ಅವಧಿ ಮುಗಿಯುತ್ತಿದ್ದರೂ ಕೋರಿದ ಕೆಲಸ ಆಗಿಲ್ಲ: ನಗರ ಸಭೆ ಸದಸ್ಯರು

KannadaprabhaNewsNetwork |  
Published : Jul 03, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕಳೆದ ಎರಡು ವರ್ಷದಿಂದ ಮನವಿ ಮಾಡಿದರೂ ವಿದ್ಯುತ್‌ ಕಂಬ ಅಳವಡಿಸಿಲ್ಲ. 150 ಮೀ.ಕುಡಿಯುವ ನೀರಿನ ಪೈಪ್‌ ಅಳವಡಿಕೆಗೆ ಕೋರಿ 4 ತಿಂಗಳಾಗಿದೆ. ವಿದ್ಯುತ್‌ ದೀಪ ರಿಪೇರಿ ಆಗುತ್ತಿಲ್ಲ. ರಸ್ತೆಯ ಪಾದಚಾರಿ ಮಾರ್ಗ ಕುಸಿದಿವೆ, ಡಿವೈಡರ್‌ಗಳ ಮೇಲೆ ಭಾರೀ ಪ್ರಮಾಣದ ಕಳೆ ಬೆಳೆದು ನಿಂತಿದೆ. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಸ ಗುಡಿಸುವುದಕ್ಕೆ ಪೌರಕಾರ್ಮಿಕರು ಸರಿಯಾಗಿ ಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಳೆದ ಎರಡು ವರ್ಷದಿಂದ ಮನವಿ ಮಾಡಿದರೂ ವಿದ್ಯುತ್‌ ಕಂಬ ಅಳವಡಿಸಿಲ್ಲ. 150 ಮೀ.ಕುಡಿಯುವ ನೀರಿನ ಪೈಪ್‌ ಅಳವಡಿಕೆಗೆ ಕೋರಿ 4 ತಿಂಗಳಾಗಿದೆ. ವಿದ್ಯುತ್‌ ದೀಪ ರಿಪೇರಿ ಆಗುತ್ತಿಲ್ಲ. ರಸ್ತೆಯ ಪಾದಚಾರಿ ಮಾರ್ಗ ಕುಸಿದಿವೆ, ಡಿವೈಡರ್‌ಗಳ ಮೇಲೆ ಭಾರೀ ಪ್ರಮಾಣದ ಕಳೆ ಬೆಳೆದು ನಿಂತಿದೆ. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಸ ಗುಡಿಸುವುದಕ್ಕೆ ಪೌರಕಾರ್ಮಿಕರು ಸರಿಯಾಗಿ ಬರುತ್ತಿಲ್ಲ.

- ಹೀಗೆ, ಹತ್ತಾರು ಸಮಸ್ಯೆಗಳ ಬಗ್ಗೆ ಚಿಕ್ಕಮಗಳೂರು ನಗರ ಸಭೆ ಆಡಳಿತ ಪಕ್ಷದ ಸದಸ್ಯರೇ ಹೆಚ್ಚು ದೂರಿದ ಸನ್ನಿವೇಶ ಗುರುವಾರ ಸಾಮಾನ್ಯ ಸಭೆಯಲ್ಲಿ ಜರುಗಿತು.

ಚಿಕ್ಕಮಗಳೂರು ನಗರ ಸಭೆ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ಭವ್ಯಾ ಮಂಜುನಾಥ್‌ ನೇತೃತ್ವದಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ರಸ್ತೆ ಗುಂಡಿ, ಕುಡಿಯುವ ನೀರಿನ ಸಮಸ್ಯೆ, ಕಾಮಗಾರಿ, ಅಧಿಕಾರಿ ಸಿಬ್ಬಂದಿ ಅಸಹಕಾರ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಸಭೆ ಮುಂದಿಟ್ಟರು.

ಈಗಾಗಲೇ ನಗರ ಸಭೆ ಸದಸ್ಯರ ಅಧಿಕಾರ ಕೆಲವೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಅಧಿಕಾರಾವಧಿಯಲ್ಲಿ ವಾರ್ಡ್‌ನ ಕನಿಷ್ಠ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಿಲ್ಲ ಎಂದರೆ ಜನಸಾಮಾನ್ಯರಿಗೆ ಏನು ಉತ್ತರ ನೀಡಬೇಕು ಎಂದು ಪ್ರಶ್ನಿಸಲಾಯಿತು.

