ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿರುವ ಕೈವಾರ ತಾತಯ್ಯನವರ ಮಠದ ೪೩ನೇ ವಾರ್ಷಿಕೋತ್ಸವ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈವಾರ ತಾತಯ್ಯನವರು ಯೋಗ ದೃಷ್ಟಿಯಿಂದ ಕಲಿಯುಗದಲ್ಲಿ ಕಟ್ಟ ಕಡೆಯ ಕಾಲಜ್ಞಾನವನ್ನು ನೀಡಿದ್ದಾರೆ. ಆ ಕಾಲಜ್ಞಾನದ ಅರಿವನ್ನ ಪ್ರತಿಯೊಬ್ಬರು ಪಡೆದುಕೊಂಡು ಜಾಗೃತರಾಗಬೇಕು. ಕೈವಾರ ತಾತಯ್ಯನವರು ಪರತತ್ವ ಸಾಧನೆಯನ್ನು ಮಾಡಿರುವ ಸದ್ಗುರುಗಳಾಗಿದ್ದು, ಭಕ್ತಿ, ಕರ್ಮ, ಯೋಗವನ್ನ ಸೇರಿಸಿ ಕೈವಾರ ತಾತಯ್ಯನವರು ಬೋಧನೆ ಮಾಡಿದ್ದಾರೆ. ಬಾಹ್ಯ ಸಾಧನೆಗಳಿಗಿಂತಲೂ ಅಂತರಂಗದ ಸಾಧನೆ ಶ್ರೇಷ್ಠವಾದದ್ದು ಮಾನವರಲ್ಲಿ ಬೇಧವನ್ನು ಮಾಡದೆ ಮುಕ್ತಿಯ ಪಥದೆಡೆಗೆ ಸಾಗುವ ಸಾಧನೆಯನ್ನು ತಾತಯ್ಯನವರು ಬೋಧಿಸಿದ್ದಾರೆ. ಅಂತಹ ಸದ್ಗುರುಗಳ ಆದರ್ಶಗಳನ್ನ ಯುವ ಪೀಳಿಗೆ ಪಾಲಿಸಬೇಕು. ತಾತಯ್ಯನವರ ಆದರ್ಶಗಳನ್ನ ಪ್ರೇರಣೆ ಪಡೆದುಕೊಂಡಿರುವವರು ಸಮಾಜದಲ್ಲಿ ಸಾಕಷ್ಟು ಜನರಿದ್ದು ಅವರ ಆದರ್ಶಗಳಿಂದ ಉನ್ನತಿಯೆಡೆಗೆ ಸಾಗಿದ್ದಾರೆ ಎಂದರು.ಮಠದ ಧರ್ಮಾಧಿಕಾರಿಗಳಾದ ಮುನಿಸ್ವಾಮಿ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಕೈವಾರ ತಾತಯ್ಯನವರ ಭಕ್ತನಾಗಿದ್ದೆ. ಕೈವಾರದಲ್ಲಿರುವ ಮಠಕ್ಕೆ ಚಿಕ್ಕಂದಿನಿಂದಲೂ ತೆರಳುತ್ತಿದ್ದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿಯೇ ಮಠಸ್ಥಾಪನೆ ಮಾಡುವ ಉದ್ದೇಶಹೊಂದಿ ಹಲವಾರು ಮಹನೀಯರ ಸಹಾಯದಿಂದ ಮಠವನ್ನು ಸ್ಥಾಪನೆ ಮಾಡಿದ್ದು ಇಂದಿಗೆ ೪೩ ವರ್ಷಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಹೋಮ ಹವನ, ಭಜನೆ, ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಾತಯ್ಯನವರ ಆರಾಧನೆ ಮಾಡಲಾಗುತ್ತಿದೆ ಎಂದರು.