ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್‌ 401.18 ಲಕ್ಷ ರು. ನಿವ್ವಳ ಲಾಭ

KannadaprabhaNewsNetwork | Published : Jun 30, 2024 12:54 AM

ಸಾರಾಂಶ

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯ ಜಿಲ್ಲಾ ಸಹಕಾರ ಬ್ಯಾಂಕ್‌ ಹಳಿ ಮೇಲೆ ಬಂದಿದೆ, 2023- 24ನೇ ಸಾಲಿನಲ್ಲಿ ಬ್ಯಾಂಕು ನಿವ್ವಳ 401.18 ಲಕ್ಷ ರು. ನಿವ್ವಳ ಲಾಭ ಮಾಡಿದ್ದು, ನಷ್ಟದಲ್ಲಿದ್ದ ಬ್ಯಾಂಕು ಕಳೆದ 3 ವರ್ಷದಿಂದ ಲಾಭದಲ್ಲಿಯೇ ಮುಂದುವರಿದಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯ ಜಿಲ್ಲಾ ಸಹಕಾರ ಬ್ಯಾಂಕ್‌ ಹಳಿ ಮೇಲೆ ಬಂದಿದೆ, 2023- 24ನೇ ಸಾಲಿನಲ್ಲಿ ಬ್ಯಾಂಕು ನಿವ್ವಳ 401.18 ಲಕ್ಷ ರು. ನಿವ್ವಳ ಲಾಭ ಮಾಡಿದ್ದು, ನಷ್ಟದಲ್ಲಿದ್ದ ಬ್ಯಾಂಕು ಕಳೆದ 3 ವರ್ಷದಿಂದ ಲಾಭದಲ್ಲಿಯೇ ಮುಂದುವರಿದಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ್‌ ಹೇಳಿದ್ದಾರೆ.

ಕಲಬುರಗಿಯಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕಳೆದ ಆಗಸ್ಟ್‌ನಲ್ಲಿ ಅದ್ಯಕ್ಷರಾದ ನಂತರ ಬ್ಯಾಂಕನ್ನು ಸರಿ ದಾರಿಗೆ ತರುವ ಮಾತನ್ನಾಡಿದ್ದಾಗಿ ಸ್ಮರಿಸುತ್ತ ಎಲ್ಲರ ಸಹಕಾರದಿಂದ ಈಗ ಬ್ಯಾಂಕನ್ನು ಹಳಿ ಮೇಲೆ ತಂದದ್ದಾಗಿ ಹಳಿದರು.

ಉಭಯ ಜಿಲ್ಲೆಗಳಲ್ಲಿ 765 ಸದಸ್ಯತ್ವ ಹೊಂದಿರುವ ಸಂಘಗಳನ್ನು ಹೊಂದಲಾಗಿದೆ. ಮಾರ್ಚ್‌ 2024ಕ್ಕೆ ಶೇರು ಬಂಡವಾಳ 12404.65 ಲಕ್ಷ ರು ಇದೆ. ವಿವಿಧೆಡೆಯಿಂದ ಬ್ಯಾಂಕ್‌ ತಂದ ಸಾಲದ ಮೊತ್ತ 63163.62 ಲಕ್ಷ ಇದೆ ಎಂದರು.

ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 1,437 ಗ್ರಾಮಗಳಲ್ಲಿನ ರೈತರಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಪತ್ತು ಜೋಡಣೆ ಅಡಿಯಲ್ಲಿ ಫ್ಯಾಕ್ಸಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ. 1,56,504 ರೈತರಿಗೆ 729.86 ಕೋಟಿಗಳಷ್ಟು ಬೆಳೆ ಸಾಲ ವಿತರಿಸಲಾಗಿದೆ.ಮಾರ್ಚ್‌ 2024 ರ ಅಂತ್ಯಕ್ಕೆ 300 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಸಾಲ, ಬಡ್ಡಿ, ಸಾಲಮನ್ನಾ ಸೇರಿದಂತೆ ಹಲವು ಮೂಲಗಳಿಂದ ಬ್ಯಾಂಕಿಗೆ 6470.37ಲಕ್ಷ ರು ಬ್ಯಾಂಕಿಗೆ ಜಮಾ ಆಗಿದೆ ಎಂದು ಗೋನಾಯಕ್‌ ಮಾಹಿತಿ ನೀಡಿದರು.

