ಕಿಕ್ಕೇರಿ ಡೇರಿ ಅಧ್ಯಕ್ಷರಾಗಿ ಕೆ.ಟಿ.ರಮೇಶ್ ಅವಿರೋಧ ಆಯ್ಕೆ

KannadaprabhaNewsNetwork |  
Published : Aug 20, 2026, 01:45 AM IST
19ಕೆಎಂಎನ್ ಡಿ18 | Kannada Prabha

ಸಾರಾಂಶ

ನಮ್ಮ ತಂದೆ ತಿಮ್ಮೇಗೌಡರು ಡೇರಿಗೆ ಮೂರು ಬಾರಿ ಅಧ್ಯಕ್ಷರಾಗಿದ್ದಾಗ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ತಾನು ಈ ಡೇರಿ ಅಧ್ಯಕ್ಷನಾಗಿ ಎರಡನೇ ಬಾರಿ ಆಯ್ಕೆ ಆಗಿದ್ದು, ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಸದಸ್ಯ ಸಹಕಾರ ಮರೆಯಲಾರೆ. ತಾನು ಈ ಹಿಂದೆ ಅಧ್ಯಕ್ಷನಾಗಿದ್ದ ವೇಳೆ ಡೇರಿ ಬಿಎಂಸಿ ಘಟಕ ಸ್ಥಾಪನೆ ಮಾಡಿಸಲಾಗಿದೆ.

ಕಿಕ್ಕೇರಿ:

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷ ಮಂಜೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕೆ.ಟಿ.ರಮೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 11ಸದಸ್ಯರಲ್ಲಿ ಕೆ.ಜಿ.ತಮ್ಮಣ್ಣ, ನಾಗಪ್ಪ ಅಲ್ಲಬಾವಿ ಗೈರಾದ್ದರು. ನೂತನ ಅಧ್ಯಕ್ಷ ಕೆ.ಟಿ.ರಮೇಶ್ ಮಾತನಾಡಿ, ನಮ್ಮ ತಂದೆ ತಿಮ್ಮೇಗೌಡರು ಡೇರಿಗೆ ಮೂರು ಬಾರಿ ಅಧ್ಯಕ್ಷರಾಗಿದ್ದಾಗ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ತಾನು ಈ ಡೇರಿ ಅಧ್ಯಕ್ಷನಾಗಿ ಎರಡನೇ ಬಾರಿ ಆಯ್ಕೆ ಆಗಿದ್ದು, ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಸದಸ್ಯ ಸಹಕಾರ ಮರೆಯಲಾರೆ. ತಾನು ಈ ಹಿಂದೆ ಅಧ್ಯಕ್ಷನಾಗಿದ್ದ ವೇಳೆ ಡೇರಿ ಬಿಎಂಸಿ ಘಟಕ ಸ್ಥಾಪನೆ ಮಾಡಿಸಲಾಗಿದೆ. ಮನ್ಮುಲ್ ಒಕ್ಕೂಟದಿಂದ ಬರುವ ಎಲ್ಲ ಸೌಲಭ್ಯ ತ್ವರಿತವಾಗಿ ಹಾಲು ವಿತರಕರಿಗೆ ಸಿಗುವಂತೆ ಶ್ರಮಿಸುವೆ ಎಂದರು.

ಡೇರಿಯಲ್ಲಿ 368 ಷೇರುದಾರರು ಇದ್ದು ನಿತ್ಯ ಸುಮಾರು 1650 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ರಿಯಾಯಿತಿ ದರದಲ್ಲಿ ಸಿಗುವ ಫೀಡ್ಸ್ ಖರೀದಿಸಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಸುರೇಶ್ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿ, ಸಂಘದ ಅಭಿವೃದ್ಧಿ, ಹಾಲು ಉತ್ಪಾದಕರ ಹಿತಾಸಕ್ತಿಗೆ ಗಮನಹರಿಸಿ ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷರಿಗೆ ಅಭಿಮಾನಿಗಳು ಪುಷ್ಪಮಾಲೆ ಅರ್ಪಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷ ವಾಸು, ನಿರ್ದೇಶಕರಾದ ಪುಟ್ಟಣ್ಣಯ್ಯ, ಮಂಜೇಗೌಡ, ಪರಮೇಶ್, ಮೋಹನ್, ಮೀನಾಕ್ಷಿ, ಹೇಮಾ, ಪೂರ್ಣಿಮಾ, ಪಲ್ಲವಿ, ನಾಗರಾಜ ಶೆಟ್ಟಿ, ಕಾರ್ಯದರ್ಶಿ ನಾಗೇಶ್, ಮುಖಂಡರಾದ ರಮೇಶ್, ಮಹದೇವು, ಪುಟ್ಟೇಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಗೆಳೆಯನಿದ್ದಂತೆ: ನಾ.ಸು.ನಾಗೇಶ್‌
ಕನಗನಮರಡಿ ಡೇರಿ ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