ಯಶವಂತಪುರ-ಮಡ್ಗಾಂವ್‌ ವಂದೇ ಭಾರತ್‌ ಮಂಗಳೂರು ಸೆಂಟ್ರಲ್‌ಗೆ ಬರಲಿ: ಪಿ.ವಿ.ಮೋಹನ್ ಆಗ್ರಹ

KannadaprabhaNewsNetwork |  
Published : Oct 08, 2026, 02:30 AM IST
ಪಿ.ವಿ.ಮೋಹನ್‌  | Kannada Prabha

ಸಾರಾಂಶ

ಪ್ರಸ್ತಾವಿತ ಯಶವಂತಪುರ-ಮಂಗಳೂರು-ಮಡ್ಗಾಂವ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಂದುಹೋಗುವಂತೆ ವಿಧಾನ ಪರಿಷತ್‌ ಸದಸ್ಯ ಪಿ.ವಿ.ಮೋಹನ್‌ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಮಂಗಳೂರು: ಪ್ರಸ್ತಾವಿತ ಯಶವಂತಪುರ-ಮಂಗಳೂರು-ಮಡ್ಗಾಂವ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಂದುಹೋಗುವಂತೆ ವಿಧಾನ ಪರಿಷತ್‌ ಸದಸ್ಯ ಪಿ.ವಿ.ಮೋಹನ್‌ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಮಂಗಳೂರು-ಮಡ್ಗಾಂವ್‌ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸುವುದರಿಂದ ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ಸಂಪರ್ಕ ಮತ್ತಷ್ಟು ಬಲಪಡಲಿದೆ. ಆದರೆ ಈ ವಿಸ್ತರಣೆಯ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಪ್ರವೇಶಿಸಿದರೆ ರೈಲು ಸಂಚಾರಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಮಂಗಳೂರು ಸೆಂಟ್ರಲ್ ಮೂಲಕ ಯಶವಂತಪುರದವರೆಗೆ ವಂದೇ ಭಾರತ್ ರೈಲನ್ನು ಸಂಚರಿಸುವ ಸಾಧ್ಯತೆಯನ್ನು ಈಗಾಗಲೇ ರೈಲ್ವೆ ಇಲಾಖೆ ಪರೀಕ್ಷಿಸಿದೆ. ಮಂಗಳೂರು ಸೆಂಟ್ರಲ್‌ನಲ್ಲಿ ನಿಲುಗಡೆ ನೀಡುವುದರಿಂದ ಕೇರಳ ಹಾಗೂ ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಬರುವ ಪ್ರಯಾಣಿಕರು ಮಂಗಳೂರು ಸೆಂಟ್ರಲ್‌ನಲ್ಲಿಯೇ ರೈಲು ಬದಲಾಯಿಸಿಕೊಂಡು ಬೆಂಗಳೂರು ಹಾಗೂ ಗೋವಾ ಕಡೆಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದರಿಂದ ಪ್ರಯಾಣಿಕರ ಅನುಕೂಲ ಹೆಚ್ಚುವುದರ ಜೊತೆಗೆ ವಂದೇ ಭಾರತ್ ಸೇವೆಯ ಪ್ರಯಾಣಿಕರ ಸಂಖ್ಯೆ ಮತ್ತು ವಾಣಿಜ್ಯಿಕವಾಗಿ ಅದರ ಕಾರ್ಯಸಾಧ್ಯತೆಯೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್ ಲೋಪ: ರಾಷ್ಟ್ರಪತಿಗೆ ಇಂಡಿಯಾ ಒಕ್ಕೂಟ ಮನವಿ
ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್