ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟ: ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : Apr 02, 2025, 01:00 AM IST
ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌‌: ಬೆದ್ರ ಇನ್ಸ್ಪೆಕ್ಟರ್ ಸಹಿತ ಸಾಧಕರಿಗೆ ಸನ್ಮಾನ,ವಿದ್ಯಾಭ್ಯಾಸಕ್ಕೆ ನೆರವು | Kannada Prabha

ಸಾರಾಂಶ

ಐದನೇ ಆವೃತ್ತಿಯ ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌‌ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪಂದ್ಯಾಕೂಟದಲ್ಲಿ ಉಳಿಕೆಯಾದ ರು.25 ಸಾವಿರವನ್ನು ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ಐದನೇ ಆವೃತ್ತಿಯ ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌‌ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪಂದ್ಯಾಕೂಟದಲ್ಲಿ ಉಳಿಕೆಯಾದ ರು.25 ಸಾವಿರವನ್ನು ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನೀಡಲಾಯಿತು.

ಮುಖ್ಯಮಂತ್ರಿ ಪದಕ ವಿಜೇತ ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ, ಕಲ್ಲಮುಂಡ್ಕೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸದಾನಂದ ಪೂಜಾರಿ, ದೈವಾರಾಧನೆ ಹಾಗೂ ಕೃಷಿ ಕ್ಷೇತ್ರದ ಸಾಧನೆಗಾಗಿ ವೆಂಕಪ್ಪ ಕೋಟ್ಯಾನ್, ಮೇಲ್ದಬೆಟ್ಟು ನಿಡ್ಡೋಡಿ,ಕಂಬಳ ಕ್ಷೇತ್ರದ ಸಾಧನೆಗಾಗಿ ರಾಮ ಸುವರ್ಣ ನಿಡ್ಡೋಡಿ, ಕಲಾ ಕ್ಷೇತ್ರದ ಸಾಧನೆಗಾಗಿ ಜಯ ಸುವರ್ಣ ನಿಡ್ಡೋಡಿ, ತುಳು ರಂಗಭೂಮಿಯ ಸಾಧನೆಗಾಗಿ ಸತೀಶ್ ಅಮೀನ್ ಕಲ್ಲಮುಂಡ್ಕೂರು ಹಾಗೂ ಕುಣಿತ ಭಜನೆಯ ಸಾಧನೆಗಾಗಿ ಅಶೋಕ ನಾಯ್ಕ ಕಳಸಬೈಲು ಅವರನ್ನು ಸನ್ಮಾನಿಸಲಾಯಿತು.

ಐದನೇ ಆವೃತ್ತಿಯ ಕಲ್ಲಮುಂಡ್ಕೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಓಂಕಾರ್ ಬಾಲಾಜಿ ತಂಡ ಪ್ರಥಮ, ಎನ್.ವೈ.ಬಿ.ಪ್ಯಾಂಥರ್ಸ್ ದ್ವಿತೀಯ, ನಮೋ ವಾರಿಯರ್ಸ್ ತೃತೀಯ ಹಾಗೂ ಕೆ.ಎಫ್.ಸಿ.ಕಟೀಲ್ ತಂಡ ಚತುರ್ಥ ಬಹಮಾನಗಳನ್ನು ಪಡಕೊಂಡವು.

ಪಂದ್ಯಾಟದಲ್ಲಿ ಉಳಿಕೆಯಾದ ರು.25 ಸಾವಿರವನ್ನು ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಸುಕುಮಾರ್ ಅಮೀನ್ ಪ್ರೌಢಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ಸಮಾರೋಪ ಸಮಾರಂಭದಲ್ಲಿ ಕಲ್ಲಮುಂಡ್ಕೂರು ಶ್ರೀ ಕ್ಷೇತ್ರ ದೈಲಬೆಟ್ಟುವಿನ ಆಡಳಿತ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್, ಸರ್ವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ಸ್ಟ್ಯಾನಿ ಡಿಸೋಜ, ಸದಾನಂದ ಪೂಜಾರಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ನಂದೇಶ್ ಕೋಟ್ಯಾನ್, ಪ್ರಕಾಶ್ ಮಿರಾಂದ, ಸಂದೀಪ್ ಸುವರ್ಣ, ಸುಧಾಕರ ಪೂಜಾರಿ, ಗ್ರಾ.ಪಂ.ಸದಸ್ಯ ಗಿರೀಶ್ ಪೂಜಾರಿ, ಎನ್.ವೈ.ಬಿ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಮತ್ತಿತರರು ಇದ್ದರು.

ಸರ್ವೋದಯ ಫ್ರೆಂಡ್ಸ್ ತಂಡದ ಖ್ಯಾತ ಆಟಗಾರರಾದ ಪ್ರಸನ್ನ ಆಚಾರ್ಯ, ನೀತು ಪಟ್ಟೆ, ಸಂದೀಪ್ ಹಾಗೂ ಹಿರಿಯ ವಾಲಿಬಾಲ್ ಆಟಗಾರ ಸನತ್ ಕುಮಾರ್ ಶೆಟ್ಟಿ ಅವರನ್ನು ಸರ್ವೋದಯ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?