ಎನುಮೆರೇಶನ್‌ ವಿತರಣೆಯಲ್ಲಿ ಕಾಫಿನಾಡಿಗೆ 33ನೇ ಸ್ಥಾನ

KannadaprabhaNewsNetwork |  
Published : Jul 03, 2026, 01:15 AM IST
ಡಿಸಿ | Kannada Prabha

ಸಾರಾಂಶ

ಚಿಕ್ಕಮಗಳೂರುಭಾರತ ಚುನಾವಣಾ ಆಯೋಗದ ನಡೆಸುತ್ತಿರುವ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಎನುಮೆರೇಶನ್‌ ಫಾರಂ ವಿತರಣೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಂತ ನೀರಸ ಸಾಧನೆ ವ್ಯಕ್ತವಾಗಿದೆ.

ಚಿಕ್ಕಮಗಳೂರಿನ ಅಧಿಕಾರಿ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯದ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿ ನಿಂತಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭಾರತ ಚುನಾವಣಾ ಆಯೋಗದ ನಡೆಸುತ್ತಿರುವ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಎನುಮೆರೇಶನ್‌ ಫಾರಂ ವಿತರಣೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಂತ ನೀರಸ ಸಾಧನೆ ವ್ಯಕ್ತವಾಗಿದೆ.

ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಎಸ್‌ಐಆರ್‌ ಅಡಿ ಎನುಮೆರೇಶನ್‌ ಫಾರಂ ವಿತರಣೆ ಮಾಡಲಾಗುತ್ತಿದೆ. ಆದರೆ, ಚಿಕ್ಕಮಗಳೂರಿನ ಅಧಿಕಾರಿ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯದ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿ ನಿಂತಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,230 ಬೂತ್‌ಗಳಿದ್ದು, ತಲಾ ಒಬ್ಬ ಬಿಎಲ್‌ಒ ನೇಮಿಸಲಾಗಿದೆ. ಇನ್ನೂ 9.60 ಲಕ್ಷ ಮತದಾರರಿದ್ದು, ಈ ಪೈಕಿ ಗುರುವಾರ ಸಂಜೆ ವರೆಗೆ ಕೇವಲ 1,00,871 ಮತದಾರರಿಗೆ ಎನುಮೆರೇಶನ್‌ ಫಾರಂ ತಲುಪಿಸಲಾಗಿದೆ. ಇನ್ನೂ 8.50 ಲಕ್ಷಕ್ಕೂ ಅಧಿಕ ಮತದಾರರಿಗೆ ಎನುಮರೇಶನ್‌ ಫಾರಂ ವಿತರಣೆ ಮಾಡುವುದು ಬಾಕಿ ಇದೆ. ಒಟ್ಟು ಮತದಾರರಲ್ಲಿ ಶೇ.10.50 ರಷ್ಟು ಮಂದಿಗೆ ಫಾರಂ ಸಿಕ್ಕಿದೆ. ಫಾರಂ ವಿತರಣೆಯಲ್ಲಿ ಒಟ್ಟಾರೆ ರಾಜ್ಯ ಸರಾಸರಿ ಶೇ.20.32 ರಷ್ಟು ಇದ್ದು, ಅರ್ಧಕ್ಕೆ ಅರ್ಧದಷ್ಟು ಕಡಿಮೆ ವಿತರಣೆ ಆಗಿರುವುದು ಕಂಡು ಬಂದಿದೆ.

ಇನ್ನೂ ಕೇವಲ 27 ದಿನ ಮಾತ್ರ ಬಾಕಿ ಇದ್ದು, ಎನುಮರೇಶನ್‌ ಫಾರಂ ವಿತರಣೆ ಮಾಡಿ, ಮತದಾರರಿಂದ ಫಾರಂ ಭರ್ತಿ ಮಾಡಿಸಿ ವಾಪಾಸ್‌ ಪಡೆದು ಭಾರತ ಚುನಾವಣಾ ಆಯೋಗದ ಆ್ಯಪ್‌ಗೆ ಅಪ್‌ಡೇಟ್‌ ಮಾಡಬೇಕಿದೆ. ಜು. 29ರ ಒಳಗೆ ಎಲ್ಲ ಮತದಾರರಿಂದ ಎನುಮೆರೇಶನ್‌ ಫಾರಂ ಭರ್ತಿ ಮಾಡಿಸಿಕೊಂಡು ವಾಪಾಸ್‌ ಪಡೆಯಬೇಕಿದೆ. ಯಾವುದೇ ಕಾರಣ ಅವಧಿ ವಿಸ್ತರಣೆ ಇಲ್ಲ. ಈ ಎಲ್ಲ ತಿಳಿದ್ದರೂ ಸಹ ಬಿಎಲ್‌ಒಗಳು ತ್ವರಿತವಾಗಿ ಎನುಮೆರೇಶನ್‌ ಫಾರಂ ವಿತರಣೆ ಮಾಡದಿರುವುದು ಕಂಡು ಬಂದಿದೆ.

ಶೃಂಗೇರಿಯಲ್ಲಿ ಅತಿ ಕಡಿಮೆ

ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಕಡಿಮೆ ಮತದಾರರು ಇರುವ ಹಾಗೂ ಅತಿ ಹೆಚ್ಚು ಮತಗಟ್ಟೆ ಹೊಂದಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಎನುಮೆರೇಶನ್‌ ಫಾರಂ ವಿತರಣೆ ಆಗಿರುವುದು ಕಂಡು ಬಂದಿದೆ. ಒಟ್ಟು 1,67,171 ಮತದಾರರಿದ್ದು, 256 ಮತಗಟ್ಟೆ ಇವೆ. ಆದರೂ ಈವರೆಗೆ ಕೇವಲ 10,508 ಎನುಮೆರೇಶನ್‌ ಫಾರಂ ಮತ ದಾರರಿಗೆ ತಲುಪಿಸಲಾಗಿದೆ. ಶೇ.6.28 ರಷ್ಟು ಸಾಧನೆ ಆಗಿದೆ. ತರೀಕೆರೆ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇ.16.29 ರಷ್ಟು ಫಾರಂ ವಿತರಣೆ ಪೂರ್ಣಗೊಳಿಸಿದೆ.

