ಡಿಎಂಜಿ ಹಳ್ಳಿಯಲ್ಲಿ ಸಂಭ್ರಮದ ಕಾಡು ಬಸವೇಶ್ವರ ಜಾತ್ರೆ

KannadaprabhaNewsNetwork |  
Published : Nov 11, 2024, 11:52 PM IST
29 | Kannada Prabha

ಸಾರಾಂಶ

ಮುಂಜಾನೆ 6 ಗಂಟೆಯಿಂದಲೇ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಜಾತ್ರೆಯಲ್ಲಿ ದೊಡ್ಡಮಾರಗೌಡನಹಳ್ಳಿ, ಮರಯ್ಯನಹುಂಡಿ ಮತ್ತು ದೊಡ್ಡಹಟ್ಟಿಹುಂಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ಕಾಡು ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ 2ನೇ ಸೋಮವಾರ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಿತು.

ಮುಂಜಾನೆ 6 ಗಂಟೆಯಿಂದಲೇ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಜಾತ್ರೆಯಲ್ಲಿ ದೊಡ್ಡಮಾರಗೌಡನಹಳ್ಳಿ, ಮರಯ್ಯನಹುಂಡಿ ಮತ್ತು ದೊಡ್ಡಹಟ್ಟಿಹುಂಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ಈ ವೇಳೆ ದೊಡ್ಡಮಾರಗೌಡನಹಳ್ಳಿಯ ಮುಖಂಡರಾದ ಬಿ. ಬಸವರಾಜು, ಬಸವನಾಯಕ, ಶಿವನಂಜೇಗೌಡ, ಬಿ. ನಾಗರಾಜು, ದೊಡ್ಡೇಗೌಡ, ‌ಅಮಾಸನಾಯಕ, ಮರಯ್ಯನಹುಂಡಿ ಗ್ರಾಮದ ವೀರಭದ್ರ, ನಿಂಗರಾಜು, ಬಸವಣ್ಣ, ಮಹದೇವಪ್ಪ, ದೊಡ್ಡಹಟ್ಟಿಹುಂಡಿಯ ಪುಟ್ಟಸ್ವಾಮಿ, ಉದಯ್‌ ಕುಮಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!