ಕಲ್ಲಚ್ಚು ‘ರಜತ ರಂಗು’: ಸಾಧಕರಿಗೆ ಸನ್ಮಾನ

KannadaprabhaNewsNetwork | Published : Jan 6, 2025 1:02 AM

ಸಾರಾಂಶ

ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ ಆರ್. ನಾಯಕ್ ರಚಿಸಿದ ‘ಅನೂಗೂಡುನೂ ಬಾ’ - ಕಥೆ ಕವನಗಳ ಕಾರುಬಾರಿನೊಳು ಕೃತಿಯನ್ನು ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಬಿಡುಗಡೆಗೊಳಿಸಿದರು. ಕಥೆಗಾರ

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ 25 ವರ್ಷಗಳಿಂದ ಪುಸ್ತಕ ಪ್ರಕಟಣೆಯಲ್ಲಿ ತೊಡಗಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ‘ರಜತ ರಂಗು’ ಕಾರ್ಯಕ್ರಮಕ್ಕೆ ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡಮಿ ನಿವೃತ್ತ ಉಪಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ., ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ನಾಡು ದೇಶದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಸಾಹಿತ್ಯದಲ್ಲಿ ನಾನಾ ಪ್ರಕಾರಗಳಿದ್ದು, ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ, ಪರಂಪಕೆ ಕನ್ನಡಕ್ಕೆ ಇದೆ. ಬಹುತೇಕ ಸಾಹಿತಿಗಳೂ ಕನ್ನಡೇತರ ಭಾಷೆಗಳಲ್ಲಿ ಕೂಡ ಬರೆಯುವ ಶಕ್ತಿ ಹೊಂದಿರುವುದು ಈ ನಾಡಿನ ವಿಶೇಷತೆ ಎಂದರು.ಸಾಹಿತ್ಯ ರಚನೆಗೆ ಸಾಕಷ್ಟು ಅಧ್ಯಯನದ ಅಗತ್ಯವಿದೆ. ಜತೆಗೆ ಅದಮ್ಯವಾದ ಜೀವನ ಪ್ರೀತಿಯಿಂದ ಸಾಹಿತ್ಯವನ್ನು ಮತ್ತಷ್ಟು ವೃದ್ಧಿಗೊಳಿಸಲು ಸಾಧ್ಯ ಎಂದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಮಡಿಕೇರಿ, ಡಾ. ಪ್ರಸನ್ನ ಕೆ. ಸಂತೇಕಡೂರು ಮೈಸೂರು, ಡಾ. ಕೊಳ್ಚಪ್ಪೆ ಗೋವಿಂದ ಭಟ್, ರಾಘವೇಂದ್ರ ಅಗ್ನಿಹೋತ್ರಿ, ವಿಕ್ರಂ ಕಾಂತಿಕೆರೆ, ಸಂಪತ್ ಸಿರಿಮನೆ ಶೃಂಗೇರಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಹಂಝ ಮಲಾರ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ರಾಘವೇಂದ್ರ ಬಿ.ರಾವ್, ಮುಹಮ್ಮದ್ ಅಶೀರುದ್ದೀನ್ ಸಾರ್ತಬೈಲು, ನಾರಾಯಣ ಕುಂಬ್ರ ಪುತ್ತೂರು, ಮಧುರಾ ಕರ್ಣಮ್ ಬೆಂಗಳೂರು, ಡಾ.ಮೋನಾ ಮೆಂಡೋನ್ಸಾ, ಪುಷ್ಪಲತಾ ಪ್ರಭು ಕೊಂಚಾಡಿ, ಪಯ್ಯನ್ನೂರು ರಮೇಶ್ ಪೈ ಕೇರಳ, ಬಿ.ಎನ್. ವಾಸರೆ ದಾಂಡೇಲಿ, ಸುಶೀಲನ್ ಮೋಡಿಯಿಲ್ ಉಡುಪಿ, ಜಗದೀಶ ಭಂಡಾರಿ, ವಿಭಾ ಶ್ರೀನಿವಾಸ್ ನಾಯ್, ಕೆ. ಲಕ್ಷ್ಮಿನಾರಾಯಣ, ಕ್ರಿಸ್ಟೋಫರ್ ಜೋನ್ ಡಿಸೋಜ, ಪ್ರಕಾಶ ಇಳಂತಿಲ, ವಿದ್ಯಾ ಇಡ್ಕಿದು ಅವರನ್ನು ಸನ್ಮಾನಿಸಲಾಯಿತು.

ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ ಆರ್. ನಾಯಕ್ ರಚಿಸಿದ ‘ಅನೂಗೂಡುನೂ ಬಾ’ - ಕಥೆ ಕವನಗಳ ಕಾರುಬಾರಿನೊಳು ಕೃತಿಯನ್ನು ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಬಿಡುಗಡೆಗೊಳಿಸಿದರು. ಕಥೆಗಾರ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ಜಯಂತ್ ನಾಯಕ್, ಪೃಥ್ವಿರಾಜ್‌ ನಾಯಕ್, ಡಾ. ಸ್ಮಿತಾ ನಾಯಕ್ ಭಾಗವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ್ ಆರ್. ನಾಯಕ್ ಸ್ವಾಗತಿಸಿದರು.

Share this article