಲಿದೆ. ಕಾರ್ಯಕ್ರಮದ ಭಾಗವಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಬಿಂಬಿಸುವ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ಕನ್ನಡ ಭಾಷೆ ಬಗ್ಗೆ ತಿಳಿಸಲು ಹಲವು ರೀತಿಯ ಸ್ಪರ್ಧೆಗಳನ್ನು ಆಯೋಜಿಸಿದೆ.ಸಂಜೆ 4 ಗಂಟೆಗೆ ವೈದ್ಯೆ ಡಾ.ಸುಜಾತಾ ಎಂ. ಜಾಲಿ, ಕಲಾವಿದರಾದ ಕಾಡಪ್ಪ ಪ.ಗಾಡಿವಡ್ಡರ್, ಡಾ.ಡಿ.ಎಸ್.ಚೌಗಲೆ ಅವರನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಭಿನಂದಿಸಲಿದ್ದಾರೆ.
ಸಂಜೆ 5 ಗಂಟೆಗೆ ಸರಿಗಮಪ ಖ್ಯಾತಿಯ ಗಾಯಕ- ಗಾಯಕಿಯರಾದ ಶ್ರೀಹರ್ಷ ಎಂ.ಆರ್. ಮತ್ತು ಕುಮಾರಿ ಅಂಕಿತಾ ಕುಂಡು ಅವರು ತಮ್ಮ ಸುಮಧುರ ಗಾಯನದ ಮೂಲಕ ಸಂಗೀತ ರಸಿಕರನ್ನು ರಂಜಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಪ್ರಸಾದ್ ಬಿ. ರಾಂಪುರೆ, ವಿಟಿಯು ಕುಲಸಚಿವರು (ಮೌಲ್ಯಮಾಪನ) ಡಾ.ಯು.ಜೆ.ಉಜ್ವಲ್, ವಿತ್ತಾಧಿಕಾರಿ ಡಾ.ಪ್ರಶಾಂತ ನಾಯಕ ಭಾಗವಹಿಸಿದ್ದಾರೆ ಎಂದು ವಿಟಿಯು ಪ್ರಕಟಣೆ ತಿಳಿಸಿದೆ.