ಕನ್ನಡ ನೆಲದಲ್ಲಿ ಕಮಲ್ ಹಾಸನ್ ಸಿನಿಮಾ ಬಿಡುಗಡೆ ಬೇಡ

KannadaprabhaNewsNetwork |  
Published : Jun 04, 2025, 01:26 AM IST
ಚಿತ್ರ ೧ (ಬಿ.ಎಲ್.ಆರ್.ಪಿ)ಕನ್ನಡದ ಬಗ್ಗೆ ವಿವಾದದ ಹೇಳಿಕೆ ನೀಡಿದ ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ವಿರುದ್ದ ಬೇಲೂರು ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು . | Kannada Prabha

ಸಾರಾಂಶ

ಕನ್ನಡದ ಬಗ್ಗೆ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ನೀಡಿದ ಹೇಳಿಕೆ ಕನ್ನಡಿಗರಿಗೆ ನೋವುಂಟು ಮಾಡಿದ್ದು, ಕಮಲ್ ಹಾಸನ್‌ ನಟಿಸಿದ ಚಿತ್ರವನ್ನು ಕನ್ನಡದ ನೆಲದಲ್ಲಿ ಬಿಡುಗಡೆ ಮಾಡಬಾರದು. ಒಂದು ವೇಳೆ ಚಿತ್ರಮಂದಿರದ ಮಾಲೀಕರು ಬಿಡುಗಡೆಗೊಳಿಸಿದರೆ ಅಂತಹ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಘಟಕದ ಅಧ್ಯಕ್ಷ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಕನ್ನಡದ ಬಗ್ಗೆ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ನೀಡಿದ ಹೇಳಿಕೆ ಕನ್ನಡಿಗರಿಗೆ ನೋವುಂಟು ಮಾಡಿದ್ದು, ಕಮಲ್ ಹಾಸನ್‌ ನಟಿಸಿದ ಚಿತ್ರವನ್ನು ಕನ್ನಡದ ನೆಲದಲ್ಲಿ ಬಿಡುಗಡೆ ಮಾಡಬಾರದು. ಒಂದು ವೇಳೆ ಚಿತ್ರಮಂದಿರದ ಮಾಲೀಕರು ಬಿಡುಗಡೆಗೊಳಿಸಿದರೆ ಅಂತಹ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಘಟಕದ ಅಧ್ಯಕ್ಷ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿ ಮಾತನಾಡಿ ಅತ್ಯಂತ ಪ್ರಾಚೀನ ಲಿಪಿಯನ್ನು ಹೊಂದಿರುವ ಕನ್ನಡಕ್ಕೆ ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ಇದಕ್ಕೆ ಕಾರಣ ಸಾವಿರಾರು ವರ್ಷದ ಗತ ಭಾಷೆ ಎಂಬ ಲಿಖಿತ ಶಾಸನ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಲಭ್ಯವಾಗಿದೆ. ಅಲ್ಲದೆ ಕನ್ನಡ ಭಾಷೆಗೆ ಈಗಾಗಲೇ ಎಂಟು ಜ್ಞಾನಪೀಠ ಪ್ರಶಸ್ತಿ ಮತ್ತು ಇತ್ತೀಚಿಗೆ ಬೂಕರ್ ಪ್ರಶಸ್ತಿ ಕೂಡ ಸಿಕ್ಕಿದೆ. ಆದರೆ ಒಬ್ಬ ತಮಿಳುನಟ ತನ್ನ ಚಿತ್ರವನ್ನು ಅನಾವರಣ ಮಾಡುವ ಸಂದರ್ಭದಲ್ಲಿ ಕನ್ನಡ ಭಾಷೆ ತಮಿಳಿನಲ್ಲಿ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಏಳು ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾನೆ. ಇಂತಹ ಕಮಲ್‌ ಹಾಸನ್ ತಾನು ನಟಿಸಿದ ಥಗ್ ಲೈಫ್‌ ಎಂಬ ಚಿತ್ರವನ್ನು ಕನ್ನಡ ನಾಡಿನಲ್ಲಿ ಬಿಡುಗಡೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇಲ್ಲಿನ ಕನ್ನಡ ಪರ ಹೋರಾಟಗಾರ ಭಯದಿಂದ ನ್ಯಾಯಾಲಯದ ಮೆಟ್ಟಿಲು ಏರಿದ್ದಾನೆ. ಯಾವ ಕಾರಣಕ್ಕೂ ಆತನ ನಟನೆಯ ಚಿತ್ರ ಬಿಡುಗಡೆ ಮಾಡಬಾರದು. ಅಲ್ಲದೆ ಕಮಲ್ ಹಾಸನ ಒಟ್ಟು ಚಿತ್ರಗಳನ್ನು ಕನ್ನಡ ನಾಡಿನಲ್ಲಿ ಬಹಿಷ್ಕರಿಸಲಾಗಿದೆ. ಇದನ್ನು ಮೀರಿ ನಡೆದುಕೊಂಡರೆ ಅಂತಹ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ರುದ್ರೇಶ್, ಗೌರವಾಧ್ಯಕ್ಷ ಧರ್ಮೇಗೌಡ, ಸಂಘಟನಾ ಕಾರ್ಯದರ್ಶಿ ರಂಜಿತಾ, ಕಾರ್ಯದರ್ಶಿ ಸುರೇಶ್, ಸುಬ್ರಮಣ್ಯ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