ಕನ್ನಡಪ್ರಭ ವಾರ್ತೆ ತುಮಕೂರು
ಹೆಬ್ಬೂರಿನ ಶ್ರೀ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿಯಾದ ಡಾ. ಪಾಪಣ್ಣ ಅವರ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಣ್ಣಸ್ವಾಮಿಯ ಕೃಪಾಶೀರ್ವಾದದಿಂದ ಸುಕ್ಷೇತ್ರ ಬಹಳ ಪ್ರವರ್ಧಮಾನಕ್ಕೆ ಬಂದಿದೆ. ಅದೇ ರೀತಿ ಸಮುದಾಯವೂ ಮುಂದೆ ಬರಬೇಕೆಂದರೆ, ಎಲ್ಲಾ ರೀತಿಯ ಸರಕಾರಿ ಸೌಲಭ್ಯಗಳು ಸಮುದಾಯಕ್ಕೆ ದೊರೆಯುವಂತಾದರೆ ಮಾತ್ರ ಸಾಧ್ಯ ಎಂದರು.
ಇಂದು ನಾನು ಶಾಸಕ, ಸಚಿವನಾಗಿದ್ದರೆ ಅದಕ್ಕೆ ಕಾರಣ ಪಾಪಣ್ಣನವರು, ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಜೊತೆಗೆ, ಈ ಭಾಗದ ಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡಿದ್ದಾರೆ. ಇವರ ಈ ಸಮಾಜಸೇವೆ ಹೀಗೆಯೇ ಮುಂದುವರೆಯಲೆಂದು ಶುಭ ಹಾರೈಸಿದರು.ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮಾಜ ಸೇವೆಗೆ ಮತ್ತೊಂದು ಹೆಸರು ಪಾಪಣ್ಣ ಅವರು, ಅವರಿಗೆ ರಾಜಕೀಯ ಅಧಿಕಾರ ದೊರೆಯುವ ಅವಕಾಶ ಒದಗಿ ಬಂದರೂ ಸಹ ನಿರಾಕರಿಸಿ, ಎಲ್ಲ ಪಕ್ಷದ ಮುಖಂಡರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಎಲ್ಲಾ ವರ್ಗಗಳಿಗೂ ಚಿಕ್ಕಣ್ಣಸ್ವಾಮಿ ಕ್ಷೇತ್ರ ಪವಿತ್ರ ದೇವಾಲಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವನಕಲ್ಲು ಮಠದ ಡಾ. ಶ್ರೀಬಸವ ರಮಾನಂದಸ್ವಾಮೀಜಿ ಮಾತನಾಡಿ, ಚಿಕ್ಕಣ್ಣಸ್ವಾಮಿ ಕ್ಷೇತ್ರ ಜಾತಿ, ಮತ, ಪಂಥವಿಲ್ಲದೆ ಎಲ್ಲಾ ವರ್ಗದ ಜನರನ್ನು ಒಳಗೊಂಡ ಪುಣ್ಯಕ್ಷೇತ್ರ. ಹೇಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಧರ್ಮದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆಯೋ, ಅದೇ ರೀತಿ ರಾಜದಲ್ಲಿರುವ ಸುಮಾರು ೭೨ಕ್ಕು ಹೆಚ್ಚು ಬುಡಕಟ್ಟು ಸಮುದಾಯಗಳ ಶ್ರೀಕ್ಷೇತ್ರವಾಗಿ ಚಿಕ್ಕಣ್ಣಸ್ವಾಮಿ ಸುಕ್ಷೇತ್ರ ಬೆಳೆಯುತ್ತಿದೆ. ಇದರ ಧರ್ಮದರ್ಶಿಯಾದ ಡಾ. ಪಾಪಣ್ಣ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಮಾಜಸೇವೆಗೆ ಹೆಸರಾಗಿದ್ದಾರೆ. ಇಂತಹವರ ಸಂತತಿ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿಗಳಾದ ಡಾ. ಪಾಪಣ್ಣ ಅವರ ಸುರ್ವಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಡಾ. ಪಾಪಣ್ಣ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ, ಅಭಿಮಾನಿಗಳು, ಹಿತೈಷಿಗಳು ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಣ್ಣಸ್ವಾಮಿ ದೇವಾಲಯದ ಪ್ರಧಾನ ಆರ್ಚಕ ಪೂಜಾರಿ ಚಿಕ್ಕಣ್ಣ, ಶಾಸಕ ಎಸ್.ಟಿ. ಸೋಮಶೇಖರ್, ಬಿಬಿಎಂಪಿ ರಾಜಣ್ಣ, ಮಾಜಿ ಶಾಸಕಿ ಪೂರ್ಣೀಮ ಶ್ರೀನಿವಾಸ್, ಕಾಂಗ್ರೆಸ್ ವಕ್ತಾರ ನಿಖೇತ್ ರಾಜ್ ಮೌರ್ಯ, ಸ್ಪೂರ್ತಿ ಚಿದಾನಂದ್, ಡಾ. ಕರಿಯಣ್ಣ, ಪತ್ರಕರ್ತ ಸಾ.ಚಿ. ರಾಜಕುಮಾರ್, ಬಳಗೆರೆ ಜಯಣ್ಣ, ಮಹಾಲಕ್ಷಮ್ಮ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷಮ್ಮ, ಈರಣಗೌಡ, ದೊಡ್ಡ ಬಾಣಗೆರೆ ಮಾರಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.ಕೋಟ್ಡಾ. ಪಾಪಣ್ಣ ಅವರು ಕರ್ನಾಟಕ ಕೃಷಿಕ ಸಮಾಜದ ಕಾರ್ಯಾಧ್ಯಕ್ಷರಾಗಿ ತಾವು ಬೆಳೆಯುವುದರ ಜೊತೆಗೆ, ಸಮುದಾಯವನ್ನು ಬೆಳೆಸಿದ್ದಾರೆ. ಯಾವ ಕರಪತ್ರ, ಬ್ಯಾನರ್, ಪೋಸ್ಟರ್ ಇಲ್ಲದಿದ್ದರು ಭಕ್ತರು ಚಿಕ್ಕಣ್ಣಸ್ವಾಮಿ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಇದಕ್ಕೆ ಕಾರಣರೂ ಇದರ ಧರ್ಮದರ್ಶಿ ಪಾಪಣ್ಣ ಅವರು, ಅವರ ಈ ಸೇವೆ ಮುಂದುವರೆದು ಮತ್ತಷ್ಟು ಜನರಿಗೆ ಒಳ್ಳೆಯದಾಗಲಿ.