ಕುರುಬರಿಂದ ಕಲಬುರಗಿ ಚಲೋ ಹೋರಾಟ

KannadaprabhaNewsNetwork |  
Published : Sep 30, 2026, 01:30 AM IST
ಫೋಟೋ- ಸಿದ್ದು 1, ಸಿದ್ದು 2, ಸಿದ್ದು 3ಕಲಬುರಗಿಯಲ್ಲಿ ರಾಜ್ಯ ಕುರುಬರ ಸಂಘದಿಂದ ನಡೆದ ಕಲಬುರಗಿ ಚಲೋ ಹೋರಾಟದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕುರುಬ ಸಮಾಜದ ಯುವಕರು, ಅಹಂದ ನಾಯಕರು ಸೇರಿದ್ದರು. | Kannada Prabha

ಸಾರಾಂಶ

ಹೈಕೋರ್ಟ್‌ ಪಕ್ಕದಲ್ಲಿರುವ ಅಫಜಲ್ಪುರ ರಸ್ತೆಯ ತ್ರಿಕೋನಾಕಾರದ ತಿರುವಲ್ಲಿ ಸಿದ್ದರಾಮಯ್ಯ ಸರ್ಕಲ್‌ ಎಂದು ನಾಮಕರಣ ಮಾಡಿ ಅಲ್ಲೇ ಸೆ. 16 ರ ರಾತ್ರಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಇತರೆ ಅಹಿಂದ ಪರ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ‘ಕಲಬುರಗಿ ಚಲೋ’ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ಸತತ 5 ಗಂಟೆಗೂ ಅಧಿಕ ಕಾಲ ನಡೆದು ಜಿಲ್ಲಾಡಳಿತದ ಗಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿಇಲ್ಲಿನ ಹೈಕೋರ್ಟ್‌ ಪಕ್ಕದಲ್ಲಿರುವ ಅಫಜಲ್ಪುರ ರಸ್ತೆಯ ತ್ರಿಕೋನಾಕಾರದ ತಿರುವಲ್ಲಿ ಸಿದ್ದರಾಮಯ್ಯ ಸರ್ಕಲ್‌ ಎಂದು ನಾಮಕರಣ ಮಾಡಿ ಅಲ್ಲೇ ಸೆ. 16 ರ ರಾತ್ರಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಇತರೆ ಅಹಿಂದ ಪರ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ‘ಕಲಬುರಗಿ ಚಲೋ’ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ಸತತ 5 ಗಂಟೆಗೂ ಅಧಿಕ ಕಾಲ ನಡೆದು ಜಿಲ್ಲಾಡಳಿತದ ಗಮನ ಸೆಳೆದಿದೆ.