ಕಳೆದ 2 ವರ್ಷದ ಹಿಂದೆ ವಾರ್ಡ್‌ನಲ್ಲಿ ವಿದ್ಯುತ್‌ ಕಂಬ ಅಳವಡಿಕೆಗೆ ಮನವಿ ಮಾಡಿದ್ದು ಈವರೆಗೆ ಕಂಬ ಮತ್ತು ವಿದ್ಯುತ್‌ ದೀಪ ಅಳವಡಿಸಿಲ್ಲ. ಸಂಬಂಧಿತ ಎಂಜಿನಿಯರ್‌ಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಪ್ರತಿ ದಿನ ವಾರ್ಡ್‌ನ ಜನರಿಗೆ ಸುಳ್ಳು ಹೇಳಿಕೊಂಡು ಓಡಾಡಲು ಸಾಧ್ಯವಿಲ್ಲ. ವಿದ್ಯುತ್‌ ಕಂಬ ಯಾವಾಗ ಅಳವಡಿಸುತ್ತೀರಾ ಹೇಳಿ ಎಂದು ಸದಸ್ಯ ಮಧುಕುಮಾರ್ ರಾಜ್ ಅರಸ್ ಪಟ್ಟುಹಿಡಿದು ಕುಳಿತ ಘಟನೆ ನಡೆಯಿತು.

ಈ ವೇಳೆ ಮಾತನಾಡಿದ ಆಯುಕ್ತ ಬಸವರಾಜ್‌, ವಿದ್ಯುತ್‌ ದೀಪ ಅಳವಡಿಕೆ ಸಂಬಂಧ ಗ್ಲೋಬಲ್‌ ಟೆಂಡರ್ ನಡೆಸಲಾಗಿದೆ. ಗುತ್ತಿಗೆ ಪಡೆದವರೇ ಅಳವಡಿಸಬೇಕಿದೆ. ಹೀಗಾಗಿ, ಸಮಸ್ಯೆ ಆಗುತ್ತಿದೆ. ಇದು ಚಿಕ್ಕಮಗಳೂರು ನಗರ ಸಭೆ ಸಮಸ್ಯೆ ಮಾತ್ರ ವಲ್ಲ. ಇಡೀ ರಾಜ್ಯದ ತೊಂದರೆ ಆಗಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಮಧುಕುಮಾರ್ ರಾಜ್ ಅರಸ್, ರಾಜ್ಯ, ಜಿಲ್ಲೆ ವಿಚಾರ ಬೇಡ. ವಾರ್ಡ್‌ನಲ್ಲಿ ಜನರು ಉಗಿಯುತ್ತಿದ್ದಾರೆ. ಅಧಿಕಾರಾವಧಿ ಮುಗಿವ ಮುನ್ನ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ನೋಟಿಸ್‌ ಕೊಡಿ: ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾದ ರಸ್ತೆಯ ಪಾದಚಾರಿ ಮಾರ್ಗ ಕುಸಿದಿವೆ. ಮಳೆ ನೀರು ಚರಂಡಿಗಳ ಮೇಲೆ ಅಳವಡಿಸಿದ ಸ್ಲ್ಯಾಬ್‌ ಮುರಿದು ಬಿದ್ದಿವೆ. ಮಕ್ಕಳು, ಮಹಿಳೆಯರು ಓಡಾಡುತ್ತಾರೆ. ಅನಾಹುತವಾದರೆ ಯಾರು ಹೊಣೆ ಎಂದು ಕಾಂಗ್ರೆಸ್‌ ಪರಮೇಶ್ ರಾಜ್ ಅರಸ್ ಪ್ರಶ್ನಿಸಿದರು.

ರಸ್ತೆ ಸ್ವಚ್ಛಗೊಳಿಸುವ ಕೆಲಸವೂ ಮಾಡುತ್ತಿಲ್ಲ. ಕಳೆ ಬೆಳೆದಿದೆ. ಈ ಎಲ್ಲ ಸಮಸ್ಯೆಗಳಿಗೆ ನಗರ ಸಭೆ ಸದಸ್ಯರು ಜನಸಾ ಮಾನ್ಯರಿಗೆ ಉತ್ತರಿಸಬೇಕಾದ ಸ್ಥಿತಿ ಇದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು ಎಂದು ಒತ್ತಾಯಿಸಿದರು.

---ಬಾಕ್ಸ್‌----ಕಸದ ಶುಲ್ಕ ವಿಚಾರಕ್ಕೆ ಸದಸ್ಯರ ಗರಂ

ನಗರದಲ್ಲಿ ದುಬಾರಿ ಕಸ ವಿಲೇವಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸಾವಿರಾರು ರು ಕೊಟ್ಟರೆ ಮಾತ್ರ ತ್ಯಾಜ್ಯ ಸಂಗ್ರಹಿಸುವುದಾಗಿ ಡಿಮ್ಯಾಂಡ್‌ ಮಾಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.

