ಕನ್ನಡಪ್ರಭ ವಾರ್ತೆ ಕಾಳಗಿ
ಬೆಳಗಿನಿಂದಲೆ ಗ್ರಾಮಸ್ಥರು ಶ್ರೀಮಠದ ನೀಲಕಂಠ ಸ್ವಾಮಿಯ ಗದ್ದುಗೆ ನೈವೇದ್ಯ ಸಮರ್ಪಸಿದರು. ಬಾಜಾ ಭಜಂತ್ರಿ ಮಂಗಳ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಮ.1 ಗಂಟೆಗೆ ಮಹಾ ಪ್ರಸಾದಕ್ಕೆ ಶ್ರೀ ಮಠದ ಪೀಠಾಧಿಪತಿ ಸಿದ್ದರಾಮ ಶಿವಯೋಗಿ ಚಾಲನೆ ನೀಡಿದರು.
ನಂತರ ಭಕ್ತರು ಪ್ರಸಾದ ಸೇವಿಸಿದರು. ಸಂಜೆ 6.30ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಸೇರಿ ರಥೋತ್ಸವನ್ನು ಸಂಭ್ರಮದಿಂದ ನೆರವೇರಿಸಿದರು. ನೆರೆದ ಭಕ್ತರು ಹೂ ಹಣ್ಣು ಉತ್ತತ್ತಿ ಏಸೆದು ಭಕ್ತಿ ಸಮರ್ಪಿಸಿ ರಥೋತ್ಸವಕ್ಕೆ ಮೆರಗು ನೀಡಿದರು.ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಹುಲಸೂರ ಡಾ.ಶಿವನಾಂದ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯೆ ಮುರುಘೇಂದ್ರ ಶಿವಯೋಗಿಗಳು, ಮತ್ತು ನೀಲಕಂಠ ಸ್ವಾಮೀಜಿ ರಟಕಲ್ ಗ್ರಾಮಕ್ಕೆ ಮುತ್ತಿನಂತಿದ್ದರು, ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಜೀವನ ಸಾಗಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಂಡರೆ ಸಾರ್ಥಕತೆ ಆಗುತ್ತದೆ ಎಂದರು.