ಕಬಡ್ಡಿ ಭಾರತದ ಅತ್ಯಂತ ಪುರಾತನ, ಜನಪ್ರಿಯ ದೇಶಿಯ ಕ್ರೀಡೆ-ಸಚಿವ ಲಮಾಣಿ

KannadaprabhaNewsNetwork |  
Published : Nov 28, 2026, 02:15 AM IST
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಬಡ್ಡಿ ಭಾರತದ ಅತ್ಯಂತ ಪುರಾತನ ಮತ್ತು ಜನಪ್ರಿಯ ದೇಶಿಯ ಕ್ರೀಡೆ, ದೈಹಿಕ ಶಕ್ತಿ, ಚುರುಕುತನ ಮತ್ತು ಮಾನಸಿಕ ಏಕಾಗ್ರತೆ ಸೃಷ್ಟಿಸುವ ಸದರಿ ಕ್ರೀಡೆ ಗ್ರಾಮೀಣ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದು ನಿಂತಿದೆ.

ಬ್ಯಾಡಗಿ: ಕಬಡ್ಡಿ ಭಾರತದ ಅತ್ಯಂತ ಪುರಾತನ ಮತ್ತು ಜನಪ್ರಿಯ ದೇಶಿಯ ಕ್ರೀಡೆ, ದೈಹಿಕ ಶಕ್ತಿ, ಚುರುಕುತನ ಮತ್ತು ಮಾನಸಿಕ ಏಕಾಗ್ರತೆ ಸೃಷ್ಟಿಸುವ ಸದರಿ ಕ್ರೀಡೆ ಗ್ರಾಮೀಣ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದು ನಿಂತಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜವಳಿ ಮತ್ತು ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಶಾಲಾ ಶಿಕ್ಷಣ (ಪದವಿಪೂರ್ವ), ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ ಇವರ ಸಹಕಾರದೊಂದಿಗೆ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನ ರಾಜ್ಯಮಟ್ಟದ ಕಬಡ್ಡಿ ಬಾಲಕಿಯರ 3 ದಿನಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ದೇಶೀಯ ಕ್ರೀಡಾ ಬೆಳವಣಿಗೆಗೆ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಲಿದ್ದು ಸ್ಪಷ್ಟ ಗುರಿಯೊಂದಿಗೆ ಕಬಡ್ಡಿ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರ ಬಹಳ ಮುಖ್ಯವಾಗಿದೆ, ಕಬಡ್ಡಿ ಕ್ರೀಡೆಯನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಖೇಲೋ ಇಂಡಿಯಾ ಯೋಜನೆ '''''''' ಖೇಲೋ ಇಂಡಿಯಾ ಯೂತ್ ಗೇಮ್ಸ್'''''''' ಮತ್ತು ''''''''ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್'''''''' ಗಳಲ್ಲಿ ಕಬಡ್ಡಿ ಸೇರ್ಪಡೆಗೊಳಿಸಲಾಗಿದೆ, ಪ್ರತಿಭಾನ್ವಿತ ಯುವ ಆಟಗಾರರನ್ನು ಗುರ್ತಿಸಿ ದೀರ್ಘಕಾಲೀನ ತರಬೇತಿ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ರಾಷ್ಟ್ರಮಟ್ಟದ ಕ್ರೀಡಾಕೂಟ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂದ್ಯಾವಳಿ ರೂವಾರಿಗಳು ಆಗಿರುವ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ವಿಭಾಗಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ತಳಮಟ್ಟದ ಪ್ರತಿಭೆಗಳನ್ನು ಗುರ್ತಿಸುವ ಕೆಲಸವನ್ನು ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಮೂಲಕ ಮಾಡುತ್ತಾ ಬಂದಿದ್ದೇನೆ. ಇದೀಗ ರಾಜ್ಯಮಟ್ಟ ಕ್ರೀಡಾಕೂಟ ಜರುಗುತ್ತಿದ್ದು, ಬರುವ ಡಿ.16ರಿಂದ 20ರ ವರೆಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸುತ್ತಿದ್ದೇವೆ. ದೇಶದ ವಿವಿಧ ರಾಜ್ಯಗಳಿಂದ ತಂಡಗಳು ತಂಡಗಳು ಬ್ಯಾಡಗಿ ಪಟ್ಟಣಕ್ಕೆ ಅಗಮಿಸುತ್ತಿವೆ ಎಂದ ಅವರು, ಮೆಣಸಿನಕಾಯಿಗೆ ಖ್ಯಾತಿ ಪಡೆದ ರೀತಿಯಲ್ಲಿ ಕಬಡ್ಡಿಯಲ್ಲೂ ಪಂದ್ಯಗಳು ನಡಯಲಿವೆ ಎಂದರು.