ಆಗ, ಆಯುಕ್ತ ಬಸವರಾಜ್‌ ಪ್ರತಿ ತಿಂಗಳು ತ್ಯಾಜ್ಯ ಸಂಗ್ರಹಣೆಯಿಂದ ವಸೂಲಾಗುತ್ತಿರುವ ಸುಮಾರು ₹15 ಲಕ್ಷ ಸಾಕಾಗುತ್ತಿಲ್ಲ. ಸುಮಾರು ₹18 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾದರೆ, ಆಟೋ ಸಮಸ್ಯೆ ಇರುವುದರಿಂದ ಕೆಲವು ಕಡೆ ಶುಲ್ಕ ಪಾವತಿ ಮಾಡುತ್ತಿಲ್ಲ. 16ನೇ ಹಣಕಾಸು ನಿಧಿಯಲ್ಲಿ ಆಟೋ ಖರೀದಿಗೆ ತೀರ್ಮಾನಿಸಲಾಗಿದೆ ಎಂದರು. ಇದೇ ವೇಳೆ ತ್ಯಾಜ್ಯ ಶುಲ್ಕ ಹೆಚ್ಚಳ ಮಾಡಿಲ್ಲ. ಈ ಹಿಂದೆ ಸಂಗ್ರಹಿಸಲಾಗುತ್ತಿದ್ದ ಮೊತ್ತವನ್ನು ಈಗಲೂ ಸಂಗ್ರಹಿಸಲಾಗುತ್ತಿದೆ ಎಂದರು.

----ಬಾಕ್ಸ್‌---

ಖಾಸಗಿ ಜಮೀನಿನ ಕಳೆ ಸ್ವಚ್ಛಕ್ಕೆ ನಗರ ಸಭೆ ಯಂತ್ರ ಬಳಕೆ

ರಸ್ತೆ ಪಕ್ಕದ ಕಳೆ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಹೇಳಿದರೆ ಕಳೆ ಸ್ವಚ್ಛಗೊಳಿಸುವ ಯಂತ್ರ ಕೆಟ್ಟುಹೋಗಿದೆ ಎನ್ನುತ್ತಾರೆ. ಆದರೆ, ಖಾಸಗಿ ಜಮೀನಿನಲ್ಲಿ ಇರುವ ಕಳೆ ಸ್ವಚ್ಛಗೊಳಿಸುವುದಕ್ಕೆ ನಗರ ಸಭೆ ಯಂತ್ರ ಬಳಕೆ ಮಾಡುತ್ತಾರೆ ಎಂದು ಮಧುಕುಮಾರ್ ರಾಜ್ ಅರಸ್ ದೂರಿದರು.

---ಬಾಕ್ಸ್‌---

ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ನೋಟಿಸ್‌

ನಗರದಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಉಲ್ಲಂಘನೆ ಕಂಡು ಬಂದರೆ ನೋಟಿಸ್‌ ಜಾರಿ ಮಾಡುವುದಾಗಿ ನಗರ ಸಭೆ ಆಯುಕ್ತ ಬಸವರಾಜ್‌ ಹೇಳಿದರು.

ನಗರದಲ್ಲಿ ಕಟ್ಟಡ ನಕ್ಷೆ ಉಲ್ಲಂಘಿಸಿ ಬೃಹತ್‌ ಕಟ್ಟಡಗಳ ನಿರ್ಮಿಸಲಾಗುತ್ತಿದೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಕಟ್ಟಡ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಈಗಾಗಲೇ ಕಟ್ಟಡ ನಕ್ಷೆ ಉಲ್ಲಂಘಿಸಿ ನಿರ್ಮಾಣ ಗೊಂಡಿ ರುವ ಕಟ್ಟಡಗಳ ಪರಿಶೀಲನೆ ನಡೆಸಲಾಗುತ್ತಿದೆ. ಉಲ್ಲಂಘಿಸಿದವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅನಧಿಕೃತ ಕಟ್ಟಡ ನಿರ್ಮಾಣ ನಗರದಲ್ಲಿ ಬೇಕಾಬಿಟ್ಟಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಾಲ್ಕು ಮಹಡಿ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅವಕಾಶವಿದ್ದು, ಆರೇಳು ಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನಗರ ಸಭೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತ್ತಿದ್ದಾರೆ.ಸರ್ಕಾರಿ ಜಾಗ ಒತ್ತುವರಿ ಮಾಡಿ ರಸ್ತೆ ನಿರ್ಮಿಸಿದ್ದಾರೆ. ದೂರು ನೀಡಿ 3 ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ, ಜನಸಾಮಾನ್ಯರು ಸಣ್ಣಪುಟ್ಟ ಕಾಮಗಾರಿ ಮಾಡಿದರೆ ಅವರ ಮೇಲೆ ದಾಳಿ ನಡೆಸುವ ಅಧಿಕಾರಿಗಳಿಗೆ ಇದು ಗಮನಕ್ಕೆ ಬಂದಿಲ್ಲವೇ ಅಥವಾ ರಾಜಕೀಯ ಪ್ರಭಾವ ಇದೆಯಾ ಎಂದು ಮಧುಕುಮಾರ್ ರಾಜ್ ಅರಸ್ ಪ್ರಶ್ನಿಸಿದರು.ಇದಕ್ಕೆ ಧ್ವನಿಗೂಡಿದ ಸಿ.ಎನ್‌. ಅರುಣ್‌ಕುಮಾರ್‌, ನಗರದ ಬೈಪಾಸ್‌ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಎಂಜಿನಿಯರ್‌ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡ ಈಗಾಗಲೇ ಪೂರ್ಣಗೊಂಡಿದೆ. ಇದನ್ನೇ ಅನುಕರಣೆ ಮಾಡಿ ಇಡೀ ಬೈಪಾಸ್‌ ರಸ್ತೆಯಲ್ಲಿ ಎಲ್ಲರೂ ಚರಂಡಿ ಮೇಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ ಎಂದರು. ---ಬಾಕ್ಸ್‌---

