ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ 33ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇರು ಬಂಡವಾಳ ₹78.76 ಲಕ್ಷ, ನಿಧಿಗಳು ₹19.63 ಕೋಟಿ, ಒಟ್ಟು ಠೇವುಗಳು ₹57.88 ಕೋಟಿ ಹೊಂದಿದೆ ಎಂದು ಹೇಳಿದರು.
ಸಂಘ ಈ ವರೆಗೆ ₹65.39 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವ ನೀಡಿದ್ದು, ₹11.55 ಕೋಟಿ ಗುಂತಾವಣಿ ಹೊಂದಿದೆ. ಪ್ರತಿ ವರ್ಷವೂ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಸಲಾಗುತ್ತಿದೆ. ಸಂಘದ ಸದಸ್ಯರಿಗೆ ಸಾಲದ ಮೊತ್ತ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗಿದೆ. ಸಂಘದ ಸದಸ್ಯರಿಗೆ ಆರೋಗ್ಯ ವಿಮೆ ಮಾಡಲಾಗುವುದು ಎಂದು ತಿಳಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸಂಘದ ಸದಸ್ಯರ ಮಕ್ಕಳಾದ ಸಮೃದ್ಧ ಬಿ.ಪಾಟೀಲ, ಲಕ್ಷ್ಮೀ ಪಾಗದ, ನಂದಾ ಸಾಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಐಶ್ವರ್ಯ ಬಿ. ಪಾಟೀಲ, ಸುಜಾತಾ ಗೋರೋಶಿ, ಸೃಷ್ಟಿ ಸಂಸುದ್ದಿ ಇವರಿಗೆ ಕ್ರಮವಾಗಿ ₹25 ಸಾವಿರ, ₹20 ಸಾವಿರ ಹಾಗೂ ₹ 15 ಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.
ರಮೇಶ ಕವಟಗೊಪ್ಪ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ನಿರೂಪಿಸಿದರು. ಲೆಕ್ಕ ನಿರ್ವಾಹಕ ಈರಯ್ಯ ಕರಗಾಂವಿಮಠ ವಂದಿಸಿದರು.