--ಬಾಕ್ಸ್‌---

ಫಾರಂ ವಿತರಣೆಗೆ ಹೆಚ್ಚು ಗಮನ ಕೊಡಿ: ಡಿಸಿಚಿಕ್ಕಮಗಳೂರು ಜಿಲ್ಲೆ ಅತಿ ಕಡಿಮೆ ಎನುಮೆರೇಶನ್‌ ಫಾರಂಗಳನ್ನು ಮತದಾರರಿಗೆ ತಲುಪಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ವಿಧಾನಸಭಾ ಕ್ಷೇತ್ರವಾರು ಗುರುವಾರ ಸಂಜೆ ಆನ್‌ಲೈನ್‌ ಸಭೆ ನಡೆಸಿದ್ದಾರೆ. ಈ ವೇಳೆ ಮೊದಲು ಎನುಮೆರೇಶನ್‌ ಫಾರಂ ವಿತರಣೆ ಮಾಡುವುದಕ್ಕೆ ಆದ್ಯತೆ ನೀಡಬೇಕು. ಆ ನಂತರ ಭರ್ತಿ ಮಾಡಿಸಿಕೊಂಡು ವಾಪಾಸ್‌ ಪಡೆಯಿರಿ ಎಂದು ಬಿಎಲ್‌ಒಗಳಿಗೆ ಸೂಚಿಸಿದ್ದಾರೆ.

---ಬಾಕ್ಸ್‌---

ಬಿಎಲ್‌ಒಗೆ ಗ್ರಾಪಂ ಅಧಿಕಾರಿ ಸಿಬ್ಬಂದಿ ಸಾಥ್‌

ಎಸ್‌ಐಆರ್‌ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಬಿಎಲ್‌ಒಗಳ ಮೇಲೆ ಇರುವುದರಿಂದ ಕಾರ್ಯಭಾರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಎನುಮೆರೇಶನ್‌ ಫಾರಂ ವಿತರಣೆ, ಭರ್ತಿ ಮಾಡಿ ವಾಪಾಸ್‌ ಪಡೆಯುವುದಕ್ಕೆ ಸೇರಿದಂತೆ ಮೊದಲಾದ ಕಾರ್ಯಗಳಿಗೆ ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಅಧಿಕಾರಿ ಸಿಬ್ಬಂದಿ ಸಾಥ್‌ ನೀಡಬೇಕು. ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿ ಸಿಬ್ಬಂದಿ ಸಹಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಆದೇಶಿಸುವುದಕ್ಕೆ ತೀರ್ಮಾನಿಸಲಾಗಿದೆ.

--- ಕೋಟ್‌---

ಚಿಕ್ಕಮಗಳೂರು ಜಿಲ್ಲೆಯ ಘಟ್ಟ ಪ್ರದೇಶವಾಗಿರುವುದು ಒಂದ ಮನೆಯೊಂದ ಮತ್ತೊಂದು ಮನೆ ದೂರ, ಹೀಗಾಗಿ, ಬಿಎಲ್‌ಒ ಎನುಮೆರೇಶನ್‌ ಫಾರಂ ವಿತರಣೆಯೊಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಭರ್ತಿ ಮಾಡಿ ಫಾರಂ ವಾಪಾಸ್‌ ಪಡೆಯುವುದಕ್ಕೆ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿತರಣೆ ವೇಗ ಕಡಿಮೆ ಇತ್ತು. ಇದೀಗ ಮೊದಲ ನಾಲ್ಕೈದು ದಿನ ಫಾರಂ ವಿತರಣೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಮುಂದಿನ ಎರಡು ಮೂರು ದಿನಕ್ಕೆ ಉತ್ತಮ ಪ್ರಗತಿ ಆಗಲಿದೆ.

-ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾಧಿಕಾರಿ ಚಿಕ್ಕಮಗಳೂರು---ಬಾಕ್ಸ್‌---

ಫಾರಂ ವಿತರಣೆ ವಿವರ

ವಿಧಾನಸಭಾ ಕ್ಷೇತ್ರಒಟ್ಟು ಮತದಾರರುಎನುಮೆರೇಶನ್‌ ವಿತರಣೆಶೇಕಡ

ಶೇಂಗೇರಿ167171105086.28

ಮೂಡಿಗೆರೆ167299154819.25

ಚಿಕ್ಕಮಗಳೂರು226934223789.86

ತರೀಕೆರೆ1920873130916.29

ಕಡೂರು2067402119510.25

ಒಟ್ಟು9,602311,0087110.50

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡ ಜಯಂತಿ ವೇಳೆ ಗದ್ದಲ: ಸಂಸದ ಸುಧಾಕರ್‌ ವಿರುದ್ಧ ತನಿಖೆಗೆ ಆಗ್ರಹ
ಫ.ಗು. ಹಳಕಟ್ಟಿ ಸೇವೆ ಅವಿಸ್ಮರಣೀಯ: ಅಪರ ಡಿಸಿ ಡಾ. ಭಾಸ್ಕರ್