ಕಲಬುರಗಿ ಕೃಷಿ ವಿಜ್ಞಾನಿ ಪಂಚ ಭೂತಗಳಲ್ಲಿ ಲೀನ

KannadaprabhaNewsNetwork | Published : Jul 18, 2024 1:39 AM

ಸಾರಾಂಶ

ಕಲಬುರಗಿಯ ಗೋದುತಾಯಿ ನಗರದಲ್ಲಿರುವ ನಿವಾಸದಲ್ಲಿ ಸಾವನ್ನಪ್ಪಿದ್ದ ಕೃಷಿಸಂತ, ಜಾಗತಿಕ ಖ್ಯಾತಿಯ ಕೃಷಿ ವಿಜ್ಞಾನಿ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌.ಎ. ಪಾಟೀಲ್‌) ಇವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವರ ಹುಟ್ಟೂರಾದ ಜೇವರ್ಗಿ ತಾಲೂಕಿನ ಹಿರೇ ಬಿರಾಳದಲ್ಲಿ ಅವರ ಜಮೀನಿನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ/ಜೇವರ್ಗಿ

ತೀವ್ರ ಹೃದಯಾಘಾತದಿಂದಾಗಿ ಕಳೆದ ಸೋಮವಾರ ಕಲಬುರಗಿಯ ಗೋದುತಾಯಿ ನಗರದಲ್ಲಿರುವ ನಿವಾಸದಲ್ಲಿ ಸಾವನ್ನಪ್ಪಿದ್ದ ಕೃಷಿಸಂತ, ಜಾಗತಿಕ ಖ್ಯಾತಿಯ ಕೃಷಿ ವಿಜ್ಞಾನಿ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌.ಎ. ಪಾಟೀಲ್‌) ಇವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವರ ಹುಟ್ಟೂರಾದ ಜೇವರ್ಗಿ ತಾಲೂಕಿನ ಹಿರೇ ಬಿರಾಳದಲ್ಲಿ ಅವರ ಜಮೀನಿನಲ್ಲಿ ನಡೆಯಿತು.

ಹೆಚ್ಚು ಇಳುವರಿಯ ವರಲಕ್ಷ್ಮೀ, ಜಯಲಕ್ಷ್ಮೀ ಹತ್ತಿ ತಲಿಗಳನ್ನು ಕಂಡು ಹಿಡಿದು ಜಾಗತಿಕವಾಗಿ ಹೆಸರಾಗಿದ್ದ ಖ್ಯಾತ ಕೃಷಿಸಂತ ಬುಧವಾರ ಹುಟ್ಟೂರು ಬಿರಾಳದ ಮಣ್ಣಲ್ಲಿ ಮಣ್ಣಾದರು, ಇದರೊಂದಿಗೆ ವಿಜ್ಞಾನಿಯ ಶರೀರ ಪಂಚ ಬೂತಗಳಲ್ಲಿ ಲೀನವಾಯ್ತು.

ವಿಜ್ಞಾನಿಯ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದಲ್ಲಿ ಸಕಲ ಸರಕಾರಿ ಗೌರವ ಸಲ್ಲಿಸಲಾಯ್ತು. ನಾಡಿನ ವಿವಿಧ ಮಠಾಧಿಶರು, ರಾಜಕೀಯ ಧುರಿಣರು ಭಾಗಿಯಾಗಿ ಅಶ್ರುತರ್ಪಣ ಸಲ್ಲಿಸಿದರು. ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದ ನಿವಾಸಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಛಾಪು ಮುಡಿಸಿ ರೈತಾಪಿ ವರ್ಗಕ್ಕೆ ಹೊಸ ಹೊಸ ತಳಿಗಳನ್ನು ಪರಿಚಯಿಸಿದ ಕೃಷಿ ವಿಜ್ಞಾನಿ ಡಾ. ಎಸ್.ಎ. ಪಾಟೀಲ್ ಅವರ ನಿಧನ ರೈತಾಪಿ ವರ್ಗ ಸೇರಿದಂತೆ ತಾಲೂಕಿನ ಜನತೆಯಲ್ಲಿ ಕರಾಳ ಛಾಯೆ ಮೂಡಿಸಿದೆ.

