ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ

KannadaprabhaNewsNetwork |  
Published : Oct 10, 2026, 01:15 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ   ಆಯೋಜಿಸಿದ್ದ ಉಪನ್ಯಾಸದಲ್ಲಿ ಪ್ರೊ.ಶ್ರೀಪಾದ ಕುಲಕರ್ಣಿ ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮೀಸಲು ಕರಡು ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಲಬುರಗಿ ಜಿಲ್ಲಾ ಪಂಚಾಯಿತಿ ಮೀಸಲಾತಿ ವಿವರಗಳನ್ನು ನೋಡಿದಾಗ ಒಟ್ಟು 47 ಸ್ಥಾನಗಳಲ್ಲಿ 24 ರಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಲಾಗಿದೆ. ಇದಲ್ಲದೆ ಸಾಮಾನ್ಯ ವರ್ಗ : 24 ಸ್ಥಾನಗಳು. ಇದರಲ್ಲಿ ಮಹಿಳೆಗೆ 11 ಸ್ಥಾನ ಮೀಸಲಿಡಲಾಗಿದ್ದು, ಎಸ್ಸಿ ಮೀಸಲು 14 ಸ್ಥಾನಗಳಲ್ಲಿ ಮಹಿಳೆಗೆ 7 ಸ್ಥಾನಗಳು, ಏಕೈಕ ಎಸ್ಟಿ ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ.ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮೀಸಲು ಕರಡು ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಲಬುರಗಿ ಜಿಲ್ಲಾ ಪಂಚಾಯಿತಿ ಮೀಸಲಾತಿ ವಿವರಗಳನ್ನು ನೋಡಿದಾಗ ಒಟ್ಟು 47 ಸ್ಥಾನಗಳಲ್ಲಿ 24 ರಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಲಾಗಿದೆ. ಇದಲ್ಲದೆ ಸಾಮಾನ್ಯ ವರ್ಗ : 24 ಸ್ಥಾನಗಳು. ಇದರಲ್ಲಿ ಮಹಿಳೆಗೆ 11 ಸ್ಥಾನ ಮೀಸಲಿಡಲಾಗಿದ್ದು, ಎಸ್ಸಿ ಮೀಸಲು 14 ಸ್ಥಾನಗಳಲ್ಲಿ ಮಹಿಳೆಗೆ 7 ಸ್ಥಾನಗಳು, ಏಕೈಕ ಎಸ್ಟಿ ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ. ಇನ್ನು ಹಿಂದುಳಿದ ವರ್ಗ ಎ ವಿಭಾಗದ 7 ಸ್ಥಾನಗಳಲ್ಲಿ 4 ಸ್ಥಾನಗಳು ಮಹಿಳೆಗೆ, ಹಿಂದುಳಿದ ವರ್ಗ ಬಿ - 2 ಸ್ಥಾನಗಳಲ್ಲಿ ಮಹಿಳೆಗೆ 1 ಸ್ಥಾನ ಮೀಸಲಿಡಲಾಗಿದೆ. ಜಿಲ್ಲೆಯ ಅನೇಕ ತಾಲೂಕಗಳಲ್ಲಿ ಜಿಪಂ ಕ್ಷೇತ್ರಗಳು ಹೆಚ್ಚಾಗಿವೆ, ಇನ್ನು ಹಲವು ತಾಲೂಕಗಳಲ್ಲಿ ಈಗಿನ ಜಿಪಂ ಕ್ಷೇತ್ರಗಳನ್ನು ಪುನರ್‌ಘಟಿಸಿ ಹೊಸ ಕ್ಷೇತ್ರಗಳು ಉದಯವಾಗಿವೆ.