ಕಲಬುರಗಿಯ ಹೈಕೋರ್ಟ್ ಕ್ರಾಸ್ ಬಳಿ ರಾತ್ರೋರಾತ್ರಿ ಸ್ಥಾಪಿಸಲಾಗಿದ್ದ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಹಾಗೂ ಅದೇ ಸ್ಥಳದಲ್ಲಿ ಮೂರ್ತಿ ಮರುಸ್ಥಾಪಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ ಈ ಪ್ರತಿಭಟನೆಗೆ ಕರೆ ನೀಡಿತ್ತು.ಸೆ. 28 ಕ್ಕೆ ನಿಗದಿಯಾಗಿದ್ದ ಈ ‘ಕಲಬುರಗಿ ಚಲೋ’ ಜಾಥಾ ಸೆ. 29 ಕ್ಕೆ ಮುಂದೂಡಲಾಗಿತ್ತು. ಮಂಗಳವಾರ ರಾಜ್ಯದ ವಿವಿಧೆಡೆಯಿಂದ ಕಲಬುರಗಿಗೆ ಹಾಲು ಮತ, ಕುರುಬ ಸಮಾಜದ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಸರಿದ್ದರಲ್ಲದೆ ಅಹಿಂದ ಹಾಗೂ ಇತರೆ ಬೆಂಬಲಿತ ಸಂಘಟನೆಗಳವರೂ ಈ ಹೋರಾಟದಲ್ಲಿ ಕೈ ಜೋಡಿಸಿದ್ದರು.ಜಗತ್‌ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಯಿಂದ ಶುರುವಾಗಿರುವ ಹೋರಾಟದಲ್ಲಿ ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ ಈರಣ್ಣ, ಕಾರ್ಯಾಧ್ಯಕ್ಷ ಬಸವರಾಜ ಬಸಲಿಗುಂದಿ, ಎಂವಿ ಸೋಮಶೇಖರ, ಕೆಎಂ ಕೃಷ್ಣಮೂರ್ತಿ, ಜಿಲ್ಲಾ ಘಟಕದ ಪ್ರಮುಖ ಗುರುನಾಥ ಪೀಜಾರಿ, ಬೈಲಪ್ಪ ನೆಲೋಗಿ ಸಹಿತ ಬೀದರ್‌, ಯಾದಗಿರಿ, ರಾಯಚೂರು ಹಾಗೂ ಸುತ್ತಲಿನ ಜಿಲ್ಲೆ, ತಾಲೂಕುಗಳಿಂದ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ಬೃಹತ್ ಪ್ರತಿಭಟನಾ ರ‍್ಯಾಲಿಯಿಂದಾಗಿ ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ಇಡೀ ದಿನ ಕಾಡಿತ್ತಲ್ಲದೆ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿತ್ತು. ರಸ್ತೆ ತಡೆ ನಡೆಸಲು ಯತ್ನಿಸಿದ ಹಾಗೂ ಜಗತ್ ವೃತ್ತದತ್ತ ನುಗ್ಗಲು ಯತ್ನಿಸಿದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.ಹೈಕೋರ್ಟ್ ಕ್ರಾಸ್ ಮತ್ತು ಜಗತ್ ವೃತ್ತಜದ ಮಾರ್ಗಗಳಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಿರುವುದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಹೊರಗಿನಿಂದ ಬರುವ ವಾಹನಗಳು ನಗರದ ಒಳಗಿನ ಮುಖ್ಯ ರಸ್ತೆಗಳಿಗೆ ಪ್ರವೇಶಿಸದಂತೆ ತಡೆಯಲು ರಿಂಗ್ ರೋಡ್ ಕಡೆಯಿಂದಲೇ ಮಾರ್ಗ ಬದಲಾವಣೆ ಮಾಡಲಾಗಿತ್ತು.

ಪುತ್ಥಳಿ ಮರುಸ್ಥಾಪನೆಗೆ 2 ವಾರ ಗಡುವು: ಹೋರಾಟದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಹಸ್ರಾರು ಜನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿ ಸಾರ್ವಜನಿಕ ಸಭೆಯಾಗಿ ಪರಿವರ್ತನೆಗೊಂಡು ಅಲ್ಲಿ ಮಾತನಾಡಿದ ಸಂಘದ ಪ್ರಮುಖರು,15 ದಿನದದಲ್ಲಿ ಸಿದ್ದರಾಮಯ್ಯನವರ ಪ್ರತಿಮೆ ಯಥಾಸ್ಥಿತಿಯಾಗಿ ಅಫಜಲ್ಪುರ ರಸ್ತೆಯ ತ್ರಿಕೋನಕಾರಾದ ತಿರುವಲ್ಲಿ ಸ್ಥಾಪನೆ ಮಾಡದಿದ್ದರೆ ಹೋರಾಟ ಉಗ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಮಾಜಿ ಸಿಎಂ ಅವರ ಪ್ರತಿಮೆ, ಸರ್ಕಲ್‌ಗಾಗಿ 2023 ರಿಂದಲೇ ಬೇಡಿಕೆ ಇಡಲಾಗಿತ್ತು. ಪಾಲಿಕೆ, ಜಿಲ್ಲಾಡಳಿತಗಳಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಯುವಕರು ಸೆ. 16 ರ ರಾತ್ರಿ ಪುತ್ಥಳಿ ಸ್ಥಾಪಿಸಿದ್ದಾರೆ. ಆಪ ಪುತ್ಥಳಿಯನ್ನು ಪರವಾನಗಿ ಇಲ್ಲವೆಂದು ಪಾಲಿಕೆಯ ಸಿಬ್ಬಂದಿ ಕಸದ ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು, ಇಡೀ ಸಮಾಜಕ್ಕೆ ಅಪಮಾನ ಉಂಟು ಮಾಡಿದೆ. ಬೇಡಿಕೆಗಳು ಈಡೇರದಿದ್ದಲ್ಲಿ ಹಾಲುಮತ ಕುರುಬ ಸಮಾಜ ಬಾಂಧವರು ತಕ್ಕ ಪಾಠ ಕಲಿಸುತ್ತೇವೆಂದು ಎಂದು ಅಸಮಾಧಾನ ಹೊರಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