ಮಾನವೀಯತೆ-ಅಂತಃಕರಣದ ಕಲಬುರ್ಗಿ: ಸಾಹಿತಿ ಗೊ,ರು, ಚನ್ನಬಸಪ್ಪ

KannadaprabhaNewsNetwork |  
Published : Nov 29, 2024, 01:01 AM IST
28ಡಿಡಬ್ಲೂಡಿ5ಡಾ.ಎಂ.ಎಂ. ಕಲಬುರ್ಗಿ ಅವರ 86ನೇ ಜನ್ಮದಿನಾಚರಣೆ ನಿಮಿತ್ತ ಗುರುವಾರ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಡಾ. ಎಂ.ಎಂ.ಕಲಬುರ್ಗಿ ವಚನ ಸಂಗೀತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಸಂಗೀತ ಉಪನ್ಯಾಸಕ ಡಾ.ಶರಣಬಸಪ್ಪ ಮೇಡದಾರ ಅವರಿಗೆ ನಾಡೋಜ ಗೊ.ರು.ಚನ್ನಬಸಪ್ಪ ಪ್ರದಾನ ಮಾಡಿದರು. | Kannada Prabha

ಸಾರಾಂಶ

ಸಭ್ಯತೆ, ವಿನಮೃತೆ, ಪ್ರಾಮಾಣಿಕತೆ, ಸತ್ಯಶೋಧನೆ, ನಿಷ್ಠೆ, ಸ್ವಾಭಿಮಾನ, ಸಾತ್ವಿಕ ಆಚಾರ-ವಿಚಾರ, ಸೃಜನಶೀಲತೆ ಹೀಗೆ ಡಾ. ಕಲಬುರ್ಗಿ ಅವರದು ಸಮಗ್ರ ವ್ಯಕ್ತಿತ್ವವಾಗಿದೆ.

ಧಾರವಾಡ:

ನಗರದ ಆಲೂರು ವೆಂಟಕರಾವ್ ಸಭಾಭವನದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರ 86ನೇ ಜನ್ಮದಿನಾಚರಣೆ ಮತ್ತು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಗ್ರಂಥ ಬಿಡುಗಡೆ ಸಮಾರಂಭ ಗುರುವಾರ ಜರುಗಿತು.

₹ 25 ಸಾವಿರ ನಗದು, ಸ್ಮರಣೆ, ಫಲಕ ಒಳಗೊಂಡ ಡಾ. ಎಂ.ಎಂ. ಕಲಬುರ್ಗಿ ವಚನ ಸಂಗೀತ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಗೀತ ಉಪನ್ಯಾಸಕ ಡಾ. ಶರಣಬಸಪ್ಪ ಮೇಡದಾರ ಅವರಿಗೆ ನಾಡೋಜ ಗೊ.ರು. ಚನ್ನಬಸಪ್ಪ ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಗೊ.ರು. ಚನ್ನಬಸಪ್ಪ, ಸಭ್ಯತೆ, ವಿನಮೃತೆ, ಪ್ರಾಮಾಣಿಕತೆ, ಸತ್ಯಶೋಧನೆ, ನಿಷ್ಠೆ, ಸ್ವಾಭಿಮಾನ, ಸಾತ್ವಿಕ ಆಚಾರ-ವಿಚಾರ, ಸೃಜನಶೀಲತೆ ಹೀಗೆ ಡಾ. ಕಲಬುರ್ಗಿ ಅವರದು ಸಮಗ್ರ ವ್ಯಕ್ತಿತ್ವವಾಗಿದೆ. ಮಾನವೀಯತೆ ಹಾಗೂ ಅಂತಃಕರಣದ ಗುಣಗಳು ಹೊಂದಿದ ಕಲಬುರ್ಗಿ ಅವರು, ಹಸಿವು ಹಾಗೂ ನಿದ್ರೆ ಮರೆತು ಕೆಲಸ ಮಾಡಿದ ದಾರ್ಶನಿಕರು. ಅವರು ಸಂಶೋಧನೆ, ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಮೋಘವಾಗಿದೆ ಎಂದು ಸ್ಮರಣೆ ಮಾಡಿದರು.ಡಾ. ಕಲಬುರ್ಗಿ ಅವರು ಸತ್ಯದ ಸಾಧನೆ ಸೃಷ್ಟಿಸಿ, ನಾಡಿಗೆ ಬಿಟ್ಟು ಹೋಗಿದ್ದಾರೆ. ಅವರನ್ನು ಶಾಶ್ವತವಾಗಿ ಸ್ಮರಿಸಲು ಸರ್ಕಾರ ಕಲಬುರ್ಗಿ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪನೆ ಸಂತಸ. ಸಂಶೋಧಕರು ಕಲಬುರ್ಗಿ ಅವರ ಆದರ್ಶ ಮೈಗೂಸಿಕೊಳ್ಳಲು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಸಂಗೀತ ಉಪನ್ಯಾಸ ಡಾ. ಶರಣಬಸಪ್ಪ ಮೇಡೆದಾರ ಮಾತನಾಡಿ, ನಾಡಿನ ಶ್ರೇಷ್ಠ ಸಂಶೋಧಕರಲ್ಲಿ ಒಬ್ಬರಾದ ಡಾ. ಎಂ.ಎಂ. ಕಲಬುರ್ಗಿ ಗುರುಗಳ ಹೆಸರಿನ ವಚನ ಸಂಗೀತ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಯಾವುದೇ ಲಾಭಿ ಮಾಡದೆ, ಅರ್ಜಿಯೂ ಹಾಕದ ನನ್ನನ್ನು ಗುರುತಿಸಿ, ಈ ಪ್ರಶಸ್ತಿ ನೀಡಿದ ಪ್ರತಿಷ್ಠಾನಕ್ಕೆ ಕೃತಜ್ಞತೆಗಳು. ಜವಾಬ್ದಾರಿ ಹೆಚ್ಚಿಸಿದ ಈ ಪ್ರಶಸ್ತಿ ಶರಣರ ವಚನ ಸಾಹಿತ್ಯ ಕುರಿತು ಇನ್ನಷ್ಟು ಕೆಲಸ ಮಾಡಲು ಪ್ರೇರೆಪಿಸಿದ್ದಾಗಿ ತಿಳಿಸಿದರು.

ಸಾಹಿತಿ ಜಿ.ಎಂ. ಹೆಗಡೆ ಕನ್ನಡ ಸಂಶೋಧನಾ ಮಾರ್ಗ-1 ಗ್ರಂಥ ಬಿಡುಗಡೆ ಮಾಡಿದರು. ಟ್ರಸ್ಟ್ ಸದಸ್ಯರಾದ ಉಮಾದೇವಿ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ಬಾಳಣ್ಣ ಶೀಗಿಹಳ್ಳಿ, ವಿಜಯ ಕಲಬುರ್ಗಿ, ಸಂಶೋಧಕಿ ಹನುಮಾಕ್ಷಿ ಗೋಗಿ, ಎಚ್.ಎಸ್. ಮೇಲಿನಮನಿ, ಡಾ. ಸಿದ್ಧನಗೌಡ ಪಾಟೀಲ, ಚಂದ್ರಶೇಖರ ವಸ್ತ್ರದ, ಕನ್ನಡ-ಸಂಸ್ಕೃತಿ ಇಲಾಖೆ ಬೆಳಗಾವಿ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ ಇದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ಶಶಿಧರ ತೋಡ್ಕರ್ ಪರಿಚಯಿಸಿದರು. ಉಪನ್ಯಾಸಕ ಈರಣ್ಣ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