ಒಲಿಂಪಿಕ್ಸ್‌ನಲ್ಲಿ ಮಿಂಚಲಿದೆ ಕಬಡ್ಡಿ: ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ''''''''ಪ್ರೊ ಕಬಡ್ಡಿ ಲೀಗ್'''''''' ನಂತಹ ವೇದಿಕೆಗಳಿಂದ ಕಬಡ್ಡಿ ಆಟಗಾರರಿಗೆ ಇಂದು ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವ ದೊರೆಯುತ್ತಿದೆ, ಗ್ರಾಮೀಣ ಭಾಗದ ಇನ್ನಷ್ಟು ಯುವಕರು ಮತ್ತು ಮಹಿಳೆಯರು ಕ್ರೀಡೆಯತ್ತ ಆಕರ್ಷಿತರಾಗಲು ಸರ್ಕಾರದ ನಿರಂತರ ಬೆಂಬಲ ಅತ್ಯಗತ್ಯ, ಇಂತಹ ಪ್ರೋತ್ಸಾಹದಿಂದ ಬರುವ ದಿನಗಳಲ್ಲಿ ಕಬಡ್ಡಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಸ್ಥಾನ ಪಡೆದು ಭಾರತಕ್ಕೆ ಮತ್ತಷ್ಟು ಕೀರ್ತಿ ತರುವುದರಲ್ಲಿ ಸಂಶಯವಿಲ್ಲ ಎಂದರು.

ಇದಕ್ಕೂ ಮುನ್ನ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ಜರುಗಿತು, ಇದಾದ ಬಳಿಕ ರಾಷ್ಟ್ರೀಯ ಕ್ರೀಡಾಪಟು ರುಕ್ಸಾರಬಾನು ಅವರಿಂದ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸಲಾಯಿತು, ನಂತರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಮಾಜಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್‌ ಎರೇಶೀಮಿ, ಎಸ್ಪಿ ಯಶೋದಾ ವಂಟಗೋಡಿ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಗ್ರೇಡ-2 ತಹಸೀಲ್ದಾರ್‌ ಸಾರಿಕಾ ಶಿಂಗನಮಕ್ಕಿ, ಕುಮಾರಗೌಡ್ರ ಪಾಟೀಲ, ದತ್ತಾತ್ರೇಯ ಸಾಳುಂಕೆ, ದುರ್ಗೇಶ ಗೋಣೆಮ್ಮನವರ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ ಗೌರವಾಧ್ಯಕ್ಷ ಗಂಗಣ್ಣ ಎಲಿ, ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಉಪಾಧ್ಯಕ್ಷ ಪ್ರಕಾಶ ಹಾವೇರಿ, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಅಂಗಡಿ, ಮಾಜಿ ಉಪಾಧ್ಯಕ್ಷ ಕರಬಸಪ್ಪ ಬಳ್ಳಾರಿ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಎಲ್.ಮೊಹ್ಮದ ಇಸ್ಮಾಯಿಲ್ , ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹುಳ್ಯಾಳ, ಸೇರಿದಂತೆ ಇನ್ನಿತರರಿದ್ದರು. ಉಪನಿರ್ದೇಶಕ ಮಹದೇವಸ್ವಾಮಿ ಸ್ವಾಗತಿಸಿದರು, ಮಹದೇವ ಕರಿಯಣ್ಣನವರ ನಿರೂಪಿಸಿದರು. ಎಸ್ ಜೆ ಜೆ ಎಂ ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರು
ಸಮಾಜದ ಅಂಕುಡೊಂಕು ತಿದ್ದಿದ ಕನಕದಾಸರು: ಚಂದ್ರಶೇಖರ ಗಾಳಿ