ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ

KannadaprabhaNewsNetwork |  
Published : Mar 27, 2026, 02:45 AM IST
ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟನೆ ನೆರವೇರಿಸುತ್ತಿರುವ ಶಾಸಕ ವೇದವ್ಯಾಸ್‌ ಕಾಮತ್‌  | Kannada Prabha

ಸಾರಾಂಶ

ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ, ಮಲ್ಲಿಕಟ್ಟೆ ಇಲ್ಲಿ ಸುಮಾರು 15 ಲಕ್ಷ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಇತ್ತೀಚಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಮಂಗಳೂರು: ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ, ಮಲ್ಲಿಕಟ್ಟೆ ಇಲ್ಲಿ ಸುಮಾರು 15 ಲಕ್ಷ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಇತ್ತೀಚಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಬಳಿಕ ಮಾತನಾಡಿದ ಶಾಸಕರು, ಸರ್ಕಾರದ ಆರಾಧನಾ ಯೋಜನೆ ಸೇರಿದಂತೆ ವಿವಿಧ ಅನುದಾನಗಳ ಮೂಲಕ ಒಟ್ಟು 15 ಲಕ್ಷ ರು. ಹೊಂದಿಸಿಕೊಂಡು ದೈವಸ್ಥಾನದ ಚಾಕರಿಯಲ್ಲಿ ತೊಡಗಿರುವವರಿಗೆ ಕೊಠಡಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿರುವುದು ಸಂತಸದ ಕ್ಷಣವಾಗಿದೆ. ಇಲ್ಲಿನ ಬಬ್ಬುಸ್ವಾಮಿಗೆ ಸ್ವರ್ಣ ಕವಚ ಮೊಗ ಹಾಗೂ ಸ್ವರ್ಣ ಕವಚ ಖಡ್ತಲೆ ಸಮರ್ಪಣೆಯಾಗಿದೆ.

ಪಾಲಿಕೆ ಮಾಜಿ ಸದಸ್ಯ ಮನೋಹರ ಶೆಟ್ಟಿ ಕದ್ರಿಯವರ ವಿಶೇಷ ಮುತುವರ್ಜಿಯಲ್ಲಿ ಈ ದೈವಸ್ಥಾನಕ್ಕೆ ಸುಮಾರು 40 ಲಕ್ಷ ರು. ವೆಚ್ಚದ ಮೇಲ್ಛಾವಣಿ ಸಹಿತ ಇಂಟರ್ ಲಾಕ್ ಕೂಡಾ ನಿರ್ಮಾಣವಾಗಿರುವುದು ವಿಶೇಷ ಸಂಗತಿ ಎಂದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಕದ್ರಿ ಕೃಷ್ಣ ಅಡಿಗ, ಶಿವಪ್ಪ ನಂತೂರು, ಶಕಿಲಾ ಕಾವ, ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್ ಜೆ., ಪ್ರೀತಾನಂದನ್, ಉಷಾ ಪ್ರಭಾಕರ್, ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ಕುಮಾರ್, ಯಶವಂತ ಕುದ್ರೋಳಿ, ಹೇಮಾನಂದ, ಹರೀಶ್ ಶೇಟ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

14 ವರ್ಷದ ಎಲ್ಲ ಬಾಲಕಿಯರು ಉಚಿತ ಲಸಿಕೆ ಹಾಕಿಸಿಕೊಳ್ಳಲು ಸಂಸದ ಕ್ಯಾ. ಚೌಟ ಕರೆ
ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯರ ತೇಜೋವಧೆಗೆ ಆಕ್ಷೇಪ