ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀ ಕಟ್ಟೆ ಹೊಳೆಯಮ್ಮ ಜಾತ್ರಾ ಸಮಿತಿಯಿಂದ ಈ ಭಾಗದಲ್ಲಿ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಪಟ್ಟಣಗೆರೆಯ ಶ್ರೀ ಕಟ್ಟೆ ಹೊಳೆಯಮ್ಮ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 5 ರಂದು ನಡೆಸಲು ಶಾಸಕ ಕೆ. ಎಸ್. ಆನಂದ್ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಯಿತು ಎಂದು ಕಡೂರು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್. ಪರಮೇಶ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀ ಕಟ್ಟೆ ಹೊಳೆಯಮ್ಮ ಜಾತ್ರಾ ಸಮಿತಿಯಿಂದ ಈ ಭಾಗದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ಸೆ.15ನೇ ಸೋಮವಾರ ಸಂಜೆ 5 ಗಂಟೆಗೆ ಪಟ್ಟಣಗೆರೆ ಕಟ್ಟೆ ಹೊಳೆಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ತಿಳಿಸಿದರು.ತಾಲೂಕಿನಲ್ಲಿ ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸೋಣ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿ ಶುಭಾಶಯ ಕೋರಿದರು. ಚಿಕ್ಕಮಗಳೂರು ತಾಲೂಕು ಕಸಾಪ ಮಹಿಳಾ ಘಟಕ ರಾಜ್ಯದಲ್ಲಿಯೇ ಪ್ರ ಪ್ರಥಮವಾಗಿ ಕೈಗೊಂಡ ತಾಲೂಕು ಮಹಿಳಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್ ಗೌರಿ ಹಬ್ಬದ ಪ್ರಯುಕ್ತ ಅರಿಶಿಣ ಕುಂಕುಮ ಬಳೆ, ಹೂವು, ಬೆಳ್ಳಿ ದೀಪ ನೀಡಿದರು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡರಿಗೆ ಕೈಗೆ ಬಳೆ ತೊಡಿಸುವ ಮೂಲಕ ಭಾಗ್ಯದ ಬಳೆಗಾರನಾಗಿ ಗೌರವ ಸಲ್ಲಿಸಿದರು.12ಕೆಕೆಡಿಯು2.ಅಕ್ಟೋಬರ್ 5 ರಂದು ಕಡೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಪಟ್ಟಣಗೆರೆಯ ಶ್ರೀ ಕಟ್ಟೆ ಹೊಳೆಯಮ್ಮ ದೇವಸ್ಥಾನದ ಆವರಣದಲ್ಲಿ ನಡೆಸಲು ಶಾಸಕ ಕೆ ಎಸ್. ಆನಂದ್ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಯಿತು ಎಂದು ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿಕ್ಕನಲ್ಲೂರು ಎಸ್ ಪರಮೇಶ್ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಶ್ರೀ ಕಟ್ಟೆ ಹೊಳೆಯಮ್ಮ ಜಾತ್ರಾ ಸಮಿತಿ ವತಿಯಿಂದ ಈ ಭಾಗದಲ್ಲಿ ಸಮ್ಮೇಳನ ಆಯೋಜಿಸಲಾ