ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೂಮಿಪೂಜೆ

KannadaprabhaNewsNetwork |  
Published : Jun 22, 2025, 11:48 PM IST
22ಎಚ್ಎಸ್ಎನ್3: ನುಗ್ಗೇಹಳ್ಳಿ ಹೋಬಳಿಯ ಎಂ ಹೊನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ  ನೂತನ ದೇವಾಲಯ ನಿರ್ಮಾಣಕ್ಕೆ ಶಾಸಕ ಸಿಎನ್ ಬಾಲಕೃಷ್ಣ ರವರು ಭಾನುವಾರ  ಭೂಮಿ ಪೂಜೆ ನೆರವೇರಿಸಿದರು.ಗ್ರಾಪಂ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ರಾಧಾ ಪಾಪೇಗೌಡ, ಗ್ರಾಮದ ಹಿರಿಯರಾದ  ಅಣ್ಣೇಗೌಡ, ಮಾಜಿ ಜಿಪಂ ಸದಸ್ಯರಾದ ಎಂ ಕೆ ಮಂಜೇಗೌಡ, ಸವಿತಾ ಅಶೋಕ್, ಮಾಜಿ ತಾಪಂ ಸದಸ್ಯ  ದೇವೇಗೌಡ, ಕೃಷಿ ಪತ್ತಿನ ನಿರ್ದೇಶಕ  ಪಾಪೇಗೌಡ, ಬೆಂಗಳೂರು ಬಳಗದ ಅಧ್ಯಕ್ಷ ಮಂಜೇಗೌಡ್ರು ಜೊತೆಯಿದ್ದರು. | Kannada Prabha

ಸಾರಾಂಶ

ಎಂ ಹೊನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯ ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಹಳೆಯ ದೇವಾಲಯವಾಗಿರುವ ಕಾರಣ ಪುನರ್‌ ಪ್ರತಿಷ್ಠಾಪನೆಗಾಗಿ ಗ್ರಾಮಸ್ಥರು ನೂತನ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸದ್ಯ ದೇವಾಲಯದ ಭೂಮಿಪೂಜೆ ದಿನದಂದು ಸುಮಾರು 1 ಲಕ್ಷ ರು. ಹಣವನ್ನು ವೈಯಕ್ತಿಕವಾಗಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಎಂ ಹೊನ್ನೇನಹಳ್ಳಿ ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯವನ್ನು ಸುಮಾರು 1 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಎಂ ಹೊನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯ ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಹಳೆಯ ದೇವಾಲಯವಾಗಿರುವ ಕಾರಣ ಪುನರ್‌ ಪ್ರತಿಷ್ಠಾಪನೆಗಾಗಿ ಗ್ರಾಮಸ್ಥರು ನೂತನ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸದ್ಯ ದೇವಾಲಯದ ಭೂಮಿಪೂಜೆ ದಿನದಂದು ಸುಮಾರು 1 ಲಕ್ಷ ರು. ಹಣವನ್ನು ವೈಯಕ್ತಿಕವಾಗಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಭರವಸೆ ನೀಡಿದರು.ಗ್ರಾಮದಲ್ಲಿ ರಸ್ತೆ ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಈಗಾಗಲೇ ಹೆಚ್ಚಿನ ಅನುದಾನ ನೀಡಲಾಗಿದೆ. ತೋಟಿ ಏತ ನೀರಾವರಿ ಪೂರ್ಣಗೊಂಡ ನಂತರ ಈ ಭಾಗದ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗುತ್ತದೆ. ನೂತನ ದೇವಾಲಯ ನಿರ್ಮಾಣಕ್ಕೆ ದಾನಿಗಳು ಹಾಗೂ ಭಕ್ತರು ಹೆಚ್ಚಿನ ಧನಸಹಾಯ ಮಾಡುವ ಮೂಲಕ ದೇವಾಲಯ ಬೇಗ ಪೂರ್ಣಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ರಾಧಾ ಪಾಪೇಗೌಡ, ಗ್ರಾಮದ ಹಿರಿಯರಾದ ಅಣ್ಣೇಗೌಡ, ಮಾಜಿ ಜಿಪಂ ಸದಸ್ಯರಾದ ಎಂ ಕೆ ಮಂಜೇಗೌಡ, ಸವಿತಾ ಅಶೋಕ್, ಮಾಜಿ ತಾಪಂ ಸದಸ್ಯ ದೇವೇಗೌಡ, ಕೃಷಿ ಪತ್ತಿನ ನಿರ್ದೇಶಕ ಪಾಪೇಗೌಡ, ಬೆಂಗಳೂರು ಬಳಗದ ಅಧ್ಯಕ್ಷ ಮಂಜೇಗೌಡ್ರು, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್, ಮನೋಜ್, ಬಸವರಾಜ್, ಮಂಜೇಗೌಡ, ಶಿವರಾಂ, ಬಸವರಾಜು ಎಂ, ಶಿವೇಗೌಡ, ಆನಂದ್, ಸ್ವಾಮಿ, ಡೇರಿ ಅಧ್ಯಕ್ಷೆ ರತ್ನಮ್ಮ ಮಂಜೇಗೌಡ, ಸಿದ್ದಲಿಂಗ ಸ್ವಾಮಿ, ಜೆಸಿಬಿ ಮಂಜೇಗೌಡ, ದೇವೇಗೌಡ, ಕೆಎಸ್‌ಆರ್‌ಟಿಸಿ ಕೃಷ್ಣೆಗೌಡ್ರು, ಮಂಜೇಗೌಡ ಆಪೆ, ಪುನೀತ್, ಧನಂಜಯ್, ಆನಂದ್, ಜೆಡಿಎಸ್ ಯುವ ಮುಖಂಡ ಮನೋಜ್, ಅರುವೇ ಗೌಡ, ಜಗದೀಶ್, ದಿನೇಶ್, ಜಗ, ಶಿವಕುಮಾರ್, ಲಕ್ಷ್ಮಿ ಗೌಡ , ನಟರಾಜ್, ಶಿವೇಗೌಡ, ವಾಟರ್‌ ಮ್ಯಾನ್ ಬಸವರಾಜ್, ಪುಟ್ಟಸ್ವಾಮಿ, ಚೆಲುವಯ್ಯ, ಮಂಜು, ಸೇರಿದಂತೆ ಅನೇಕರು ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