ಕಲ್ಲಾಪು ಗ್ಲೋಬಲ್‌ ಮಾರ್ಕೆಟ್‌ ಅಗ್ನಿ ದುರಂತ: ಕೋಟ್ಯಂತರ ರು. ನಷ್ಟ

KannadaprabhaNewsNetwork |  
Published : Jun 11, 2024, 01:38 AM IST
ಹೊತ್ತಿ ಉರಿಯುತ್ತಿರುವ ಮಾರುಕಟ್ಟೆ | Kannada Prabha

ಸಾರಾಂಶ

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಢ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ, ವ್ಯಾಪಾರಸ್ಥರಿಗೆ ಕೋಟ್ಯಂತರ ರು. ನಷ್ಟ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಢ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ, ವ್ಯಾಪಾರಸ್ಥರಿಗೆ ಕೋಟ್ಯಂತರ ರು. ನಷ್ಟ ಉಂಟಾಗಿದೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್ ಫ್ರೂಟ್ಸ್ (1 ಕೋಟಿ ರು.) , ಸುಹೈಲ್ ಎಂಬವರಿಗೆ ಸೇರಿದ ಕೆಎಫ್ ಕೆ (40 ಲಕ್ಷ ರು.), ಲತೀಫ್ ಎಂಬವರ ಕೆ.ಕೆ.ಫ್ರೂಟ್ಸ್ (70 ಲಕ್ಷ ರು.), ಇಂಡಿಯನ್ (60 ಲಕ್ಷ ರು. ),ಸಲಾಂ ಅವರ ಬಿ.ಎಸ್.ಆರ್ (15 ರಿಂದ 20 ಲಕ್ಷ ರು.), ಝುಲ್ಫೀಕರ್ ಅವರ ಪಿಕೆಎಸ್ (15-20 ಲಕ್ಷ ರು.), ನಾಸೀರ್ ಎಂಬವರ ಕೆಜಿಎನ್ ಫ್ರೂಟ್ಸ್ (15-20 ಲಕ್ಷ ರು.) ಮಳಿಗೆಗಳು ನಷ್ಟ ಅನುಭವಿಸಿವೆ.ಇದರ ಹತ್ತಿರದಲ್ಲಿರುವ ಸಣ್ಣ ಅಂಗಡಿಗಳಾದ ಗಣೇಶ್ ಮಾರ್ಕೆಟ್, ಇಮ್ತಿಯಾಝ್, ಅಮೀರ್ ಸೇರಿದಂತೆ ಒಟ್ಟು 20 ಅಂಗಡಿಗಳು ಸುಟ್ಟುಹೋಗಿವೆ.

ಎಸ್ ಎನ್ ಫ್ರೂಟ್ಸ್ ಮಾಲೀಕರು ಭಾನುವಾರ ಸಂಜೆ ವೇಳೆಯಷ್ಟೇ ರು. 40 ಲಕ್ಷದ ಹಣ್ಣುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಗಳಲ್ಲಿ ಫ್ರೀಝರ್‌ಗಳಿದ್ದು, ಅವುಗಳು ಸುಟ್ಟುಹೋಗಿವೆ. ರಾತ್ರಿ 2.30 ರ ಸುಮಾರಿಗೆ ಬೀಗ ಹಾಕಿದ್ದ ಅಂಗಡಿಗಳ ಒಳಗಿನಿಂದ ಬೆಂಕಿ ಕಾಣಿಸಿಕೊಂಡಿದ್ದು ಒಮ್ಮಿಂದೊಮ್ಮೆಲೇ 25 ಅಂಗಡಿಗಳಿಗೇ ವ್ಯಾಪಿಸಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆಯಲ್ಲಿ ಉಳಿದ 60 ಅಂಗಡಿಗಳಿಗೆ ಬೆಂಕಿ ಹರಡಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲ್ಯಾಂಬೋರ್ಗಿನಿ ಗಿರಿಗಿಟ್ಲೆ:ಮುತ್ತಪ್ಪರೈ ಪುತ್ರನ ವಿರುದ್ಧ ಮತ್ತೊಂದು ಕೇಸ್
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಪತ್ತೆ!