ಜಗತ್ತಿಗೆ ಮಾದರಿ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್‌: ಕೆ.ಎಂ.ಸುರೇಶ

KannadaprabhaNewsNetwork |  
Published : Nov 28, 2026, 02:00 AM IST
26ಕೆಡಿವಿಜಿ9-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ಉದ್ಘಾಟಿಸಿದ ಸಂವಿಧಾನ ದಿನಾಚರಣೆ ಉದ್ಘಾಟನೆ. ................26ಕೆಡಿವಿಜಿ10-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ಉದ್ಘಾಟಿಸಿದ ಸಂವಿಧಾನ ದಿನಾಚರಣೆಯಲ್ಲಿ ಪಕ್ಷದ ಮುಖಂಡರು. | Kannada Prabha

ಸಾರಾಂಶ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷದ ನಾಯಕ, ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಸಂವಿಧಾನದ ಪ್ರತಿ ಕೈಯಲ್ಲಿಡಿದು ದೇಶದ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಂ.ಸುರೇಶ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷದ ನಾಯಕ, ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಸಂವಿಧಾನದ ಪ್ರತಿ ಕೈಯಲ್ಲಿಡಿದು ದೇಶದ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಂ.ಸುರೇಶ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ನೂರಕ್ಕೂ ಹೆಚ್ಚು ಸಲ ತಿದ್ದುಪಡಿ ಮಾಡುವ ಮೂಲಕ ಬಾಬಾ ಸಾಹೇಬರ ಆಶಯಕ್ಕೆ ಧಕ್ಕೆ ಮಾಡಿದ್ದು ಕಾಂಗ್ರೆಸ್ ಎಂದರು.

ವಿಶ್ವದ ಅನೇಕ ದೇಶಗಳು ಅಂಬೇಡ್ಕರ್ ರಚಿಸಿದ ಸಂವಿಧಾನ ಅಧ್ಯಯನ ಮಾಡಿ, ತಮ್ಮ ದೇಶದ ಸಂವಿಧಾನ ರಚಿಸಿವೆ. ಇಡೀ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವೆಂಬ ಹೆಗ್ಗಳಿಕೆ ತಂದು ಕೊಟ್ಟವರು ಅಂಬೇಡ್ಕರ್. ಆದರೆ, ರಾಹುಲ್ ಗಾಂಧಿ ಇಂತಹ ಮಹಾನ್‌ ಸಂವಿಧಾನದ ಪ್ರತಿ ಕೈಯಲ್ಲಿಡಿದು ಏನು ಮಾಡುತ್ತಿದ್ದಾರೆಂಬುದನ್ನೂ ದೇಶದ ಜನತೆ ಗಮನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಭಾರತದ ನೆರೆಯ ದೇಶಗಳಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಜನರು ಧಂಗೆ ಎದ್ದು ಸರ್ಕಾರಗಳನ್ನು ಬುಡಮೇಲು ಮಾಡಿದ ನಿದರ್ಶನಗಳಿವೆ.

ಭಾರತದಲ್ಲೂ ಅಂತಹ ಪ್ರಯತ್ನಗಳು ನಡೆದರೂ ಅದು ಯಶಸ್ವಿಯಾಗಲಿಲ್ಲ. ಭಯೋತ್ಪಾದನೆಯ ಸವಾಲುಗಳ ಮಧ್ಯೆಯೂ ನಮ್ಮ ದೇಶ ಅತ್ಯಂತ ಸುಭದ್ರವಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯದಂತೆ ನಡೆಯುತ್ತಿರುವ ಆಡಳಿತ ಹಾಗೂ ದೇಶದ ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಹೇಳಿದರು.

ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನಕ್ಕೆ ಕನ್ನಡಿಗರ ಕೊಡುಗೆಯೂ ಮಹತ್ವದ್ದಾಗಿದೆ. ಮಂಗಳೂರಿನ ಬೆನಗಲ್‌ ನರಸಿಂಹರಾವ್‌ರವರು ಅಂಬೇಡ್ಕರ್‌ ಜೊತೆಗೆ ಸಂವಿಧಾನ ರಚನೆಯಲ್ಲಿ ಬಹುಮುಖ್ಯಪಾತ್ರ ವಹಿಸಿದ್ದರು. ನರಸಿಂಹರಾವ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ಕಾನೂನು ತಜ್ಞರಾಗಿ ಪ್ರಸಿದ್ಧಿ ಪಡೆದವರಾಗಿದ್ದರು ಎಂದರು.

ದೇಶದಲ್ಲಿ ದಶಕಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸಂ‍ವಿಧಾನಕ್ಕೆ ಗೌರವವನ್ನೇ ನೀಡಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ಸಂವಿಧಾನ ದಿನಾಚರಣೆಯನ್ನು ಆರಂಭಿಸಿದರು. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದ ನೆಲದಲ್ಲಿ ಭಾರತವನ್ನು ಟೀಕಿಸುವ ಮೂಲಕ ದೇಶದ ಗೌರವಕ್ಕೆ ಚ್ಯುತಿಯುಂಟು ಮಾಡುತ್ತಿದ್ದಾರೆ. ಒಬ್ಬ ಪ್ರತಿಪಕ್ಷದ ನಾಯಕನಾಗಿ ಹೀಗೆ ಮಾತನಾಡುವುದು ಯಾರಿಗೂ ಶೋಭೆಯಲ್ಲ ಎಂದು ಆಕ್ಷೇಪಿಸಿದರು.

ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೋತಾಳ್‌, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ್ಮೆ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಯಶವಂತರಾವ್‌ ಜಾಧವ್‌, ಮಾಡಾಳ್‌ ಮಲ್ಲಿಕಾರ್ಜುನ್, ಶ್ರೀನಿವಾಸ ಟಿ.ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಎಸ್.ಎಂ.ವೀರೇಶ ಹನಗವಾಡಿ, ಧನಂಜಯ ಕಡ್ಲೇಬಾಳ್, ಆರ್.ಲಕ್ಷ್ಮಣ, ಐರಣಿ ಅಣ್ಣೇಶ, ಎಚ್.ಪಿ.ವಿಶ್ವಾಸ, ಅನಿಲಕುಮಾರ ನಾಯ್ಕ, ತಾರೇಶನಾಯ್ಕ, ಚೇತನಬಾಯಿ, ಜಯಲಕ್ಷ್ಮಿ ಮಹೇಶ ಪಲ್ಲಾಗಟ್ಟೆ, ಶಾಂತಾ ದೊರೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರಿ ಕುರಿಗಾಹಿಗಳಿದ್ದಲ್ಲೇ ಪಡಿತರ ವಿತರಣೆಗೆ ಕ್ರಮ- ಸಿಎಂ ಡಿಕೆಶಿ ಭರವಸೆ
ಕನಕದಾಸರು ಸಮಾನತೆಯ ಹರಿಕಾರ: ತಂಗಡಗಿ