ಮೂಡಲಗಿ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ)ದ ಪುರುಷ ಕಬಡ್ಡಿ ತಂಡವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 4ನೇ ವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್ ಪಡೆದಿದೆ.
ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ)ದ ಪುರುಷ ಕಬಡ್ಡಿ ತಂಡವು ಸದಲಗಾದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 4ನೇ ವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದು ಸತತ ಎರಡನೇ ಬಾರಿ ಚಾಂಪಿಯನ್‌ಶಿಪ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಂಡದ ನಾಯಕ ಮಲ್ಲಿಕಾರ್ಜುನ ಸುಳ್ಳನವರ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನವಾದರು. ಆಟಗಾರರಾದ ಮಹೇಶ ಕೆಂಚನವರ, ಸಂತೋಷ ಕಿತ್ತೂರ, ಶಂಭುಲಿಂಗ ಮಠಪತಿ, ದಾನೇಶ ಪಾಟೀಲ, ಸಂದೀಪ, ಬಸವರಾಜ ಕೌಜಲಗಿ, ಚೇತನ ಕುಳಲಿ, ವಿಠಲ ಮಚ್ಚೆನ್ನವರ, ಪ್ರಶಾಂತ ನಾಯಿಕ, ನವೀತನ ಮಾದರ, ಶಿವಾನಂದ ಕಮತೆ, ಪ್ರಮೋದ, ಬಾಬುಸಾಬ ಇವರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಮತ್ತು ಆಡಳಿತ ಮಂಡಳಿಯವರು, ಪ್ರಾಚಾರ್ಯ ಡಾ.ಎಂ.ಕೆ. ಕಂಕಣವಾಡಿ ಅವರು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.