ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕಾಗೆಹಳ್ಳವನ್ನು ಕಳೆದ ಎರಡು ವರ್ಷಗಳ ಹಿಂದೆ ಕನ್ನಡಪ್ರಭ ಹಾಗೂ ಕಸಾಪ ಅಧ್ಯಕ್ಷರ ಹೋರಾದ ಫಲವಾಗಿ ಅಂದಿನ ತಹಸೀಲ್ದಾರ್ ಟಿ.ರಮೇಶ್ ಬಾಬು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಗೂ ಪೊಲೀಸ್ ಠಾಣೆಯ ಹಿಂಭಾಗ ಒತ್ತುವರಿಯಾಗಿದ್ದ ಕಾಗೆಹಳ್ಳ ತೆರವುಗೊಳಿಸಿದ್ದರು.
ಆದರೆ ತೆರವಾದ ಕೆಲವೇ ತಿಂಗಳಲ್ಲಿ ಸದ್ದಿಲ್ಲದೇ ಪೊಲೀಸರು ಕಾಗೆ ಹಳ್ಳದೊಳಗೆ ದೊಡ್ಡ ದೊಡ್ಡ ಪೈಪ್‌ಗಳನ್ನು ಹಾಕಿ ಕಾಗೆಹಳ್ಳಕ್ಕೆ ಮಣ್ಣು ತುಂಬಿ ಮುಚ್ಚಿ ಹಾಕಿ,ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಸ್ಥಳ ಮಾಡಿಕೊಂಡಿದ್ದಾರೆ.ಈಗ ಮಳೆ ಬಂದಾಗ ಪೈಪ್‌ನಲ್ಲಿ ನೀರು ಹೋಗುತ್ತಿಲ್ಲ. ನೀರಿನ ರಭಸಕ್ಕೆ ಪೈಪ್ ಮೇಲೆ ಹಾಗೂ ಅಕ್ಕಪಕ್ಕದ ಮಣ್ಣು ಕೊಚ್ಚಿ ಹೋಗಿ ಪೈಪ್‌ಗಳು ಬಯಲಾಗಿ ಬಿದ್ದಿವೆ. ಮಳೆ ನೀರು ಹಳ್ಳದಲ್ಲಿ ಹರಿಯದೆ ನೇರವಾಗಿ ರಸ್ತೆ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾಗೆಹಳ್ಳದಂತೆ ಪಟ್ಟಣದ ಬಡಗಲ ದಿಕ್ಕಿನ ಇನ್ನೂ ನಾಲ್ಕು ಹಳ್ಳಗಳು ನಶಿಸುತ್ತಿವೆ.ಹೊಂಗೆಹಳ್ಳ ಇಟ್ಟಿಗೆ ಫ್ಯಾಕ್ಟರಿ ಬಾಲು ಜಮೀನಿನಿಂದ ಹಿಡಿದು ದುಂದಾಸನಪುರದವರೆಗೂ ಮುಚ್ಚಿ ಹಾಕಲಾಗಿದೆ.
ವಿಜಯ್ ಗ್ಯಾಸ್ ಏಜೆನ್ಸಿ ಪಕ್ಕ ಹಾದು ಹೋಗುವ ಈ ಹಳ್ಳವನ್ನು ಲೇಔಟ್ ಮಾಡುವವರು ಮತ್ತು ನ್ಯಾಷನಲ್ ಹೈವೇದವರು ಅತಿಕ್ರಮಿಸಿದ್ದಾರೆ.ಕೆಬ್ಬೆಕಟ್ಟೆ ಹಳ್ಳ ಮತ್ತು ನೇನೇಕಟ್ಟೆ ಹಳ್ಳ: ಇವು ಕೂಡ ಪ್ರಭಾವಿಗಳಿಂದ ಒತ್ತುವರಿಯಾಗಿವೆ.
ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಇರುವ ರಾಜ ಕಾಲುವೆ ಹಾಗೂ ನೀರು ಹಳ್ಳಗಳು ಒತ್ತುವರಿಯಾಗಿವೆ ಕೂಡಲೇ ಒತ್ತುವರಿ ಬಿಡಿಸಿ ಮಳೆ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.