- ತಾಲೂಕು ಕಚೇರಿಯಲ್ಲಿ ಕನಕದಾಸರ ಜಯಂತಿ, ಒನಕೆ ಓಬವ್ವ ಜಯಂತಿ
ಕನಕದಾಸರು ಹಾಗೂ ಪುರಂದರದಾಸರು ದಾಸ ಪರಂಪರೆ ದೃವ ತಾರೆಯರು ಎಂದು ಗಾಯಕ ಹಿರೇನಲ್ಲೂರು ಶ್ರೀನಿವಾಸ್ ವರ್ಣಿಸಿದರು.
ತಾಲೂಕು ಕಚೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಒನಕೆ ಓಬವ್ವ ಹಾಗೂ ಕನಕದಾಸರ ಜಯಂತಿಯಲ್ಲಿ ಕನಕದಾಸರ ಗಾಯನದೊಂದಿಗೆ ಉಪನ್ಯಾಸ ನೀಡಿದರು. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂಬುದು ಕೃತಿ ಕನಕ ದಾಸರ ಶ್ರೇಷ್ಠ ಕೃತಿ. ಕನಕರು ಕೇವಲ ದಾಸ ಸಾಹಿತ್ಯಕ್ಕೆ ಸೀಮಿತರಾಗಿರದೆ 12 ನೇ ಶತಮಾನದಲ್ಲಿ ವಚನಕಾರರು ಬರೆದಂತೆ ಸಮಾನತೆ, ಸಮಾಜದಲ್ಲಿ ಶೋಷಣೆ, ಜಾತೀಯತೆ ವಿರುದ್ಧವೂ ದಾಸ ಸಾಹಿತ್ಯದಲ್ಲಿ ಬರೆದು ಹಾಡಿದ್ದರು. ಇತಿಹಾಸದಲ್ಲಿ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ ಇತ್ತು. ದೇವರನ್ನು ಸಹ ಮೇಲು ವರ್ಗ ದವರಿಗೆ ಬೇರೆ ದೇವರು, ಕೆಳ ಜಾತಿಯವರಿಗೆ ಬೇರೆ ದೇವರು ಎಂದು ವಿಂಗಡಿಸಲಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.ಅತಿಥಿಯಾಗಿದ್ದ ಕುರುಬ ಸಮಾಜದ ತಾಲೂಕು ಅಧ್ಯಕ್ಷ ಜಿ.ಪುರುಶೋತ್ತಮ್ ಮಾತನಾಡಿ ಕುರುಬ ಸಮಾಜದವರನ್ನು ಒಂದು ಗೂಡಿಸಬೇಕಾಗಿದೆ. ತಾಲೂಕಿನಲ್ಲಿ 26 ಕುರುಬ ಸಮಾಜದ ಕುಟುಂಬಗಳಿವೆ. ಕನಕದಾಸರು 1500 ವರ್ಷಗಳ ಹಿಂದೆ ಉಡುಪಿ ಮಠಕ್ಕೆ ಬಂದಾಗ ಶ್ರೀ ಕೃಷ್ಣನ ದರ್ಶನಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ರೀ ಕೃಷ್ಣನೇ ತಿರುಗಿ ನಿಂತು ಕನಕ ದಾಸರಿಗೆ ದರ್ಶನ ನೀಡಿರುವುದು ಇತಿಹಾಸ ಎಂದರು.
ಸಭೆ ಅಧ್ಯಕ್ಷತೆಯನ್ನು ತಹಸೀಲ್ದಾರ್ ಡಾ.ನೂರಲ್ ಹುದಾ ವಹಿಸಿದ್ದರು. ಚೆಲುವಾದಿ ಮಹಾ ಸಭಾದ ಕ್ಷೇತ್ರ ಅಧ್ಯಕ್ಷ ಡಿ. ರಾಮು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮನೀಶ್ಇ, ನಿಶ್ಚಿತ ಇದ್ದರು.