ಗಜೇಂದ್ರಗಡ: ಪಟ್ಟಣ ಸಮೀಪದ ಅಸಂಖ್ಯಾತ ಭಕ್ತರ ಆರಾಧ್ಯ ಕುಲದೈವ ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಏ. ೨ರಂದು ದವನದ ಹುಣ್ಣಿಮೆಯಂದು ಸಂಜೆ ೫.೨೦ಕ್ಕೆ ಅದ್ಧೂರಿಯಾಗಿ ನಡೆಯಲಿದೆ.
ಕಾಲಕಾಲೇಶ್ವರ ದೇವರ ಜಾತ್ರೆಯು ಏ. ೧೨ರಂದು ದವನದ ಹುಣ್ಣಿಮೆಯಂದು ವೈಭವಗಳೊಂದಿಗೆ ರಥೋತ್ಸವವು ನಡೆಯಲಿದೆ.ದವನದ ಹುಣ್ಣಿಮೆ ದಿನದಂದು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ- ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ. ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಧರ್ಮದರ್ಶಿಗಳಾದ ಘೋರ್ಪಡೆಯವರು ಸಂಜೆ ಬಾನಂಗಳದಲ್ಲಿ ಚಿತ್ತಾ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆಯೇ ತುಪಾಕಿ ಹಾರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಏ. ೧ರಂದು ಮಹಾರಥಕ್ಕೆ ಕಳಸಾರೋಹಣ ಬಳಿಕ ಕಾಲಕಾಲೇಶ್ವರ ಬೋರಾದೇವಿಯವರ ನಂದಿ ವಾಹನದಲ್ಲಿ ಕಲ್ಯಾಣೋತ್ಸವ ಜರುಗಲಿದ್ದು, ಏ. ೨ರಂದು ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ದವನಾರ್ಪಣೆ ಸೇವೆ ಸಂಜೆ ಮಹಾರಥೋತ್ಸವ ನಡೆಯಲಿದೆ. ಏ. ೩ರಂದು ಕಡುಬಿನ ಕಾಳಗ, ಸ್ವಾಮಿಗೆ ನಿತ್ಯ ರುದ್ರಾಭಿಷೇಕ ಸಂಜೆ ಕಾಲಕಾಲೇಶ್ವರ ಸ್ವಾಮಿಗೆ ಬೋರಾದೇವಿಯನ್ನು ಒಪ್ಪಿಸುವ ಕಾರ್ಯಕ್ರಮ ಬಳಿಕ ತೊಟ್ಟಿಲು, ಗುಲಾಲ ಸೇವೆ ನಡೆಯಲಿದೆ.
ಏ. ೪ರಂದು ಪುಷ್ಕರ್ಣಿ ತೀರ್ಥದಲ್ಲಿ ಕಾಲೇಶನಿಗೆ ಹಾಗೂ ಬೋರಾದೇವಿಗೆ ಅಮೃತ ಸ್ನಾನ ನಡೆಯಲಿದೆ. ಭಾವೈಕ್ಯತೆಯ ಸಂಕೇತವಾಗಿರುವ ಈ ಜಾತ್ರೆಯು ಐದು ದಿನಗಳ ವರೆಗೆ ನಡೆಯಲಿದೆ.