ಕಡೇಚೂರು: ಕೆಮಿಕಲ್‌ ಕಂಪನಿಗಳ ಕಳ್ಳಾಟ..!

KannadaprabhaNewsNetwork |  
Published : Jun 12, 2025, 02:32 AM ISTUpdated : Jun 12, 2025, 02:33 AM IST
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ. | Kannada Prabha

ಸಾರಾಂಶ

Kadechuru: Theft by chemical companies..!

- ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಮತ್ತೇ ಕಂಡುಬರುತ್ತಿದೆ ‘ಕಳಪೆ’ ವಾತಾವರಣ

- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ : ರಾತ್ರಿ ವೇಳೆ ವಿಷಾನಿಲ, ದುರ್ನಾತದ ಆತಂಕ !

- ಸಾರ್ವಜನಿಕರಿಗೆ ಮಾಹಿತಿ ನೀಡುವ, ಕೈಗಾರಿಕಾ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಮಾಪನ ಉಪಕರಣ ಅಳವಡಿಸಲು ಆಗ್ರಹ

- ಕನ್ನಡಪ್ರಭ ಸರಣಿ ವರದಿ ಭಾಗ : 65

ಕನ್ನಡಪ್ರಭ ವಾರ್ತೆ ಯಾದಗಿರಿ

ಕೆಮಿಕಲ್‌ ಕಂಪನಿಗಳಿಂದ ವಿಷಾನಿಲ ಹಾಗೂ ದುರ್ನಾತದ ಬಗ್ಗೆ ಆರೋಪಗಳು ಮೂಡಿಬಂದಾಗ, ಈ ಕುರಿತು ಪರಿಶೀಲನೆಗೆ ಮೇಲಧಿಕಾರಿಗಳು ತಂಡ ಬರುತ್ತಾರೆ ಎಂದಾಗ ಮಾತ್ರ ಒಂದಿಷ್ಟು ಸದ್ದುಗದ್ದಲ ಕಡಿಮೆ ಮಾಡುವ ಕೆಮಿಕಲ್‌ ಕಂಪನಿಗಳು, ನಂತರದಲ್ಲಿ ಮತ್ತೇ ಎಂದಿನಂತೆ ತಮ್ಮ ಕಳ್ಳಾಟ ಮುಂದುವರೆಸುತ್ತವೆ ಎಂಬ ಸಾರ್ವಜನಿಕರ ಆರೋಪಗಳಿಗೆ ಪುಷ್ಟಿ ನೀಡುವಂತೆ, ಈ ಭಾಗದಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೇ ‘ಕಳಪೆ - ಅನಾರೋಗ್ಯಕ್ಕೆ ಹತ್ತಿರ’ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ.

ಎರಡು ದಿನಗಳ ಹಿಂದಷ್ಟೇ, ಪರಿಸರ ಮಾಲಿನ್ಯ ಷರತ್ತುಗಳ ಉಲ್ಲಂಘಿಸಿದ ಕಾರ್ಖಾನೆಗೆ ಬೀಗಮುದ್ರೆ ಜಡಿದು ಪಾಠ ಕಲಿಸಿದ್ದ ಜಿಲ್ಲಾಡಳಿತಕ್ಕೆ ಸವಾಲು ಎಸಗುವಂತೆ ಕಂಪನಿಗಳು ಇದೀಗ ಮಳೆ ಸುರಿಯುತ್ತಿರುವ ಸಮಯದಲ್ಲಿ ಸದ್ದಿಲ್ಲದೆ ಮಾಲಿನ್ಯಕಾರಕ ಹೊಗೆ- ತ್ಯಾಜ್ಯ ದುರ್ನಾತದ ಹೊರಸೂಸುವಿಕೆಗೆ ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೂ ಸುಮ್ಮನಿದ್ದ ಕೆಲ ಕಂಪನಿಗಳು, ಇದೀಗ ಮತ್ತೇ ತಮ್ಮ ಆಟ ಶುರು ಎಂಬ ಆಕ್ರೋಶ ಅಲ್ಲಿನ ಜನರಲ್ಲಿ ಮೂಡಿಬಂದಿದೆ.

