ಮಾಧವಾನಂದ ಪ್ರಭುಗಳ ಮಾತಿಗೆ ಕದ್ದಿಮನಿ ಕಟ್ಟಿಬದ್ಧರು

KannadaprabhaNewsNetwork | Published : Oct 20, 2024 2:07 AM

ಸಾರಾಂಶ

ಇಂಚಗೇರಿ ಸಂಪ್ರದಾಯ ಮತ್ತು ಮಾಧವಾನಂದ ಪ್ರಭುಗಳ ಮಾತು ಉಳಿಸುವುದಕ್ಕಾಗಿ ತಮ್ಮ ಜೀವನದುದ್ದಕ್ಕೂ ಸಂಕಷ್ಟದ ಹಾದಿಯಲ್ಲಿಯೇ ನಡೆದುಕೊಂಡು, ಕಡೆಗೊಂದು ದಿನ ಜನರ ಸಹಕಾರದಿಂದ ಇಲ್ಲಿನ ಗಿರಿಮಲ್ಲೇಶ್ವರ ಆಶ್ರಮ ಕಟ್ಟಿ ಗಿರಿಮಲ್ಲೇಶ್ವರ ಮತ್ತು ಮಾಧವಾನಂದರ ನಿತ್ಯ ಪೂಜೆ, ಭಜನೆ, ಆರತಿ ನಡೆಯುವುದಕ್ಕೆ ಕಾರಣವಾದವರೆ ದಿ.ಸಂಗಪ್ಪ ಕದ್ದಿಮನಿ ಮಹಾರಾಜರಾಗಿದ್ದಾರೆ. ಮಾಧವಾನಂದ ಪ್ರಭುಜಿಯವರ ಪರಮ ಭಕ್ತರಾಗಿದ್ದ ಸಂಗಪ್ಪರಿಗೆ ಗುರುವಿನ ಆಶೀರ್ವಾದ ಇದ್ದುದರಿಂದಲೇ ಇಂದು ಅವರ ಪುಣ್ಯರಾಧನೆ ನಡೆಯುವುದೇ ಸಾಕ್ಷಿ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ.ಪೂ.ಸಹಜಾನಂದ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇಂಚಗೇರಿ ಸಂಪ್ರದಾಯ ಮತ್ತು ಮಾಧವಾನಂದ ಪ್ರಭುಗಳ ಮಾತು ಉಳಿಸುವುದಕ್ಕಾಗಿ ತಮ್ಮ ಜೀವನದುದ್ದಕ್ಕೂ ಸಂಕಷ್ಟದ ಹಾದಿಯಲ್ಲಿಯೇ ನಡೆದುಕೊಂಡು, ಕಡೆಗೊಂದು ದಿನ ಜನರ ಸಹಕಾರದಿಂದ ಇಲ್ಲಿನ ಗಿರಿಮಲ್ಲೇಶ್ವರ ಆಶ್ರಮ ಕಟ್ಟಿ ಗಿರಿಮಲ್ಲೇಶ್ವರ ಮತ್ತು ಮಾಧವಾನಂದರ ನಿತ್ಯ ಪೂಜೆ, ಭಜನೆ, ಆರತಿ ನಡೆಯುವುದಕ್ಕೆ ಕಾರಣವಾದವರೆ ದಿ.ಸಂಗಪ್ಪ ಕದ್ದಿಮನಿ ಮಹಾರಾಜರಾಗಿದ್ದಾರೆ. ಮಾಧವಾನಂದ ಪ್ರಭುಜಿಯವರ ಪರಮ ಭಕ್ತರಾಗಿದ್ದ ಸಂಗಪ್ಪರಿಗೆ ಗುರುವಿನ ಆಶೀರ್ವಾದ ಇದ್ದುದರಿಂದಲೇ ಇಂದು ಅವರ ಪುಣ್ಯರಾಧನೆ ನಡೆಯುವುದೇ ಸಾಕ್ಷಿ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ.ಪೂ.ಸಹಜಾನಂದ ಸ್ವಾಮೀಜಿ ನುಡಿದರು.ಸ್ಥಳೀಯ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಗಿರಿಮಲ್ಲೇಶ್ವರ ಮಹಾರಾಜರ ಸಂಘ, ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು, ಹಾಗೂ ಅಧ್ಯಾತ್ಮ ಐಸಿರಿ ಶ್ರೀ ಸಂಗಪ್ಪ ಕದ್ದಿಮನಿ ಮಹಾರಾಜರ ಅನುಭಾವ ಸಂಘ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಿ.ಸಂಗಪ್ಪ ಕದ್ದಿಮನಿಯವರ 6 ನೇ ಪುಣ್ಯಸ್ಮರಣೆ ಸಪ್ತಾಹ ಹಾಗೂ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆ ದೇವರನ್ನು ಸ್ಮರಿಸಿ ನಿತ್ಯ ಪೂಜೆ ಮಾಡುವರಿಗೆ ಎಂದು ಕಷ್ಟ ಕಾರ್ಪಣ್ಯ ಬರುವುದಿಲ್ಲ. ಅಥವಾ ಎಷ್ಟೆ ಕಷ್ಟಗಳಿಂದ್ದರು ಒಂದು ದಿನ ಅವೆಲ್ಲವೂ ಮಾಯವಾಗಿ ಸಂತೋಷದ ಜೀವನ ಸಾಗಿಸುವಂತಾಗುತ್ತದೆ ಎಂಬುದಕ್ಕೆ ದಿ.ಕದ್ದಿಮನಿಯವರೆ ಸಾಕ್ಷಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾಥ ವ್ಯೆದ್ಯ ಡಾ.ಎ.ಆರ್.ಬೆಳಗಲಿ ಗಿರಿಮಲ್ಲೇಶ್ವರರು ಹಾಗೂ ಮಾಧವಾನಂದರನ್ನು ನಂಬಿದವರಿಗೆ ಎಂದು ಕೆಡುಕಾಗುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯೇ ಪ್ರತಿ ಶುಕ್ರವಾರ ಇಲ್ಲಿ ನಡೆಯವ ಸತ್ಸಂಗ ಕಾರ್ಯಕ್ರಮವಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದ ಒತ್ತಡ ಎಷ್ಟೆ ಇದ್ದರು ದಿನದ ಸ್ವಲ್ಪ ಸಮಯವಾದರೂ ದೇವರ ಸ್ಮರಣೆ, ಆಧ್ಯಾತ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ಎಂದರು. ಖ್ಯಾತ ಹೃದಯರೋಗ ತಜ್ಞ ಡಾ.ವಿಜಯ ಹಂಚಿನಾಳ ಮಾತನಾಡಿ, ಮಕ್ಕಳಿಗೆ ವಿದ್ಯಾರ್ಜನೆ ಜೊತೆಗೆ ಸಣ್ಣಂದಿನಿಂದಲೆ ಸಂಸ್ಕಾರ ಕಲಿಸಿಕೊಡಿ. ಮೊಬೈಲ್‌ ಕೊಟ್ಟು ಹಾಳು ಮಾಡಬೇಡಿ. ಮಕ್ಕಳು ವಿದ್ಯೆಯಿಲ್ಲದಿದ್ದರು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬಲ್ಲರು, ಆದರೆ ಸಂಸ್ಕಾರ ಇಲ್ಲದೆ ಬದುಕುವುದು ತುಂಬಾ ಕಷ್ಟ ಎಂದರು.ಕಂಕಣವಾಡಿ ಮಾರುತಿ ಶರಣರು ಮಾತನಾಡಿ, ಶುದ್ಧವಾದ ಬುದ್ಧಿಗೆ ಬೃಹ್ಮ ಗೋಚರವಾಗುತ್ತಾನೆ ಹೊರತು ಅಶುದ್ಧ ಬುದ್ಧಿಗೆ ಅಲ್ಲ. ಇತ್ತೀಚೆಗೆ ಎಲ್ಲರೂ ಬರೀ ಬಟ್ಟೆ ಶುದ್ಧವಾಗಿ ಧರಿಸುತ್ತಾರೆ ಹೊರತು ಮನಸ್ಸನ್ನು ಶುದ್ಧಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದರು.