ಗೈರಾದ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ

ಸಂಚಾರಿ ಪೊಲೀಸರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಮೊದಲಾದ ಇಲಾಖೆ ಅಧಿಕಾರಿಗಳು ಸಾಮಾನ್ಯ ಸಭೆಗೆ ಗೈರಾಗಿದ್ದಕ್ಕೆ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಆಕ್ರೋಶ ವ್ಯಕ್ತಪಡಿಸಿ ಈ ಹಿಂದಿನ ಸಭೆಯಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಯಾರು ಉತ್ತರ ಹೇಳಬೇಕು. ಈ ರೀತಿಯಾದರೆ ಸಭೆ ಏಕೆ ನಡೆಸಬೇಕು ಎಂದು ಆಕ್ಷೇಪಿಸಿದರು.---ಕೋಟ್‌--

ಜುಲೈ 29ರ ಒಳಗೆ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗಾಗಿ, ನಗರ ಸಭೆ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಬಿಎಲ್‌ಒ ಗಳಿಗೆ ಸಹಕಾರ ನೀಡಿ ಯಾರೊಬ್ಬ ಮತದಾರರು ಎಸ್‌ಐಆರ್‌ ನಿಂದ ಹೊರ ಉಳಿಯದಂತೆ ಕ್ರಮ ವಹಿಸಬೇಕು.

- ಬಸವರಾಜ್‌, ಆಯುಕ್ತರು, ನಗರ ಸಭೆ, ಚಿಕ್ಕಮಗಳೂರು---ಬಾಕ್ಸ್‌---

ಸಿಡಿಎಗೆ ರಾಜು ನಾಮನಿರ್ದೇಶನ (ರಾಜು ಫೋಟೋ ಇದೆ)

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮಿತಿಗೆ ಚಿಕ್ಕಮಗಳೂರು ನಗರ ಸಭೆಯಿಂದ ಬಿಜೆಪಿ ಸದಸ್ಯ ಜೆ.ರಾಜು ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಅಧ್ಯಕ್ಷೆ ಭವ್ಯಾ ಮಂಜುನಾಥ್‌ ಘೋಷಿಸಿದರು. --ಫೋಟೋ--

ಘನತ್ಯಾಜ್ಯ ನಿರ್ವಹಣೆ ನಿಯಮವಾಳಿ-2026ರ ಪ್ರಕಾರ ತ್ಯಾಜ್ಯ ವಿಂಗಡಣೆ ಬಗ್ಗೆ ವಿವರದ ಪೋಸ್ಟ್‌ ಅನ್ನು ಗುರುವಾರ ಸಾಮಾನ್ಯ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ನಗರ ಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್‌, ಆಯುಕ್ತ ಬಸವರಾಜ್‌ ಸೇರಿದಂತೆ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡ ಜಯಂತಿ ವೇಳೆ ಗದ್ದಲ: ಸಂಸದ ಸುಧಾಕರ್‌ ವಿರುದ್ಧ ತನಿಖೆಗೆ ಆಗ್ರಹ
ಫ.ಗು. ಹಳಕಟ್ಟಿ ಸೇವೆ ಅವಿಸ್ಮರಣೀಯ: ಅಪರ ಡಿಸಿ ಡಾ. ಭಾಸ್ಕರ್