*47 ಸ್ಥಾನಗಳ ವಿವರ: ಅವರಾದ ಬಿ- ಎಸ್ಸಿ, ಪಟ್ಟಣ- ಸಾಮಾನ್ಯ, ನಂದಿಕೂರ- ಸಾಮಾನ್ಯ ಮಹಿಳೆ, ಫರಹತಾಬಾದ್‌- ಸಾಮಾನ್ಯ, ಖಣದಾಳ- ಸಾಮಾನ್ಯ ಮಹಿಳೆ, ಕುಸನೂರ್‌- ಎಸ್ಸಿ ಮಹಿಳೆ, ನೆಲೋಗಿ- ಹಿಂದುಳಿದ ವರ್ಗ (ಅ) ಮಹಿಳೆ, ಮಂದೇವಾಲ ಸಾಮಾನ್ಯ, ಕೋಳಕೂರ ಸಾಮಾನ್ಯ, ಆಂದೋಲಾ ಎಸ್ಸಿ, ಖಜೂರಿ ಹಿಂದುಳಿದ ವರ್ಗ (ಅ) ಮಹಿಳೆ, ತಡಕಲ್‌ ಸಾಮಾನ್ಯ ಮಹಿಳೆ, ಸರಸಂಬಾ ಸಾಮಾನ್ಯ, ನರೋಣಾ- ಎಸ್ಸಿ, ಜಿಡಗಾ ಹಿಂದುಳಿದ ವರ್ಗ ಬಿ, ಮಾದನ ಹಿಪ್ಪರಗಾ- ಸಾಮಾನ್ಯ ಮಹಿಳೆ, ನಿಂಬರ್ಗಾ- ಎಸ್ಸಿ ಮಹಿಳೆ, ಕರಜಗಿ ಹಿಂದುಳಿದ ವರ್ಗ ಎ, ಬಡದಾಳ- ಸಾಮಾನ್ಯ ಮಿಳೆ, ದೇವಲ ಗಾಣಗಾಪೂರ- ಹಿಂದುಳಿದ ವರ್ಗ ಎ, ಆತನೂರ- ಎಸ್ಸಿ ಮಹಿಳೆ, ಗೊಬ್ಬರ (ಬಿ)- ಸಾಮಾನ್ಯ, ಸಂತ- ಎಸ್ಸಿ, ಮಹಾಗಂವ್‌- ಸಾಮಾನ್ಯ ಮಹಿಳೆ, ಅರಣಕಲ್‌- ಎಸ್ಸಿ ಮಹಿಳೆ, ವ್ಹಿಕೆ ಸಲಗರ್‌- ಸಾಮಾನ್ಯ, ಹೆಬ್ಬಾಳ- ಸಾಮಾನ್ಯ, ತೆಂಗಳಿ- ಎಸ್ಸಿ, ಕೋಡ್ಲಿ- ಹಿಂದುಳಿದ ವರ್ಗ (ಬಿ) ಮಹಿಳೆ, ಇಜೇರಿ- ಸಾಮಾನ್ಯ, ಅರಳಗುಂಡಗಿ- ಸಾಮಾನ್ಯ ಮಹಿಳೆ, ಮಳ್ಳಿ- ಎಸ್ಸಿ, ಮಳಖೇಡ- ಸಾಮಾನ್ಯ, ಆಡಕಿ- ಸಾಮಾನ್ಯ (ಮಹಿಳೆ), ಕೋಡ್ಲಾ- ಸಾಮಾನ್ಯ, ಮುಧೋಳ- ಎಸ್ಸಿ ಮಹಿಳೆ, ಕೋಲಕುಂದಾ- ಹಿಂದುಳಿದ ವರ್ಗ ಎ, ಚಿಮ್ಮನಚೋ- ಸಾಮಾನ್ಯ, ಐನೋಳ್ಳಿ- ಎಸ್ಸಿ ಮಹಿಳೆ, ಕುಂಚಾವರಂ- ಎಸ್ಸಿ, ಸುಲೇಪೇಟ್‌- ಸಾಮಾನ್ಯ ಮಹಿಳೆ, ನಿಡಗುಂದಾ- ಎಸ್ಸಿ ಮಹಿಳೆ, ದಂಡೋತಿ- ಹಿಂದುಳಿದ ವರ್ಗ (ಎ) ಮಹಿಳೆ, ಭೀಮನಳ್ಳಿ- ಎಸ್ಸಿ ಮಹಿಳೆ, ನಾಲವಾರ- ಸಾಮಾನ್ಯ ಮಹಿಳೆ, ಇಂಗಳಗಿ- ಸಾಮಾನ್ಯ, ರಾವೂರ- ಸಾಮಾನ್ಯ ಮಹಿಳೆ, ಭಂಕೂರ ಹಿಂದುಳಿದ ವರ್ಗ ಎ ಗೆ ನಿಗದಿಗೊಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಡಿಕೆಶಿ ಸರ್ಕಾರದ ಖಜಾನೆ ಪೂರ್ತಿ ಖಾಲಿ: ವಿಜಯೇಂದ್ರ