ಪುರಸಭೆ ಅಧ್ಯಕ್ಷರಾದ ಶ್ರೀ ಯಲ್ಲಣ್ಣಗೌಡ ಪಾಟೀಲರು ಸೇರಿ ಗಣ್ಯಮಾನ್ಯರು ದಿ.ಸಂಗಪ್ಪ ಕದ್ದಿಮನಿಯವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವು ಮೂಲಕ 6 ವರ್ಷದ ಪುಣ್ಯಸ್ಮರಣೆ ಸಪ್ತಾಹ ಸಮಾರಂಭ ಉದ್ಘಾಟಿಸಿದರು.ಪ್ರಶಸ್ತಿ ಪ್ರದಾನ:

ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಗಣ್ಯರಾದ ಬನಹಟ್ಟಿ ಪ್ರಭು ಕೋಪಡರೇ, ಸಂಗಾನಟ್ಟಿ ಖನಿ ವಾದಕರಾದ ಯಮನಪ್ಪ ಗಾಡಿಕಾರ, ಮಹಾಲಿಂಗಪುರದ ಡಾ ಸಂಗಮೇಶ ಹಿಡಕಲ್, ಭಜನಾ ಕಲಾವಿದ ಶಂಕರ ನೀಲಾರಿ, ಗುತ್ತಿಗೆದಾರರದ ಹುಚ್ಛೆಶ ವಡ್ಡರರಿಗೆ ಸೇವಾ ಭೂಷಣ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.ಸತ್ಯಪ್ಪ ಮಹಾರಾಜರು, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಹುಮಾಯಿನ್ ಸುತಾರ, ಎಸ್ ಆರ್ ಹಿಡಕಲ್, ಅರವಿಂದ ವಕೀಲರು, ಆನಂದ ದೇಸಾಯಿ ಮಾತನಾಡಿದರು. ಡಾ ಮಂಜುನಾಥ್ ಚನ್ನಾಳ, ಶ್ರೀಶೈಲ್ ಬಾಡನವರ, ಅಡಿವೆಪ್ಪ ಶಿರೋಳ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಆರ್.ಟಿ.ಪಾಟೀಲ, ಮಹೇಶ ಆರಿ, ಮಹೇಶ ಮಣ್ಣಯ್ಯನವರಮಠ, ಹಣಮಂತ ನಾವಿ, ಅರವಿಂದ ಮಲಬಸರಿ ದುಂಡಪ್ಪ ಸಂತರು, ಡಾ.ಮಹಾದೇವ ಕದ್ದಿಮನಿ, ಶ್ರೀಶೈಲಪ್ಪ ರೊಡ್ಡನ್ನವರ, ಮೈತ್ರಾವತಿ ಕದ್ದಿಮನಿ, ಬಾಬು ಜೇಡರ, ಡಾ.ಜಿ.ಎಂ.ಮಗದುಮ್, ಡಾ.ರಾಚಪ್ಪ ಚಿಮ್ಮಡ, ಚಂದ್ರಪ್ಪ ಡೋಣಿ, ಗುರುಪಾದ ಉರಬಿನವರ, ಪ್ರಕಾಶ ಗೋಕಾಂವಿ, ಮನು ಅಂಬಿ, ಗಿರೀಶ ಶಿರೋಳ, ಗಿರೀಶ ಜಾಧವ, ಗುರು ಕದ್ದಿಮನಿ, ಗೌಡಪ್ಪಗೌಡ ಪಾಟೀಲ, ವಿಠ್ಠಲ ಸೂರನ್ನವರ, ಅರ್ಜುನ್ ಸಣ್ಣಕ್ಕಿ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಡಾ.ಸಿದ್ದಾರೆಡ್ಡಿ, ಡಾ.ಮಾನಾಜಿ ಕಲಾಲ, ಡಾ.ಗಂಗಪ್ಪ ಗೋಲಬಾಂವಿ, ಡಾ.ಅರುಣ ಕುಲಗೋಡ, ಡಾ.ಶಿವಾನಂದ ಮುಳ್ಳೂರ, ಡಾ.ಆರ್.ಆರ್ ಪಾಟೀಲ, ಮಹಾಲಿಂಗ ಹೊಸೂರ, ಕಲ್ಲಪ್ಪ ಚಿಂಚಲಿ ಸೇರಿದಂತೆ ಹಲವರು ಇದ್ದರು.ಬಸವರಾಜ ಮೇಟಿ ನಿರೂಪಿಸಿ, ಲಕ್ಷ್ಮಣ ಕಿಶೋರ ಸ್ವಾಗತಿಸಿ, ಷಣ್ಮುಖ ಕದ್ದಿಮನಿ ವಂದಿಸಿದರು. ಜಾನಪದ ವೈಭವ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಪ್ರದರ್ಶಿಸಿದರು. ಪ್ರತಿ ತಂಡಗಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

Share this article