ಚಿಕ್ಕೋಡಿ ವಕೀಲರ ಸಂಘಕ್ಕೆ ಕಲ್ಮೇಶ ಅಧ್ಯಕ್ಷ, ಹಿತ್ತಲಮನಿ ಪ್ರಧಾನ ಕಾರ್ಯದರ್ಶಿ

KannadaprabhaNewsNetwork |  
Published : Apr 04, 2025, 12:45 AM IST
ಚಿಕ್ಕೋಡಿ ವಕೀಲರ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. | Kannada Prabha

ಸಾರಾಂಶ

ಚಿಕ್ಕೋಡಿ ವಕೀಲರ ಸಂಘದ ಎರಡು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯ ಕಲ್ಮೇಶ ಕಿವಡ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಬಿ.ಹಿತ್ತಲಮನಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎಚ್.ಗಾಂಧಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ವಕೀಲರ ಸಂಘದ ಎರಡು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯ ಕಲ್ಮೇಶ ಕಿವಡ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಬಿ.ಹಿತ್ತಲಮನಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎಚ್.ಗಾಂಧಿ ಹೇಳಿದರು.

ಚಿಕ್ಕೋಡಿ ವಕೀಲರ ಸಂಘಧ 18 ಸ್ಥಾನಗಳಿಗೆ 47 ಜನ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಏ. 2 ರಂದು ನಡೆದು ಸಂಜೆ ನಡೆದ ಮತ ಏಣಿಕೆಯಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆ ಚುನಾವಣೆ ಮೂಲಕ ನಡೆಯಿತು. ಹಿರಿಯ ಕಾರ್ಯಕಾರಿ ಸಮಿತಿ(ಪುರುಷ) ವಿಭಾಗದಿಂದ ಎಸ್.ಎ.ಖೋತ, ಎಸ್.ಆರ್.ಹರಕೆ, ಬಿ.ಆರ್.ಮಠಪತಿ, ವೈ.ಎಸ್.ಘಟ್ಟಿ, ಎಸ್.ಬಿ.ಖೋತ ಹಾಗೂ ಹಿರಿಯ ಕಾರ್ಯಕಾರಿ ಸಮಿತಿ(ಮಹಿಳೆ) ವಿಭಾಗದಿಂದ ಎ.ಎ.ಚೌಗಲೆ, ಎಂ.ವಿ.ಪಾಟೀಲ, ಯು.ಎ.ಭಂಡಾರಕರ, ಕಿರಿಯ ಕಾರ್ಯಕಾರಿ ಸಮಿತಿ(ಪುರುಷ) ವಿಭಾಗದಿಂದ ಅಜೀತ ಹಿರೇಕೋಡಿ, ಎಸ್.ಆರ್.ಲೈಂದರ್,ಮಹಾದೇವ ಪಾಟೀಲ, ರಮೇಶ ಕಾಳನ್ನವರ, ಮಯೂರ ಅಮಾತೆ ಹಾಗೂ ಕಿರಿಯ ಕಾರ್ಯಕಾರಿ ಸಮಿತಿ (ಮಹಿಳೆ) ವಿಭಾಗದಿಂದ ಜೆ.ಎಸ್.ವಡವಡೆ, ಆರ್.ಎಂ.ಕರನೂರೆ ಆಯ್ಕೆಯಾಗಿದ್ದಾರೆ. ಖಜಾಂಜಿ(ಮಹಿಳೆ)ಸ್ಥಾನಕ್ಕೆ ವೈಜುಷ ಅಡಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ: ಕಲ್ಮೇಶ ಕಿವಡ

ಚಿಕ್ಕೋಡಿ: ವಕೀಲರ ಸಂಘದ ನೂತನ ಕಟ್ಟಡ ಕೆಲಸ ಹಾಗೂ ಹೊಸ ನ್ಯಾಯಾಲಯ ಕಟ್ಟಡಗಳ ಕೆಲಸ ಅಂತಿಮ ಹಂತದಲ್ಲಿದ್ದು, ಅವುಗಳನ್ನು ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರುಗಳ ವಿಶ್ವಾಸದಿಂದ ಪೂರ್ಣಗೊಳಿಸಲು ಪ್ರಾಮಾಣಿವಾಗಿ ಪ್ರಯತ್ನಿಸುವುದಾಗಿ 5ನೇ ಬಾರಿಗೆ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕಲ್ಮೇಶ ಕಿವಡ ಭರವಸೆ ನೀಡಿದರು.ಗುರುವಾರ ಸಂಘದ ಸಭಾಭವನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಎಂಬುವುದು ಸೋಲು, ಗೆಲುವಿನ ಮೆಟ್ಟಿಲೆಂದು ತಿಳಿದು ಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಪ್ರಧಾನ ಕಾರ್ಯದರ್ಶಿಯಾಗಿ ಪ್ರಥಮ ಬಾರಿಗೆ ಆಯ್ಕೆಯಾದ ರಮೇಶ ಹಿತ್ತಲಮನಿ ಮಾತನಾಡಿ, ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲ ಹಿರಿಯ, ಕಿರಿಯ ನ್ಯಾಯವಾದಿಗಳಿಗೆ ಅಭಿನಂದನೆ ಸಲ್ಲಿಸಿ ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ತಿಳಿಸಿದರು.

ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನ್ಯಾಯವಾದಿ ಎಂ.ಬಿ.ಪಾಟೀಲ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...