ಹಿಂದಿನ ಅಧ್ಯಕ್ಷೆ ಸಾವಿತ್ರಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ರಮೇಶ್ ಹೊರತು ಪಡಿಸಿ ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ.
ಪಾಂಡವಪುರ:
ತಾಲೂಕಿನ ಕನಗನಮರಡಿ ಡೇರಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಮೇಶ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷೆ ಸಾವಿತ್ರಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ರಮೇಶ್ ಹೊರತು ಪಡಿಸಿ ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಸಂಘದ ಕಾರ್ಯದರ್ಶಿ ವರುಣ್ ಘೋಷಿಸಿದರು.
ರಮೇಶ್ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ನೂತನ ಅಧ್ಯಕ್ಷ ರಮೇಶ್ ಅವರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೇರಿದಂತೆ ಸಂಘದ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಮುಖಂಡರು ಅಭಿನಂದಿಸಿದರು.ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ರಮೇಶ್ ಎಲ್ಲರ ಜತೆಗೂಡಿ ಸಂಘವನ್ನು ಮುನ್ನಡೆಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು. ಸಂಘ ಉಪಾಧ್ಯಕ್ಷ ಕೆ.ಜೆ.ಕುಮಾರ್, ನಿರ್ದೇಶಕರಾದ ಗೋಸೇಗೌಡ, ಸುರೇಶ್, ಸ್ವಾಮಿ, ಕೆ.ಎ.ಕುಮಾರ, ಹೊನ್ನೇಗೌಡ, ಎನ್.ಅಂಬುಜ, ಕೆ.ಎಚ್.ಕೇಶವ, ನಂಜಯ್ಯ, ಕೆ.ಜಿ.ಸೋಮಣ್ಣ, ಯಜಮಾನರಾದ ರಾಮಣ್ಣ, ಸುರೇಶ್, ಕೆ.ಎನ್.ನಿಂಗೇಗೌಡ, ತಮ್ಮೇಗೌಡ, ಆರ್.ನಿಂಗೇಗೌಡ, ಚನ್ನೇಗೌಡ, ಬಸವೇಗೌಡ, ಜೆ.ಕೃಷ್ಣಮೂರ್ತಿ, ಕುಮಾರ, ಮುಖಂಡರಾದ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಪುಟ್ಟೇಗೌಡ,ಚಿಕ್ಕಾಡೆ ಚೇತನ್, ಬೊಮ್ಮರಾಜು, ಸುರೇಂದ್ರ, ಮಂಜು, ಚಂದ್ರಶೇಖರ್, ಹೇಮಂತ್ ಕುಮಾರ್, ಪ್ರಭ, ಜೆ.ಶಿವಲಿಂಗೇಗೌಡ, ಆಟೋ ಕುಮಾರ, ಕೆ.ಜೆ.ಚನ್ನೇಗೌಡ, ಟೆಂಪೋಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.ರೈತರ ಸಂಪೂರ್ಣ ಕೃಷಿ, ಹೈನುಗಾರಿಕೆಸಾಲ ಮನ್ನಾ ಮಾಡುವಂತೆ ಆಗ್ರಹ
ಕೆ.ಆರ್.ಪೇಟೆ:ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ರೈತರ ಸಂಪೂರ್ಣ ಕೃಷಿ ಮತ್ತು ಹೈನುಗಾರಿಕೆ ಸಾಲವನ್ನು ಮನ್ನಾ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಮಳೆ ಆಶ್ರಿತ ಪ್ರದೇಶದಲ್ಲಿ ರೈತ ಇದುವರೆಗೂ ಯಾವುದೇ ರೀತಿಯ ಬಿತ್ತನೆ ಕಾರ್ಯ ಮಾಡಿಲ್ಲ. ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆಅಂತರ್ಜಲ ಮಟ್ಟ ಕುಸಿದು ರೈತರ ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ರಾಜ್ಯದ ಅಣೆಕಟ್ಟೆಗಳಲ್ಲಿ ಒಂದಷ್ಟು ನೀರಿದ್ದರೂ ರಾಜ್ಯ ಸರ್ಕಾರ ಅದನ್ನು ಕಾಲುವೆಗಳ ಮುಖಾಂತರ ರೈತರ ಹೊಲಗದ್ದೆಗಳಿಗೆ ಹರಿಸದೆ ಕೃತಕ ಅಭಾವ ಸೃಷ್ಠಿಸಿ ನಾಲಾ ಬಯಲಿನಲ್ಲಿ ಯಾವುದೇ ರೀತಿಯ ಬಿತ್ತನೆ ಚಟುವಟಿಕೆಗಳು ನಡೆಯದಂತೆ ಅಡ್ಡಿ ಮಾಡಿದೆ. ಅಳಿದುಳಿದ ಬೆಳೆಗಳ ಸಂರಕ್ಷಣೆಗೆ ರೈತರು ಪರದಾಡುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದು, ನಾಡಿನ ರೈತರಿಗೆ ಎದುರಾಗಿರುವ ನೀರಿನ ಸಮಸ್ಯೆ ಬಗ್ಗೆ ಸದನದಲ್ಲಿ ಯಾವುದೇ ಜನಪ್ರತಿನಿಧಿ ಗಂಭೀರ ಚರ್ಚೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನಾಡಿನ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬರಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಸಂಸದರು ಪಕ್ಷಾತೀತವಾಗಿ ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಿ ಕೇಂದ್ರದಿಂದ ಗರಿಷ್ಠ ಪ್ರಮಾಣದ ಬರಪರಿಹಾರದ ನೆರವು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.