ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಮೂದೂರ, ಯರಝರಿ, ಬಳಬಟ್ಟಿ, ಹಂಡರಗಲ್ಲ, ನಾಗರಾಳ, ಚಿರ್ಚನಕಲ್ಲ, ಕಂದಗನೂರ ಗ್ರಾಮಗಳಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಗಳ ಜನರ ಕುದುಕೊರತೆ ಆಲಿಸಿದರು. ಈ ವೇಳೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದಿನ ಸರ್ಕಾರ ಚುನಾವಣೆ ಹತ್ತಿರವಿದ್ದಾಗ ಸರ್ಕಾರದ ಖಜಾನೆ ಖಾಲಿ ಮಾಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾವಿರಾರು ಕೋಟಿ ಅನುದಾನವನ್ನು ಜನರ ಒಳಿತಿಗಾಗಿ ಖರ್ಚು ಮಾಡಲಾಗುತ್ತಿದೆ. ಈ ನಿಟ್ಟಿನಿಲ್ಲಿ ರಾಜ್ಯದ ಎಲ್ಲ ಮತಕ್ಷೇತ್ರಲ್ಲಿ ಸ್ವಲ್ಪ ಹಣಕಾಸಿನ ತೊಂದರೆಯಾಗಿರುವುದು ನಿಜ. ಆದರೇ, ಅಭಿವೃದ್ಧಿ ಆಗುತ್ತಿಲ್ಲ ಎಂಬ ಹೇಳಿಕೆ ಸುಳ್ಳು, ಎಲ್ಲೆಲ್ಲಿ ಯಾವ್ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿತ್ತೋ ಅಲ್ಲಲ್ಲಿ ನಡೆಯುತ್ತಿವ. ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬೀಳುವ ಸರ್ಕಾರ ನಮ್ಮದಲ್ಲ ಎಂದು ಹೇಳಿದರು.
ಈ ಬಾರಿ ಮತಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿದ್ದಾರೆ. ಈ ವೇಳೆ ರೈತರಿಗೆ ಸಮರ್ಪಕ ಬೀಜ, ಗೊಬ್ಬರ ಸೇರಿ ರೈತರಿಗೆ ಅನುಕೂಲವಾಗುವ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಅದರಲ್ಲೂ ತೋಟಗಾರಿಕೆ ಇಲಾಖೆಯಿಂದ ಈ ಹಿಂದಿನ ಸರ್ಕಾರ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಶೇ.75 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ನಮ್ಮ ಸರ್ಕಾರದಲ್ಲಿ ಶೇ.90ರಷ್ಟು ಸಬ್ಸಿಡಿ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮೀಣ ಜನರ ಕುಂದುಕೊರತೆ ಆಲಿಸುವುದರೊಂದಿಗೆ ಸರ್ಕಾರದ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಸಮರ್ಪಕವಾಗಿ ತಲುಪಿಸುವಂತೆ ಮಾಡಬೇಕು. ಸಾರ್ವಜನಿಕರು ಪದೇ ಪದೇ ಕಚೇರಿಗಳಿಗೆ ಅಲೆದಾಡದಂತೆ ನೋಡಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದರಿಯ ಮತಕ್ಷೇತ್ರ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗೆ ತಾಲೂಕು ಆರೋಗ್ಯ ಇಲಾಖೆ ಸದಾ ಸಿದ್ದವಿದೆ. ಆದರೆ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಮುಖ್ಯಮಂತ್ರಿ ಯೋಜನೆಯಡಿಯಲ್ಲಿ ₹ 5 ಲಕ್ಷಗಳವರೆಗೆ ಹೃದಯ ರೋಗ ಚಿಕಿತ್ಸೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕು ಆರೊಗ್ಯಾಧಿಕಾರಿ ಸತೀಶ ತಿವಾರಿ ಹೇಳಿದರು.
30ಎಂಬಿಎಲ್1: ಮುದ್ದೇಬಿಹಾಳ ತಾಲೂಕಿನ ಮೂದೂರ, ಯರಝರಿ, ಬಳಬಟ್ಟಿ, ಹಂಡರಗಲ್ಲ, ನಾಗರಾಳ, ಚಿರ್ಚನಕಲ್ಲ, ಕಂದಗನೂರ, ಗ್ರಾಮಗಳಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಆಯಾ ಗ್ರಾಮಗಳ ಜನರ ಕುದುಕೊರತೆ ಆಲಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.-------ಕೋಟ್
- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