ಉಪಾಧ್ಯಕ್ಷ ಸುರೇಶ ಸಜ್ಜನ್‌ ಸೇರಿದಂತೆ ಚಿಂಚೋಳಿ, ಯಾದಗಿರಿ ಭಾಗದ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಸೋಮಶೇಖರ ಗೋನಾಯಕ್‌ ಅಧ್ಯಕ್ಷಾವಧಿ ಸುಧಾರಣೆ ಕ್ರಮಗಳು

1) ಮಧ್ಯಮಾವಧಿ ಸುಸ್ತಿ ಸಾಲಗಾರರ ವಿರುದ್ಧ ಸಾಲ ವಸೂಲಾತಿಗೆ ಕ್ರಮ

2) 514 ಸುಸ್ತಿದಾರರಿಂದ ರಾಜ್ಯ ಸರಕಾರದ ಬಡ್ಡಿ ಮನ್ನಾ ಯೋಜನೆಯಡಿ 1767 ಲಕ್ಷ ರು ವಸೂಲಿ

3) ಅಪೆಕ್ಸ್‌ ಬ್ಯಾಂಕ್‌, ನಬಾರ್ಡ್‌ಗೆ ಪಾವತಿಸಬೇಕಾದ 587 ಕೋಟಿ ರು ಪಾವತಿಸಿ ಆರ್ಥಿಕ ಶಿಸ್ತು ಪಾಲನೆ

4) 23- 24 ನೇ ಸಾಲಿನಲ್ಲಿ ನಬಾರ್ಡ್‌- ಅಪೆಕ್ಸ್‌ ಬ್ಯಾಂಕ್‌ನಿಂದ 650 ಕೋಟಿ ರು ಸಾಲದ ಮಿತಿ ಪಡೆದು ಈ ಪೈಕಿ 621 ಕೋಟಿ ರು ರೈತರಿಗೆ ವಿತರಣೆ

5) ಉಭಯ ಜಿಲ್ಲೆ ರೈತರಿಗೆ ಯಶಸ್ವಿನಿ ಆರೋಗ್ಯ ವಿಮೆ

6) ರಾಜ್ಯ ಖಾದಿ- ಗ್ರಾಮೋದ್ಯೋಗ ಆಯೋಗದಲ್ಲಿ ಜಿಸಿಸಿ ಬ್ಯಾಂಕ್‌ ಸದಸ್ಯ ಪಡೆದಿದೆ

--------------------------

2024- 25 ನೇ ಸಾಲಿನ ಯೋಜನೆಗಳು

1) 2024- 25 ನೇ ಸಾಲಿಗೆ 500 ಕೋಟಿ ರು ಟೇವಣಿ ಸಂಗ್ರಹ

2) ಕೃಷಿ ಮತ್ತು ಕೃಷಿ ಆಧಾರಿತ ಕೆಲಸಗಲಿಗೆ ಸಾಲ ವಿತರಣೆ

3) ಕೇಂದ್ರ, ರಾಜ್ಯದ ರೈತಪರ ಯೋಜನೆ ಅನುಷ್ಠಾನ

4) ಮಧ್ಯಮಾವಧಿ ಸಾಲ ಸುಸ್ತಿದಾರರ ವಿರುದ್ಧ ಕಾನೂನು ಕ್ರಮ

5) 501 ಸುಸ್ತಿದಾರರರಿಂದ ಬಡ್ಡಿಯೊಂದಿಗೆ 2018 ಲಕ್ಷ ರು ಅಸಲನು ವಸೂಲಿಗೆ ಕ್ರಮ

6) ಬ್ಯಾಕಿನ ಖಾಲಿ ನಿವೇಶನದಲ್ಲಿ 4 ಶಾಖೆಗಳ ಕಟ್ಟಡ ನಿರ್ಮಾಣ ಗುರಿ

7) ಸಿಬ್ಬಂದಿ ವೃಂದ ಬಲ ಹೆಚ್ಚಳ, ಸುಸ್ತಿ ಸಾಲ ವಸೂಲಾತಿಗೆ ಆದ್ಯತೆ

8) ಗ್ರಾಪಂ ವ್ಯಾಪ್ತಿಯಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಾಪನೆ

9) ಹೋಬಳಿ ಹಂತದಲ್ಲಿ ಬ್ಯಾಂಕಿನ ಹೊಸ ಶಾಖೆಗಳ ಆರಂಭ

10) ಕೇಂದ್ರ ಯೋಜನೆಯಡಿ ಬ್ಯಾಂಕಿನ ಗಣಕೀಕರಣ

Share this article