ಇತ್ತೀಚೆಗೆ ಲ್ಯಾಂಬೋರ್ಗಿನಿ ಗಿರಿಗಿಟ್ಲೆ ಹೊಡೆಸಿದ ವಿವಾದದ ಬಳಿಕ ಈಗ ಮಾಜಿ ಭೂಗತ ಪಾತಕಿ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆ ಲ್ಯಾಂಬೋರ್ಗಿನಿ ಕಾರಿಗೆ ಅಕ್ರಮವಾಗಿ ನೋಂದಣಿ ಸಂಖ್ಯೆ ಫಲಕ ಅಳವಡಿಸಿದ ಆರೋಪ

ಬೆಂಗಳೂರು : ಇತ್ತೀಚೆಗೆ ಲ್ಯಾಂಬೋರ್ಗಿನಿ ಗಿರಿಗಿಟ್ಲೆ ಹೊಡೆಸಿದ ವಿವಾದದ ಬಳಿಕ ಈಗ ಮಾಜಿ ಭೂಗತ ಪಾತಕಿ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆ ಲ್ಯಾಂಬೋರ್ಗಿನಿ ಕಾರಿಗೆ ಅಕ್ರಮವಾಗಿ ನೋಂದಣಿ ಸಂಖ್ಯೆ ಫಲಕ ಅಳವಡಿಸಿದ ಆರೋಪದ ಆತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ದೆಹಲಿಯಲ್ಲಿ ಲಾಂಬೋರ್ಗಿನಿ ಕಾರನ್ನು ಖರೀದಿ

ದೆಹಲಿಯಲ್ಲಿ ಲಾಂಬೋರ್ಗಿನಿ ಕಾರನ್ನು ಖರೀದಿಸಲಾಗಿದೆ. ಆದರೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಹರಾಜಿನಲ್ಲಿ ಖರೀದಿಸಿ ತೆರಿಗೆ ಪಾವತಿಸದೆ ಕಾರಿಗೆ ಆತ ಅಳವಡಿಸಿದ್ದ ಸಂಗತಿ ಸಂಚಾರ ಪೊಲೀಸರ ತನಿಖೆಯಲ್ಲಿ ಗೊತ್ತಾಯಿತು. ಅಕ್ರಮವಾಗಿ ನೋಂದಣಿ ಸಂಖ್ಯೆ ಫಲಕ ಹಾಕಿದ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಂಬೋರ್ಗಿನಿ ಕಾರನ್ನು ಗಿರಿಗಿಟ್ಲೆ ಹೊಡೆಸಿ ವಿವಾದಕ್ಕೆ

ಕಳೆದ ಭಾನುವಾರ ರಾತ್ರಿ ನಗರದ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಗಿರಿಗಿಟ್ಲೆ ಹೊಡೆಸಿ ರಿಕ್ಕಿ ವಿವಾದಕ್ಕೆ ಸಿಲುಕಿದ್ದ. ಈ ಘಟನೆ ಸಂಬಂಧ ಆತನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಕಲಿ ನೋಂದಣಿ ಸಂಖ್ಯೆ ಬಳಸಿದ್ದರಿಂದಾಗಿ ಗಿರಿಗಿಟ್ಲೆ ಹೊಡೆಸಿದ ಪ್ರಕರಣ ಸಂಬಂಧ ಕಾರಿನ ನೋಂದಣಿ ಪತ್ತೆಯಾರೂ ಅದರ ಮಾಲಿಕರ ವಿವರ ಸಿಗುವುದು ತಡವಾಯಿತು. ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿದ್ದ. ಆಗ ಕಾರಿಗೆ ಕೆಎ 05 ಎನ್‌ಆರ್‌ 0009 ನಂಬರ್‌ನ ಫ್ಯಾನ್ಸಿ ನಂಬರ್ ಪಡೆದಿದ್ದ. ಆದರೆ ನೋಂದಣಿ ಮಾಡಿಸಿ ತೆರಿಗೆ ಪಾವತಿಸಬೇಕಿದೆ. ಲ್ಯಾಂಬೋರ್ಗಿನಿ ಕಾರಿಗೆ ನೋಂದಣಿಗೆ ಲಕ್ಷಾಂತರ ತೆರಿಗೆ ಇದೆ. ಈ ತೆರಿಗೆ ತಪ್ಪಿಸುವ ಸಲುವಾಗಿಯೇ ಆತ ಅಕ್ರಮವಾಗಿ ನೋಂದಣಿ ಫಲಕ ಅಳ‍ವಡಿಸಿದ್ದ. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.