ಕರ್ಣಾಟಕ ಬ್ಯಾಂಕ್ ಸ್ಥಾಪನೆಗೊಂಡ ಆರಂಭಿಕ ದಿನಗಳಲ್ಲಿ ಬ್ಯಾಂಕ್‌ನ ಉದ್ಯೋಗಿಯಾಗಿ ಸೇರ್ಪಡೆಗೊಂಡ ಬಳಿಕ ಹಂತ ಹಂತವಾಗಿ ಪದೋನ್ನತಿ ಹೊಂದಿ ಡೆಪ್ಯುಟಿ ಜನರಲ್ ಮೆನೇಜರ್ ಆಗಿ ನಿವೃತ್ತಿ ಹೊಂದಿದ್ದ ಬಿ.ಕೆ. ರಾಮಕೃಷ್ಣ ರಾವ್ ಅವರಿಗೆ ಮಧ್ವಜಯಂತಿ ಹಾಗೂ ವಿಜಯದಶಮಿ ಆಚರಣೆಯ ಸಂದರ್ಭ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಕಲ್ಕೂರ ವಿದ್ವತ್ ಸಂಮಾನ’ ನೀಡಿ ಗೌರವಿಸಲಾಯಿತು.
ಮಂಗಳೂರು : ಕರ್ಣಾಟಕ ಬ್ಯಾಂಕ್ ಸ್ಥಾಪನೆಗೊಂಡ ಆರಂಭಿಕ ದಿನಗಳಲ್ಲಿ ಬ್ಯಾಂಕ್‌ನ ಉದ್ಯೋಗಿಯಾಗಿ ಸೇರ್ಪಡೆಗೊಂಡ ಬಳಿಕ ಹಂತ ಹಂತವಾಗಿ ಪದೋನ್ನತಿ ಹೊಂದಿ ಡೆಪ್ಯುಟಿ ಜನರಲ್ ಮೆನೇಜರ್ ಆಗಿ ನಿವೃತ್ತಿ ಹೊಂದಿದ್ದ ಬಿ.ಕೆ. ರಾಮಕೃಷ್ಣ ರಾವ್ ಅವರಿಗೆ ಮಧ್ವಜಯಂತಿ ಹಾಗೂ ವಿಜಯದಶಮಿ ಆಚರಣೆಯ ಸಂದರ್ಭ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಕಲ್ಕೂರ ವಿದ್ವತ್ ಸಂಮಾನ’ ನೀಡಿ ಗೌರವಿಸಲಾಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕರ್ಣಾಟಕ ಬ್ಯಾಂಕಿನ ಸರ್ವತೋಮುಖ ಉನ್ನತಿಗಾಗಿ ನಿರಂತರವಾಗಿ ಶ್ರಮಿಸಿದ್ದ ರಾಮಕೃಷ್ಣ ರಾಯರ ಸೇವಾ ಬದ್ಧತೆ ಇತರರಿಗೂ ಮಾದರಿಯಾಗಲಿ. ಅವರು ಬ್ಯಾಂಕ್‌ನಿಂದ ಸೇವಾ ನಿವೃತ್ತರಾದರೂ ಸ್ವಲ್ಪವೂ ವಿಶ್ರಮಿಸದೆ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಆರ್ಥಿಕ ತಜ್ಞರಾಗಿದ್ದುಕೊಂಡು ಸಮಾಜಕ್ಕೆ ಹಿರಿಯ ಮಾರ್ಗದರ್ಶಕರಾಗಿ ಸದಾ ಚಟುವಟಿಕೆಯಿಂದಿರುವುದು ಸಂತಸದ ಸಂಗತಿ ಎಂದರು.ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಶುಭಾಶಂಸನೆಗೈದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.