ಕಳೆದ ಸೋಮವಾರ ತಮ್ಮ ಕಲಬುರಗಿ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಡಾ. ಎಸ್.ಎ. ಪಾಟೀಲ್ ಅವರ ಪಾರ್ಥೀವ ಶರೀರ ಕಲಬುರಗಿಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಮಕ್ಕಳಲ್ಲರೂ ವಿದಶದಲ್ಲಿರೋದರಿಂದಾಗಿ ಅವರ ಬರುವವರೆಗೂ ಪಾರ್ಥೀವ ಶರೀರದ ಅತ್ಯ ಸಂಸ್ಕಾರಕ್ಕೆ ಪಾಟೀಲರ ಪರಿವಾರದ ಸದಸ್ಯರೆಲ್ಲರೂ ಕಾದಿದ್ದರು.

ಮಂಗಳವಾರ ರಾತ್ರಿ ಮೃತರ ಪಾರ್ಥೀವ ಶರೀರ ಸ್ವಗ್ರಾಮ ಬಿರಾಳ ಗ್ರಾಮ ಸೇರಿದಂತೆ ಸುತ್ತುರೀನ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಬುಧವಾರ ಮಧ್ಯಾಹ್ನ 1.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೇರವೇರಿತು.

ತಹಸೀಲ್ದಾರ ಮಲ್ಲಣ್ಣ ಯಲಗೋಡ, ಸಿಪಿಐ ರಾಜೇಸಾಬ್ ನದಾಫ್ ತಾಲೂಕು ಆಡಳಿತದ ವತಿಯಿಂದ ಗೌರವ ಸಲ್ಲಿಸಿದರು. ಮಠಾಧಿಶರಾದ ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಕಡಕೋಳಕದ ಡಾ.ರುದ್ರಮುನಿ ಶಿವಾಚಾರ್ಯರು, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ಬಿ.ಆರ್. ಪಾಟೀಲ್, ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕೃಷಿ ಜಿಲ್ಲಾ ನಿದೇರ್ಶಕ ಸಮದ್ ಪಟೇಲ್, ಬಸವರಾಜ ಬಿಮಳ್ಳಿ, ಭೀಮಾಶಂಕರ ಬಿಲಗುಂದಿ, ಲಿಂಗರಾಜ ಅಪ್ಪಾ, ವಿಲಾಸವತಿ ಖೂಭಾ, ರಮೇಶಬಾಬು ವಕೀಲ್, ರಾಜಶೇಖರ ಸೀರಿ, ನೀಲಕಂಠ ಮುಲಗೆ, ರವಿ ಬಿರಾದಾರ, ಶರಣು ಮೋದಿ, ಸಿದ್ದು ಸಾಹು ಅಂಗಡಿ, ಗುರುಲಿಂಗಪ್ಪಗೌಡ ಆಂದೋಲಾ, ಗೌಡಪ್ಪಗೌಡ ಆಂದೋಲಾ, ಸಿದ್ದಲಿಂಗರಡ್ಡಿ ಇಟಗಿ, ಬಸವರಾಜ ಮಾಲಿಪಾಟೀಲ್, ರಾಜಶೇಖರ ವಾರದ, ಮಹಾಂತಯ್ಯ ಹಿರೇಮಠ, ಬಸವರಾಜ ಸಾಸಾಬಾಳ, ಸಂಗನಗೌಡ ಗುಳ್ಯಾಳ, ಸಿದ್ದಣ್ಣ ಹೂಗಾರ, ಬಸವರಾಜ ಪಾಟೀಲ್, ವಿಜಯಲಕ್ಷ್ಮೀ ಆಂದೋಲಾ, ಅರುಣರಡ್ಡಿ ಶಿವಪುರ, ಸಂಗನಗೌಡ ರದ್ದೇವಾಡಗಿ, ಪರಮೇಶ್ವರ ಬಿರಾಳ ಸೇರಿದಂತೆ ಕೃಷಿ ಇಲಾಖೆ, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ರೈತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Share this article