ಕನ್ನಡಪ್ರಭ ವಾರ್ತೆ ಕವಿತಾಳ:
ಇಲ್ಲಿನ ಮುಖ್ಯ ರಸ್ತೆಯ ಶಿವಪ್ಪ ತಾತನ ಮಠದ ಹತ್ತಿರ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಣೆ ಮಾಡಿದರು. ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ರಾಮಯ್ಯ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಪರ ಘೋಷಣೆ ಕೂಗಿದರು.
ಈ ವೇಳೆ ಅಯ್ಯಪ್ಪ ತೋಳ, ಮೌನೇಶ ಹಿರೇಕುರಬರು, ಓವಣ್ಣ, ಅಲ್ಲಮಪ್ರಭು, ಚಂದ್ರು, ಮೌನೇಶ ಕೊಡ್ಲಿ, ಎಲ್ಲಾಲಿಂಗ ತೋಳ, ಬೂದೆಪ್ಪ ಯಾದವ್, ನಬಿಸಬ್ ಕುರೆಷಿ, ಶಿವು ಕಬ್ಬರ್, ನಿಂಗಪ್ಪ ದಡ್ದೆಳ, ರಾಮು, ಸಿದ್ದಪ್ಪ, ನಂದೇಶ ತಪ್ಪಲಾದೊಡ್ಡಿ, ಅಂಜನಯ್ಯ ದಿನ್ನಿ, ಶಲೀಮ್, ಲಿಂಗರಾಜ ಪೂಜಾರಿ, ವಲಿ ಭಾಗವಹಿಸಿದ್ದರು.ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಸಾಧಸಿದ ಹಿನ್ನೆಲೆ ಸಮೀಪದ ಪಾಮನಕಲ್ಲೂರು ಹಾಗೂ ಮಲ್ಲದಗುಡ್ಡ ಗ್ರಾಮದಲ್ಲಿ ಪರಸ್ಪರ ಬಣ್ಣ ಎರಚಿದರು ಹಾಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.