- ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಗೆ ಜಯ। ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಮುಂದಿನ ದಿನಗಳಲ್ಲಿ ಬೀರೂರಿನ ಸರ್ವತೋಮುಖ ಅಭಿವೃದ್ಧಿಗೆ ನೂತನ ಸಂಸದರು ಕೈಜೋಡಸಿ ಅಭಿವೃದ್ಧಿ ಕಾರ್ಯ ಮಾಡುತ್ತಾರೆ ಇದರಲ್ಲಿ ಸಂಶಯವಿಲ್ಲ. ಇಂತಹ ಬಡಮಗನ ಗೆಲುವಿಗೆ ಸಹಕರಿಸಿದ ಕಡೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿ, ಬರುವ ದಿನಗಳಲ್ಲಿ ಶ್ರೇಯಸ್ ಪಟೇಲ್ ವಿಜಯೋತ್ಸವಕ್ಕೆ ಬಂದಾಗ ಅದ್ಧೂರಿಯಾಗಿ ಸ್ವಾಗತಿಸಿ ಸಂಭ್ರಮಿಸೋಣ ಎಂದರು.ಕಾಂಗ್ರೆಸ್ ಮುಖಂಡ ಕೀರ್ತಿ ಯತೀಶ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಉಚಿತ ಭಾಗ್ಯಗಳನ್ನು ಜನ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಹಾಸನ ಲೋಕಸಭೆ ಶ್ರೇಯಸ್ ಪಟೇಲ್ ಗೆಲುವು ನಿದರ್ಶನ. ಕಡೂರು ಕ್ಷೇತ್ರದ ಅಭಿವೃದ್ಧಿಗೆ ನೂತನ ಸಂಸದರು ಸಹ ಅತಿ ಹೆಚ್ಚಿನ ಸಹಕಾರ ನೀಡಲಿದ್ದು, ಬಯಲು ಸೀಮೆ ಭಾಗದ ರೈತರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಮುಕ್ತಿ ದೊರಕಲಿದೆ ಎನ್ನುವ ಆಶಾಭಾವ ವ್ಯಕ್ತಪಡಿಸಿದರು.ಕಾಂಗ್ರೆಸ್‌ನ ಹಿರಿಯ, ಮಾದಿಗ ಸಮಾಜದ ಮುಖಂಡ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಇದು ಉಳ್ಳ ವರ ಜೊತೆ ಸೆಣಸಾಡಿ ಬಡವರಿಗೆ ಮತದಾರರು ನೀಡಿದ ಗೆಲುವು. ಚುನಾವಣೆಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರ ಶ್ರಮಕ್ಕೆ ದೇವರು ನೀಡಿದ ವರ. ಜನ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ಕಡೂರು ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕನನ್ನಾಗಿಸಿದ ಜನತೆ, ಲೋಕಸಭೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಮತ್ತೆ ಗೆಲ್ಲಿಸುವ ಮೂಲಕ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಡಿಶ್ ರವಿ, ಮುಕುಂದ, ಶಿವಣ್ಣ, ಅದ್ದೂರಿ ಪ್ರಭು, ಹರ್ಷ, ವಿನೋದ್, ಬಿ.ಜಿ.ಮೈಲಾರಪ್ಪ, ಸದಾನಂದ, ಮತ್ತಿತರ ಕಾರ್ಯಕರ್ತರು ಇದ್ದರು.4 ಬೀರೂರು 1ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಜಯಗಳಿಸಿದ ಹಿನ್ನಲೆಯಲ್ಲಿ ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ , ಸಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು. ಪುರಸಭಾ ಸದಸ್ಯ ಬಿ.ಕೆ.ಶಶಿಧರ್, ಕೀರ್ತಿ ಯತೀಶ್, ಬಿ.ಟಿ.ಚಂದ್ರಶೇಖರ್ ಮತ್ತಿತರಿದ್ದರು.