ಮೈಸೂರಿನಲ್ಲಿ ಕಂಬಳ ತಪ್ಪಲ್ಲ: ನಳಿನ್‌ ಕುಮಾರ್

KannadaprabhaNewsNetwork |  
Published : Oct 08, 2026, 02:30 AM IST
ನಳಿನ್  | Kannada Prabha

ಸಾರಾಂಶ

ಮೈಸೂರಿನಲ್ಲಿ ಕಂಬಳ ಮಾಡುವುದು ತಪ್ಪಲ್ಲ. ಕಂಬಳ ಒಂದು ಜನಪದೀಯ ಕ್ರೀಡೆ. ಕರಾವಳಿ ಪ್ರದೇಶ ರಾಜ್ಯದಿಂದ ಹೊರತಾಗಿಲ್ಲ. ನಮ್ಮ ಕಂಬಳ ಮೂರು ರೀತಿ ನಡೆಯುತ್ತದೆ, ಒಂದು ದೇವರ ಕಂಬಳ, ಮತ್ತೊಂದು ದೈವದ ಕಂಬಳ, ಪಾರಂಪರಿಕ ಕಂಬಳ. ಅಂದರೆ ಆರಾಧನೆ ಜೊತೆಗೆ ಕಂಬಳ ಇದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಡಿಕೇರಿ : ಮೈಸೂರಿನಲ್ಲಿ ಕಂಬಳ ಮಾಡುವುದು ತಪ್ಪಲ್ಲ. ಕಂಬಳ ಒಂದು ಜನಪದೀಯ ಕ್ರೀಡೆ. ಕರಾವಳಿ ಪ್ರದೇಶ ರಾಜ್ಯದಿಂದ ಹೊರತಾಗಿಲ್ಲ. ನಮ್ಮ ಕಂಬಳ ಮೂರು ರೀತಿ ನಡೆಯುತ್ತದೆ, ಒಂದು ದೇವರ ಕಂಬಳ, ಮತ್ತೊಂದು ದೈವದ ಕಂಬಳ, ಪಾರಂಪರಿಕ ಕಂಬಳ. ಅಂದರೆ ಆರಾಧನೆ ಜೊತೆಗೆ ಕಂಬಳ ಇದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ದಸರಾ ಆರಾಧನೆ ಜೊತೆಗೆ ಇದೆ. ಹಾಗಾಗಿ ಕಂಬಳವನ್ನು ಮೈಸೂರು ಜನತೆಯೊಂದಿಗೆ ಜೋಡಿಸಬೇಕು, ತೋರಿಸಬೇಕು ಎನ್ನುವುದು ತಪ್ಪಲ್ಲ. ಹೊಸದಾಗಿ ಬಂದಾಗ ವಿರೋಧ ವ್ಯಕ್ತವಾಗುವುದು ಸಹಜ ಎಂದರು.ಮೈಸೂರು ಒಡೆಯರ್ ಕಾಲದಿಂದಲೂ ಎಲ್ಲಾ ಪಾರಂಪರಿಕ ಕಾರ್ಯಗಳಿಗೆ ಅವಕಾಶ ಕೊಟ್ಟಿದ್ದಾರೆ. ಮೈಸೂರು ದಸರಾ ಖ್ಯಾತಿ ಆಗಿರುವುದು ಕೇವಲ ಮೈಸೂರು ತೋರಿಸುವುದರಿಂದ ಅಲ್ಲ, ಬದಲಾಗಿ ಇಡೀ ರಾಜ್ಯದ ಎಲ್ಲಾ ಕಲೆ ಸಂಸ್ಕೃತಿಗಳನ್ನು ತೋರಿಸುವುದರಿಂದ. ಹಾಗಾಗಿ ಕರಾವಳಿಯ ಸಂಸ್ಕೃತಿಗೆ ಹಿಂದೆ ಹೇಗೆ ಜನ ಗೌರವ ಪ್ರೀತಿ ಕೊಟ್ಟಿದ್ದಾರೆ, ಈಗಲೂ ಅದೇ ಪ್ರೀತಿ ಗೌರವ ಕೊಡುವ ನಂಬಿಕೆ ಇದೆ ಎಂದರು.ರಾಜ್ಯ ಸರ್ಕಾರ ವಿರುದ್ಧ ಕಿಡಿ:

ಎಸ್ಐಆರ್ ನಲ್ಲಿ ಫಾರಂ-7 ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ನದ್ದು ದ್ವೇಷದ ಆಡಳಿತದ ರಾಜಕಾರಣ. ಕಾರ್ಯಕರ್ತರು ಮಾತ್ರವಲ್ಲ, ಪತ್ರಕರ್ತರು, ಸಾಮಾಜಿಕ ಚಳವಳಿಗಾರರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಬರೆದವರ ಮೇಲೂ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗಿದೆ. ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನೂ ಓಡಿಸಿಕೊಂಡು ಹೋಗಿದ್ದಾರೆ. ಇಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ, ಕೊನೆಗೆ ಎಂಎಲ್ಎಗಳಿಗೂ ರಕ್ಷಣೆ ಇಲ್ಲದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದರು.ಆಗ ಎಲ್ಲಿದ್ದರು: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಅಸಂವಿಧಾನಿಕ ಎಂದು ಹೇಳಿದರು.

ಕಾಂಗ್ರೆಸ್, ರಾಹುಲ್ ಗಾಂಧಿ ಪ್ರತಿಭಟನೆ ಅಸಂವಿಧಾನಿಕ. ಚಳವಳಿ, ಮಾತು ಅವೆಲ್ಲವೂ ನಿರಂತರವಾಗಿರುತ್ತವೆ, ಆದರೆ ಅವರು ಸಾಂವಿಧಾನಿಕವಾಗಿ ಹೋರಾಡುವುದಿಲ್ಲ ಎಂದರು.ಚುನಾವಣಾ ಆಯುಕ್ತರ ನೇಮಕವಾಗುವಾಗ ವಿರೋಧ ಪಕ್ಷದ ನಾಯಕರು ಇರುತ್ತಾರೆ. ಯಾವುದೋ ಒಂದು ಪಕ್ಷ ಚುನಾವಣಾ ಆಯುಕ್ತರ ನೇಮಕ ಮಾಡುವುದಿಲ್ಲ. ಅಂತಹ ಗೊಂದಲಗಳಿದ್ದರೆ ಅಧಿವೇಶನ ನಡೆದಾಗ ನೀವು ಚರ್ಚೆ ಮಾಡಿ, ಅದು ಬಿಟ್ಟು ರಸ್ತೆಗೆ ಇಳಿದು ಪ್ರತಿಭಟಿಸುವುದು ಸರಿಯಲ್ಲ.ಇದು ಪ್ರಧಾನಿ ಮೋದಿಯವರನ್ನು ಮಣಿಸಲು ಮಾಡುತ್ತಿರುವ ಹಲವು ತಂತ್ರಗಳಲ್ಲಿ ಇದು ಒಂದು ಎಂದು ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್ ಲೋಪ: ರಾಷ್ಟ್ರಪತಿಗೆ ಇಂಡಿಯಾ ಒಕ್ಕೂಟ ಮನವಿ
ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್