ವಾಯ ಗುಣಮಟ್ಟ ಸೂಚ್ಯಂಕದ ಡಿಜಿಟಲ್‌ ಮಾಪನ ಕೈಗಾರಿಕಾ ಪ್ರದೇಶದಲ್ಲಿ ಬಹಿರಂಗವಾಗಿ ಮೊದಲೇ ಅಳವಡಿಸಬೇಕಿತ್ತು. ಆದರೆ, ಜನರಿಗೆ ಕೆಮಿಕಲ್‌ ಕಂಪನಿಗಳು ಉಗುಳುತ್ತಿರುವ ನೈಜ ಗೊತ್ತಾದರೆ ಮತ್ತೆಲ್ಲಿ ಜನ ವಿರೋಧಕ್ಕೆ ಕಾರಣವಾಗಬಹುದು ಎಂದರಿತು, ಕಂಪನಿಗಳು ಅಧಿಕಾರಿಗಳೊಡಗೂಡಿ ಇಂತಹ ಸೂಚ್ಯಂಕ ಮಾಪನ ಅಳವಡಿಸದೇ ಇರುವಂತೆ ವಶೀಲಿ ನಡೆಸಿದ್ದಾರೆ. ಇದೇ ನೆಪದಲ್ಲಿ, ಮನಸೋಇಚ್ಛೆ ಕಂಪನಿಗಳು ಪರಿಸರಕ್ಕೆ ಕುತ್ತು ತರುತ್ತಿದ್ದಾರಲ್ಲದೆ, ಜನರ ಆರೋಗ್ಯದ ಮೇಲೆಯೂ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿವೆ ಅಂತಾರೆ ಸೈದಾಪುರದ ಭೀಮಣ್ಣ.

-

ಕೋಟ್-1 : ಈ ಪ್ರದೇಶದಲ್ಲಿ ವಾಯು ಸೂಚ್ಯಂಕವು ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಿದೆ. ಇದರ ವಿರುದ್ಧ ಜನರು ದ್ವನಿ ಎತ್ತಿದಾಗ, ಅಧಿಕಾರಿಗಳು ದಾಳಿ ಮಾಡುತ್ತಾರೆ. ಅದನ್ನು ತಿಳಿದ ತಕ್ಷಣವೇ ಮಾಲಿನ್ಯಕಾರಕ ಗಾಳಿಯನ್ನು ಹೊರಗಡೆ ಬಿಡುವುದಿಲ್ಲ, ಆಗ ಅಧಿಕಾರಿಗಳು ಬಂದು ಪರಿಶೀಲಿಸಿದಾಗ ಗಾಳಿ ಸೂಚ್ಯಂಕ ಸಾಮಾನ್ಯವಾಗಿರುತದೆ. ಇಲ್ಲಿನ ಹಲವು ಕಂಪನಿಗಳು ನಿಯಮಗಳನ್ನು ಮೀರಿ ಕಳ್ಳಾಟವಾಡುತ್ತಿವೆ.ಇದನ್ನು ತಪ್ಪಿಸಲು ಜಿಲ್ಲಾಡಳಿತ, ಕೆಎಐಡಿಬಿ, ಕೈಗಾರಿಕೆ ಅಥವಾ ಪರಿಸರ ಇಲಾಖೆ ಯಾಗಲಿ ಈ ಭಾಗದ ಐದಾರೂ ಗ್ರಾಮಗಳಲ್ಲಿ ದೊಡ್ಡ ಗಾಳಿ ಸೂಚ್ಯಂಕ ಯಂತ್ರದ ಪರದೆಗಳನ್ನು ಅಳವಡಿಸಬೇಕು. ಇದರಿಂದ ಜನರಿಗೆ ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. : ನೀಲಕಂಠ, ಮುನಗಾಲ್. (11ವೈಡಿಆರ್13)

-

11ವೈಡಿಆರ್‌11 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.

11ವೈಡಿಆರ್12 : ಜೂ.11 ರಂದು ನಸುಕಿನ 5.50 ರ ಸುಮಾರಿಗೆ ವಾಯು ಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲಿತ್ತು.

11ವೈಡಿಆರ್‌13 : ನೀಲಕಂಠ, ಮುನಗಾಲ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